ದಕ್ಷಿಣ ಕನ್ನಡ: (Mobile Phone blocking system) ಇತ್ತೀಚಿನ ದಿನಗಳಲ್ಲಿ ಕಳವಾದ/ ಕಾಣೆಯಾದ/ ಸುಲಿಗೆಯಾದ ಮೊಬೈಲ್ ಫೋನ್ ಗಳು ಸೈಬರ್ ಅಪರಾಧ ನಾರ್ಕೋಟಿಕ್ಸ್ ಅಪರಾಧ ಸೇರಿದಂತೆ ಇತರ ಗಂಭೀರ ಅಪರಾದಗಳಲ್ಲಿ ಬಳಕೆಯಾಗುತ್ತಿರುವುದು ಗಣನೀಯವಾಗಿ ಕಂಡುಬಂದಿರುತ್ತದೆ. ಇಂತಹ ಮೊಬೈಲ್ ಫೋನ್ ಗಳ ದುರ್ಬಳಕೆಯನ್ನು ತಡೆಗಟ್ಟಲು ಕೇಂದ್ರ ಟೆಲಿಕಮ್ಯೂನಿಕೇಷನ್ ಇಲಾಖೆಯಿಂದ ಕಳವಾದ/ ಕಾಣೆಯಾದ/ಸುಲಿಗೆಯಾದ ಮೊಬೈಲ್ ಫೋನ್ಗಳನ್ನು ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಪೊಲೀಸ್ ಇಲಾಖೆಯಿಂದ ಕೂಡಾ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ.
ಈ ಕೆಳಕಂಡ ವಿಧಾನಗಳನ್ನು ಅನುಸರಿಸುವುದರ ಮೂಲಕ ಕಳವಾದ/ಕಾಣೆಯಾದ/ ಸುಲಿಗೆಯಾದ ಮೊಬೈಲ್ ಫೋನ್ ಗಳನ್ನು ಬ್ಲಾಕ್ ಮಾಡಬಹುದಾಗಿದೆ.

- ನಿಮ್ಮ ಮೊಬೈಲ್ ಫೋನ್ ಕಳವು/ ಕಾಣೆಯಾದರೆ/ ಸುಲಿಗೆಯಾದರೆ ತಾವು ತಕ್ಷಣವೇ KSP E-Lost (ಕೆಎಸ್‌ಪಿ ಇ-ಲೋಸ್ಟ್) ಅಪ್ಲಿಕೇಶನ್ ನಲ್ಲಿ ದೂರನ್ನು ಸಲ್ಲಿಸಿ Digital E Acknowledgement (ಡಿಜಿಟಲ್ ಇ ಅಕ್ನೋಲೆಡ್ಜ್ ಮೆಂಟ್) ಪಡೆದುಕೊಳ್ಳಬೇಕು ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಸಲ್ಲಿಸಿ ಸ್ವೀ ಕೃತಿಯನ್ನು ಪಡೆದುಕೊಳ್ಳಬೇಕು. ಸ್ವೀಕೃತಿಯ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು.
- ನೀವು ಕಳೆದುಕೊಂಡಿರುವ ಸಿಮ್ ಕಾರ್ಡ್ ಅನ್ನು ಸಂಬಂಧಪಟ್ಟ ಸರ್ವಿಸ್ ಪ್ರೊವೈಡರ್ ನಿಂದ ಮತ್ತೆ ಪಡೆದುಕೊಂಡು ಒಟಿಪಿ ಪಡೆಯಲು ಸದರಿ ಸಿಮ್ ಕಾರ್ಡನ್ನು ಚಾಲನಯಲ್ಲಿ ಇಟ್ಟುಕೊಳ್ಳುವುದು, CEIR PORTAL (ಸಿಇಐಆರ್ ಪೋರ್ಟಲ್) ನಲ್ಲಿ ಒಟಿಪಿ ಪಡೆಯಲು ಇದು ಅನುಕೂಲವಾಗುತ್ತದೆ.
- www.ceir.govt.in ವೆಬ್ ಸೈಟ್ ಗೆ ಹೋಗಿ ತಮ್ಮ ಕಳವಾದ/ ಕಾಣೆಯಾದ/ ಸುಲಿಗೆಯಾದ ಮೊಬೈಲ್ ಫೋನ್ ಗಳ ಮಾಹಿತಿಯನ್ನು ನಮೂದಿಸಬೇಕು. ಸದರಿ ಮಾಹಿತಿ ನಮೂದಿಸಿದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ತಮ್ಮ ಮೊಬೈಲ್ ಬ್ಲಾಕ್ ಆಗುತ್ತದೆ. ನಂತರ ಯಾರೂ ಕೂಡಾ ಆ ಮೊಬೈಲ್ ಅನ್ನು ದುರ್ಬಳಕೆ ಮಾಡಲು ಸಾಧ್ಯವಿರುವುದಿಲ್ಲ.
- ಕಳುವಾದ/ಕಾಣೆಯಾದ/ ಸುಲಿಗೆಯಾದ/ ಮೊಬೈಲ್ ಫೋನೆ ಪತ್ತೆಯಾದರೆ ಈಗಾಗಲೇ ತಿಳಿಸಿರುವ CEIR PORTAL (ಸಿಇಐಆರ್ ಪೋರ್ಟಲ್) ನಲ್ಲಿ ಲಾಗಿನ್ ಆಗಿ ಅನ್ ಬ್ಲಾಕ್ ಮಾಡಿ ಉಪಯೋಗಿಸಬಹುದು.
- ಹಾಗೆಯೇ ಸಾರ್ಜನಿಕರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೆ CEIR PORTAL (ಸಿಇಐಆರ್ ಪೋರ್ಟಲ್) ಮೂಲಕ ಕಳುವಾದ/ ಕಾಣೆಯಾದ/ ಸುಲಿಗೆಯಾದ ಮೊಬೈಲ್ ಫೋನ್ ಅನ್ನು ಬ್ಲಾಕ್ ಮಾಡಲಾಗುವುದು ಹಾಗೂ ಸದರಿ ಮೊಬೈಲ್ ಫೋನ್ ಪತ್ತೆಯಾದ್ಲಲಿ ಅನ್ ಬ್ಲಾಕ್ ಮಾಡಲಾಗುತ್ತದೆ.
ಇದನ್ನೂ ಓದಿ : WhatsApp Latest Feature : ಇನ್ಮುಂದೆ ವಾಟ್ಸಪ್‌ನಲ್ಲಿ ಒರಿಜನಲ್ ಕ್ವಾಲಿಟಿಯಲ್ಲೇ ಫೋಟೋ ಶೇರ್ ಮಾಡಬಹುದು; ಹೇಗೆ ಗೊತ್ತಾ…
Mobile Phone blocking system: New method to block missing mobile phones: Order from Superintendent of Police