ಉಡುಪಿ ಶ್ರೀಕೃಷ್ಣ ಮಠದ ಗೂಗಲ್‌ ಮ್ಯಾಪ್‌ ಲೋಕೇಶನ್‌ ಬದಲಾಯಿಸಿದ ಗೂಗಲ್‌ ಸಂಸ್ಥೆ

Google Map : ಉಡುಪಿ : ಪೊಡವಿಗೊಡೆಯನ ಶ್ರೀ ಕೃಷ್ಣ ಮಠಕ್ಕೆ  (Udupi Sri Krishna Mutt) ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಹೀಗೆ ಬರುವ ಭಕ್ತರು ಗೂಗಲ್‌ ಮ್ಯಾಪ್‌ (Google Map)  ಬಳಿಸಿದ್ರೆ ಸುತ್ತು ಬಳಸಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕ ಬೇಕಾಗಿತ್ತು.

Google Map : ಉಡುಪಿ : ಪೊಡವಿಗೊಡೆಯನ ಶ್ರೀ ಕೃಷ್ಣ ಮಠಕ್ಕೆ  (Udupi Sri Krishna Mutt) ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಹೀಗೆ ಬರುವ ಭಕ್ತರು ಗೂಗಲ್‌ ಮ್ಯಾಪ್‌ (Google Map)  ಬಳಿಸಿದ್ರೆ ಸುತ್ತು ಬಳಸಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕ ಬೇಕಾಗಿತ್ತು. ಆದ್ರೀಗ ಪರ್ಯಾಯ ಶ್ರೀಗಳ ಮನವಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರು ಗೂಗಲ್‌ ಸಂಸ್ಥೆ ಮ್ಯಾಪ್‌ ಲೋಕೇಷನ್‌ ಬದಲಾಯಿಸಿದೆ.

ಹೌದು, ಉಡುಪಿ ಶ್ರೀಕೃಷ್ಣ ಮಠಕ್ಕೆ ಬರುವ ಭಕ್ತರು ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್‌ ಮಾಡಿದ್ರೆ, ವುಡ್‌ಲ್ಯಾಂಡ್‌ ಹೋಟೆಲ್‌ ರಸ್ತೆ, ಬಡಗುಪೇಟೆ, ಶಿರೂರು ಮಠದ ರಸ್ತೆ, ತೆಂಕುಪೇಟೆ ಮುಂತಾದ ರಸ್ತೆಗಳನ್ನು ತೋರಿಸುತ್ತಿತ್ತು. ಆದರೆ ಈ ರಸ್ತೆಗಳು ತುಂಬಾ ಕಿರಿದಾಗಿರುವುದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಅಷ್ಟೇ ಅಲ್ಲಾ ವಾಹನ ದಟ್ಟಣೆಯಿಂದಾಗಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿತ್ತು.

Udupi Shri krishna Mutt Google Map location changed by Google
Image Credit to Original Source

ಗೂಗಲ್‌ ಮ್ಯಾಪ್‌ ಲೋಕೇಷನ್‌ ಬದಲಾವಣೆ ಮಾಡುವಂತೆ ಗೂಗಲ್‌ ಸಂಸ್ಥೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಕೋರಿಕೊಂಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಗೂಗಲ್‌ ಸಂಸ್ಥೆ ಮ್ಯಾಪ್‌ನಲ್ಲಿ ಬದಲಾವಣೆಯನ್ನು ಮಾಡಿದೆ. ಈ ಮೂಲಕ ಉಡುಪಿ ನಗರದಿಂದ ಉಡುಪಿ ಶ್ರೀ ಕೃಷ್ಣಮಠ ಸಂಪರ್ಕಿಸುವ ರಸ್ತೆಗಳಲ್ಲಿ ಟ್ರಾಫಿಕ್‌ ಕಿರಿಕಿರಿ ಕಡಿಮೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : ಇಲ್ಲಿರೋ ಒಂದೊಂದು ದೇವರು ನೀಡ್ತಾರೆ ಒಂದೊಂದು ಫಲ – ಜಲಕಂಠೇಶ್ವರನ ಸನ್ನಿಧಾನದಲ್ಲಿ ಸರ್ವ ಕಷ್ಟ ಪರಿಹಾರ

ಶ್ರೀಕೃಷ್ಣನ ಮಠಕ್ಕೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹೀಗೆ ಬರುವ ಭಕ್ತರು ಕಲ್ಸಂಕ ಮಾರ್ಗವಾಗಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್‌ ಪ್ರದೇಶಕ್ಕೆ ತೆರಳಿ ವಾಹನವನ್ನು ನಿಲುಗಡೆ ಮಾಡುತ್ತಿದ್ದಾರೆ. ಆದರೆ ಗೂಗಲ್‌ ಮ್ಯಾಪ್‌ ಬಳಕೆ ಮಾಡಿದ್ರೆ ಮಾತ್ರ ಟ್ರಾಫಿಕ್‌ ಸಮಸ್ಯೆ ಎದುರಿಸಬೇಕಾಗಿತ್ತು.ಈ ಕುರಿತು ಸಾರ್ವಜನಿಕರಿಂದಲೂ ಸಾಕಷ್ಟು ಮನವಿಗಳು ಬಂದಿತ್ತು.

Udupi Shri krishna Mutt Google Map location changed by Google
Image Credit to Original Source

ಇದನ್ನೂ ಓದಿ : ಉಚಿತ ಬಸ್‌ ಶಕ್ತಿ ಯೋಜನೆ; ಮಹಿಳೆಯರಿಗೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ಸರಕಾರ

ಕೊನೆಗೂ ಗೂಗಲ್‌ ಸಂಸ್ಥೆ ಎಚ್ಚೆತ್ತುಕೊಂಡಿದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವ ನಡೆದಿತ್ತು. ಪರ್ಯಾಯದ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಉಡುಪಿಗೆ ಆಗಮಿಸುತ್ತಿದ್ದಾರೆ. ಇನ್ನು ಶ್ರೀಕೃಷ್ಣ ಜನ್ಮಾಷ್ಠಮಿಯ ಸಂದರ್ಭದಲ್ಲಿಯೂ ಭಕ್ತರ ಸಂಖ್ಯೆ ವಿಪರೀತವಾಗಿ ಇರುತ್ತದೆ. ಈ ಸಂದರ್ಭದಲ್ಲಿ ಗೂಗಲ್‌ ತೋರಿಸುತ್ತಿದ್ದ ಮಾರ್ಗವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗುತ್ತದೆ.

ಇದನ್ನೂ ಓದಿ : ಬೆಣ್ಣೆ ಸೇವೆ ಮಾಡಿದ್ರೆ ಮಕ್ಕಳ ಭಾಗ್ಯ – ಇಲ್ಲಿನ ಕೃಷ್ಣನಿಗೆ ಮರುಳಾಗಿದ್ದರು ಪುರಂದರ ದಾಸರು

Udupi Shri krishna Mutt Google Map location changed by Google

Comments are closed.