ಕುಂದಾಪುರ : ಠೇವಣಿ ಇರಿಸಿದ್ರೆ 6 ವರ್ಷಗಳಲ್ಲೇ ಹಣವನ್ನು ಡಬ್ಬಲ್ ಮಾಡಿಕೊಡುವುದಾಗಿ ಭರವಸೆ ನೀಡಿ 9 ಲಕ್ಷ ರೂಪಾಯಿ ಹಣವನ್ನು ಡೆಪಾಸಿಟ್ ಇರಿಸಿಕೊಂಡು, ನಂತರ ಹಣ ವಾಪಾಸ್ ನೀಡದೇ ವಂಚಿಸಿರುವ ಕುರಿತು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಮೂರ್ತೆದಾರರ ಸೊಸೈಟಿ (Navunda Murthedarara Seva Sahakari Sangha Deposit) ಯ ವಿರುದ್ದ ಆರೋಪ ಕೇಳಿಬಂದಿದ್ದು, ಸೊಸೈಟಿ ಸೇರಿದಂತೆ ಒಟ್ಟು 16 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ನಿವಾಸಿಯಾಗಿರುವ ಉಮೇಶ್ ಎಂಬವರು ನಾವುಂದ ಮೂರ್ತೆದಾರರ ಸೊಸೈಟಿಯ ಅಧ್ಯಕ್ಷರು ಹಾಗೂ ನಿರ್ದೇಶಕರ ಮಂಡಳಿಯ ಸಲಹೆಯ ಮೇರೆಗೆ 9 ಲಕ್ಷ ರೂಪಾಯಿಯನ್ನು ಆರುವರೆ ವರ್ಷ ಅವಧಿಗೆ ಡೆಪಾಸಿಟ್ ಇಟ್ಟರೆ ಅವಧಿ ಮುಗಿದ ಬಳಿಕ 18 ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರು. ಅದರಂತೆಯೇ ಉಮೇಶ್ ಅವರು 2021 ರ ಜುಲೈ 29 ರಂದು ಸೊಸೈಟಿಯಲ್ಲಿ 9 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿದ್ದರು.
ಇದನ್ನೂ ಓದಿ :ಉಡುಪಿ ಶ್ರೀಕೃಷ್ಣ ಮಠದ ಗೂಗಲ್ ಮ್ಯಾಪ್ ಲೋಕೇಶನ್ ಬದಲಾಯಿಸಿದ ಗೂಗಲ್ ಸಂಸ್ಥೆ
ನಾವುಂದ ಮೂರ್ತೆದಾರರ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿಗಳು ಕಲ್ಪವೃಕ್ಷ ಬಾಂಡ್ ಸಿ ನಂಬರ್ ಇರುವ ದಾಖಲೆಯನ್ನು ನೀಡಿದ್ದರು. ಆದರೆ ಉಮೇಶ್ ಅವರಿಗೆ ಹಣದ ಸಮಸ್ಯೆ ಉಂಟಾದಾಗ ಸೊಸೈಟಿಗೆ ತೆರಳಿ ನಾವು ಡೆಪಾಸಿಟ್ ಇರಿಸಿದ್ದ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದಾರೆ. ಆದರೆ ಈ ವೇಳೆಯಲ್ಲಿ ಸೊಸೈಟಿಯವರು ಹಣ ನೀಡಲು ನಿರಾಕರಿಸಿದ್ದಾರೆ. ಸೊಸೈಟಯಲ್ಲಿ ನೀವು 9 ಲಕ್ಷ ರೂಪಾಯಿ ಹಣವನ್ನು ನೀವು ಜಮೆ ಮಾಡಿಲ್ಲ. ಸಿಸಿ ಬಾಂಡ್‌ಗೂ ಸೊಸೈಟಿಗೂ ಯಾವುದೇ ಸಂಬಂಧವಿಲ್ಲ, ನಿಮ್ಮ ಹಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಹಿಂಬರಹವನ್ನು ನೀಡಿದ್ದರು.

ಇದನ್ನೂ ಓದಿ : Suraj Revanna Arrest : ಪ್ರಜ್ವಲ್ ರೇವಣ್ಣ ಬೆನ್ನಲ್ಲೇ, ಸೂರಜ್ ರೇವಣ್ಣ ಬಂಧನ : ಏನಿದು ಪ್ರಕರಣ ?
ಮೂರ್ತೆದಾರರ ಸೊಸೈಟಿಯಿಂದ ತನಗೆ ಅನ್ಯಾಯ ಆಗಿರುವ ಕುರಿತು ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬೈಂದೂರು ಠಾಣೆಯ ಪೊಲೀಸರು ನಾವುಂದ ಮೂರ್ತೆದಾರರ ಸೊಸೈಟಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ನೀಲಾಧರ, ದಿಣೇಶ್, ಮೂರ್ತೆದಾರರ ಸೊಸೈಟಿಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಪ್ರತಿನಿಧಿ ವಿರುದ್ದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಉಡುಪಿಯ ಜಯಲಕ್ಷ್ಮೀ ಸಿಲ್ಕ್ಸ್ ಮಳಿಗೆಯಲ್ಲಿ ಬಂದೂಕಿನಿಂದ ಸಿಡಿದ ಗುಂಡು, ಓರ್ವನಿಗೆ ಗಾಯ
ಮಾತ್ರವಲ್ಲದೇ ವಿಜಯ, ವಿಜಯ ಕುಮಾರ್, ಶಂಕರ, ದೀಪಾ, ಅಣ್ಣಪ್ಪ, ನಾರಾಯಣ, ಬಾಬು, ನಾರಾಯಣ, ವೆಂಕಟೇಶ, ಆನಂದ, ಕೃಷ್ಣ, ಪದ್ದು ಹಾಗೂ ಕವಿತಾ ಅವರ ವಿರುದ್ದವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೂರುದಾರರಿಂದ ಹಣವನ್ನು ಠೇವಣಿ ಇರಿಸಿಕೊಂಡು ಹಣವನ್ನು ಹಿಂದಿರುಗಿಸದೆ ನಂಬಿಸಿ ಮೋಸ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ.
Navunda Murthedarara Seva Sahakari Sangha Deposit fraud: Case registered against 16 people Kundapura News