Moral police : ಮಂಗಳೂರಲ್ಲಿ ಕಾಲೇಜು ಯುವಕ, ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್‌ ಗಿರಿ

ಮಂಗಳೂರು : ಕರಾವಳಿಯಲ್ಲಿ ಮತ್ತೆ ನೈತಿಕ ಪೊಲೀಸ್‌ ಗಿರಿ ( Moral police ) ಸದ್ದು ಮಾಡಿದೆ. ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್‌ ಗಿರಿ ನಡೆಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಗುರು, ಪ್ರಶಾಂತ್‌, ಪ್ರಹ್ಲಾದ್‌, ಸುಖೇಶ್‌, ಪ್ರತೀಶ್‌ ಹಾಗೂ ಭರತ್‌ ಎಂಬವರೇ ಬಂಧಿತ ಆರೋಪಿಗಳು. ಕೇರಳ ಮೂಲದ ಅನ್ಯ ಧರ್ಮದ ಕಾಲೇಜಿನ ಯುವಕ, ಯುವತಿ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆಯಲ್ಲಿ ಅವರಿಬ್ಬರನ್ನು ಹಿಂಬಾಲಿಸಿದ ಯುವಕರ ತಂಡ ಯುವಕನಿಗೆ ಥಳಿಸಿತ್ತು. ಅಲ್ಲದೇ ಯುವತಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಿದ ಯುವತಿ ಮನೆಯನ್ನು ಶಿಫ್ಟ್‌ ಮಾಡುವ ಸಲುವಾಗಿ ಮಹಮ್ಮದ್‌ ಯಾಸೀನ್‌ ಎಂಬಾತನ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆಯಲ್ಲಿ ಘಟನೆ ನಡೆದಿದೆ. ಈ ಕುರಿತು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಸುರತ್ಕಲ್‌ನಲ್ಲಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಲ್ಪೆ ಬೀಚ್‌ಗೆ ತೆರಳುತ್ತಿದ್ದ ಯುವಕ, ಯುವತಿಯರನ್ನು ತಡೆದು ನೈತಿಕ ಪೊಲೀಸ್‌ ಗಿರಿ ನಡೆಸಲು ಯತ್ನಿಸಲಾಗಿತ್ತು. ಈ ಕುರಿತು ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಸುರತ್ಕಲ್‌ನಲ್ಲಿ ಮತ್ತೊಂದು ನೈತಿಕ ಪೊಲೀಸ್‌ ಗಿರಿ ನಡೆಸಿದೆ.

ಇದನ್ನೂ ಓದಿ : ಕರಾವಳಿಯಲ್ಲಿ ಮತ್ತೆ ಸದ್ದು ಮಾಡಿದೆ ನೈತಿಕ ಪೊಲೀಸ್ ಗಿರಿ : ವೈರಲ್ ಆಯ್ತು ವಿಡಿಯೋ

ಇದನ್ನೂ ಓದಿ : Moral Policing : ಮಂಗಳೂರಲ್ಲಿ ಮತ್ತೆ ನೈತಿಕ ಪೊಲೀಸ್‌ ಗಿರಿ : ಪೊಲೀಸರ ಎದುರಲ್ಲೇ ಮೆಡಿಕಲ್‌ ವಿದ್ಯಾರ್ಥಿಗಳ ಮೇಲೆ ಹಲ್ಲೆ

https://www.youtube.com/watch?v=gd4YIM0MPVU

(Moral police pursue college youth and girl in Mangalore)

Comments are closed.