Martin Movie Teaser : ನಟ ಧ್ರುವ ಸರ್ಜಾ, ಎಪಿ ಅರ್ಜುನ್ ಕಾಂಬಿನೇಶನ್‌ನ ‘ಮಾರ್ಟಿನ್’ ಟೀಸರ್ ಡೇಟ್‌ ಫಿಕ್ಸ್‌

ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿಯನ್ನು ಪಡೆದಿರುವ ನಟ ಧ್ರುವ ಸರ್ಜಾ ನಟನೆಯ ಮುಂದಿನ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್ ಕುರಿತಾದ ಮೆಗಾ ಅಪ್‌ಡೇಟ್ ಒಂದು ಹೊರಬಿದ್ದಿದೆ. ಸಿನಿತಂಡ ತಮ್ಮ ಸಿನಿಮಾದ ಟೀಸರ್ ( Martin Movie Teaser) ಅನ್ನು ಇದೇ ತಿಂಗಳ 23ರಂದು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ.

ಹೌದು, ಮಾರ್ಟಿನ್ ಸಿನಿಮಾದ ಟೀಸರ್ ಇದೇ ತಿಂಗಳ 23ರಂದು ಯುಟ್ಯೂಬ್‌ನಲ್ಲಿ ಬಿಡುಗಡೆಗೊಳ್ಳಲಿದೆ. ಎಪಿ ಅರ್ಜುನ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಇಂಡಿಯಾದ ಬಿಗ್ಗೆಸ್ಟ್ ಆಕ್ಷನ್ ಸಿನಿಮಾ ಎಂದು ಹೇಳಿಕೊಳ್ಳುತ್ತಿದೆ ಸಿನಿತಂಡ. ಈಗಾಗಲೇ ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳು ಹೆಚ್ಚಾಗಿ ಇರಲಿದೆ ಎಂದು ಸಿನಿತಂಡ ಹೇಳಿಕೊಂಡಿದ್ದು, ಸಿನಿತಂಡ ಈಗಾಗಲೇ ಹಂಚಿಕೊಂಡಿರುವ ಸಿನಿಮಾದ ಪೋಸ್ಟರ್‌ಗಳಲ್ಲೂ ಸಹ ಧ್ರುವ ಸರ್ಜಾರ ಆಕ್ಷನ್ ದೃಶ್ಯದ ಲುಕ್‌ಗಳೇ ಹೆಚ್ಚಾಗಿವೆ.

ಇದನ್ನೂ ಓದಿ : ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಂದ ಆಫರ್ ಇದೆ : ಆದ್ರೆ ಫ್ಯಾನ್ಸ್ ಪಕ್ಷಕ್ಕೆ ನನ್ನ ಬೆಂಬಲ ಎಂದ ಕಿಚ್ಚ ಸುದೀಪ್

ಇದನ್ನೂ ಓದಿ : Former MP Ramya : ಚನ್ನಪಟ್ಟಣದಿಂದ ಮಾಜಿ ಸಂಸದೆ ರಮ್ಯಾ ಸ್ಪರ್ಧೆ ಮಾಡಲ್ಲ” ಎಂದ ಸಂಸದ ಡಿ.ಕೆ.ಸುರೇಶ್

ಇದನ್ನೂ ಓದಿ : Sudeep invited by Ramya: ರಾಜಕೀಯಕ್ಕೆ ನಟ ಸುದೀಪ್‌ ಎಂಟ್ರಿ: ಕಾಂಗ್ರೆಸ್‌ ಗೆ ಬರುವಂತೆ ರಮ್ಯಾ ಮೂಲಕ ಆಹ್ವಾನ?

ಇನ್ನು ಟೀಸರ್ ದಿನಾಂಕ ಘೋಷಿಸಲು ಸಿನಿತಂಡ ಹಂಚಿಕೊಂಡಿರುವ ಪೋಸ್ಟರ್‌ನಲ್ಲೂ ಸಹ ಧ್ರುವ ಸರ್ಜಾ ದೊಡ್ಡ ಗನ್ ಒಂದನ್ನು ಹಿಡಿದು ರಗಡ್ ಆಗಿ ಕಾಣಿಸಿಕೊಂಡಿದ್ದು, ಬ್ಯಾಕ್‌ಗ್ರೌಂಡ್‌ನಲ್ಲಿ ಯುದ್ಧದ ಪ್ಯಾಂಜರ್ ಸಹ ಇದೆ. ಸಿನಿಮಾದಲ್ಲಿ ನಾಯಕಿಯಾಗಿ ಗಾಳಿಪಟ 2 ಸಿನಿಮಾದಲ್ಲಿ ನಟಿಸಿದ್ದ ವೈಭವಿ ಶಾಂಡಿಲ್ಯ ನಟಿಸಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಇತ್ತೀಚೆಗಷ್ಟೆ ಕಬ್ಜ ಸಿನಿಮಾದ ಟೀಸರ್‌ಗೆ ಭರ್ಜರಿ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ನೀಡುವ ಮೂಲಕ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದ ರವಿ ಬಸ್ರೂರು ಮಾರ್ಟಿನ್ ರೀತಿಯ ಕಂಪ್ಲೀಟ್ ಆಕ್ಷನ್ ಸಿನಿಮಾಕ್ಕೂ ಸಹ ಅಂತಹದ್ದೇ ರೋಮಾಂಚನಕಾರಿ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ನೀಡಲಿದ್ದಾರೆ ಎನ್ನಬಹುದಾಗಿದೆ.

ಇದನ್ನೂ ಓದಿ : Love Again Movie Trailer : ಗ್ಲೋಬಲ್‌ ಸ್ಟಾರ್‌ ಆದ ನಟಿ ಪ್ರಿಯಾಂಕ ಚೋಪ್ರಾ : “ಲವ್‌ ಅಗೇನ್‌” ಟ್ರೈಲರ್‌ ರಿಲೀಸ್‌

ಇದನ್ನೂ ಓದಿ : Actress Anushka Shetty : ನಟಿ ಅನುಷ್ಕಾ ಶೆಟ್ಟಿಗೆ ವಿಚಿತ್ರ ಸಮಸ್ಯೆ : ಆ ಬಗ್ಗೆ ಸ್ವೀಟಿ ಹೇಳಿದ್ದಿಷ್ಟು

Martin Movie Teaser Actor Dhruv Sarja, AP Arjun Combination’s ‘Martin’ Teaser Date Fix

Comments are closed.