ಮಂಗಳವಾರ, ಏಪ್ರಿಲ್ 29, 2025
HomeCoastal NewsOnam celebrations : ಕರಾವಳಿಯಲ್ಲೂ ಮೇಳೈಸಿದ ಓಣಂ ಹಬ್ಬದ ಸಂಭ್ರಮ

Onam celebrations : ಕರಾವಳಿಯಲ್ಲೂ ಮೇಳೈಸಿದ ಓಣಂ ಹಬ್ಬದ ಸಂಭ್ರಮ

- Advertisement -

ಮಂಗಳೂರು : Onam celebrations : ದೇವರನಾಡು ಕೇರಳದಲ್ಲಿ ಈ ಸಮಯ ಓಣಂ ಹಬ್ಬದ ಸಡಗರ ಸಂಭ್ರಮ. ಆದರೆ ಕೇರಳದಿಂದ ಶಿಕ್ಷಣಕ್ಕಾಗಿ ಮಂಗಳೂರಿಗೆ ಬಂದು ನೆಲೆಸಿರುವ ವಿದ್ಯಾರ್ಥಿಗಳು ಮಾತ್ರ ಈ ಸಂಭ್ರಮದಿಂದ ವಂಚಿತರಾಗಿದ್ದಾರೆ. ಆದ್ರೆ ಹಾಗೆಂದು ಅಂದುಕೊಂಡರೆ ಅದು ತಪ್ಪು. ಇಲ್ಲಿರುವ ಕೇರಳದ ವಿದ್ಯಾರ್ಥಿಗಳೂ ಅವರವರ ಕಾಲೇಜ್ ಕ್ಯಾಂಪಸ್‌ನಲ್ಲೇ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಹೌದು..ಶಿಕ್ಷಣಕ್ಕಾಗಿ ಕೇರಳದಿಂದ ಮಂಗಳೂರಿಗೆ ಬಂದಿರುವ ವಿದ್ಯಾರ್ಥಿಗಳಿಗೆ ತಮ್ಮ ರಾಜ್ಯದ ಸಂಭ್ರಮದ ಹಬ್ಬ ವಾಗಿರುವ ಓಣಂಗೆ ಕೇರಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಕೊರಗನ್ನು ನಿವಾರಿಸಲು ಇಲ್ಲಿನ ಹಲವು ಕಾಲೇಜಿನ ಆಡಳಿತ ಮಂಡಳಿಗಳು ತಮ್ಮ ಕ್ಯಾಂಪಸ್‌ನಲ್ಲಿಯೇ ಓಣಂ ಹಬ್ಬವನ್ನು ಆಚರಿಸುತ್ತಾರೆ. ಮಂಗಳೂರಿನ ಕರಾವಳಿ ಗ್ರೂಪ್ ಆಫ್ ಕಾಲೇಜು ಹಾಗೂ ಜಿ.ಆರ್ ಮೆಡಿಕಲ್ ಕಾಲೇಜು ಕೇರಳದ ವಿದ್ಯಾರ್ಥಿಗಳಿಗೋಸ್ಕರ ಈ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿತು. ಕಾಲೇಜು ಕ್ಯಾಂಪಸ್ ನಲ್ಲಿ ಎಲ್ಲಿ ನೋಡಿದರು ಬಣ್ಣಬಣ್ಣದ ಆಕರ್ಷಕ ಪೂಕಳಂ ಕಂಡು ಬಂತು. ಕೇರಳದ ಮಾದರಿಯ ಉಡುಗೆ ತೊಡುಗೆಗಳನ್ನು ತೊಟ್ಟ ಯುವಕ ಯುವತಿಯರ ಮುಖದಲ್ಲಿ ಹಬ್ಬದ ಸಂಭ್ರಮ ಕಂಡು ಬಂತು. ತಮ್ಮ ಹುಟ್ಟೂರಿನಲ್ಲೇ ಇದ್ದ ಅನುಭವ ವಿದ್ಯಾರ್ಥಿಗಳಿಗೆ ಆಯಿತು.

ಓಣಂ ಎಂದರೆ ಅಲ್ಲಿ ಹೂವಿನ ರಂಗೋಲಿ ಇರಲೇ ಬೇಕು. ಪ್ರತಿಯೊಬ್ಬ ಕೇರಳಿಗ ಯುವತಿಯರು,ಮಹಿಳೆಯರು ಈ ಪೂಕಳಂ ಅನ್ನು ಹಾಕುತ್ತಾರೆ. ಅಂತೆಯೇ ಇಲ್ಲಿಯೂ ವಿದ್ಯಾರ್ಥಿನಿಯರು ಈ ಪೂಕಳಂನ್ನು ಅಲ್ಲಲ್ಲಿ ಹಾಕಿದ್ದು ಎಲ್ಲರನ್ನು ಆಕರ್ಷಿಸುತ್ತಿತ್ತು. ಇದರ ಜೊತೆ ಕರಾವಳಿಯ ಹುಲಿವೇಷದೊಂದಿಗೆ ಓಣಂ ಮೆರವಣಿಗೆ ನಡೆಸಿ ಕೇರಳದಲ್ಲಿ ಆಗುವ ಎಲ್ಲಾ ರೀತಿಯ ಮನೋರಂಜನೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ತಾವು ಕರ್ನಾಟಕದಲ್ಲಿದ್ದೇವೆ ಅನ್ನುವ ಭಾವನೆ ಇರದೆ ಕೇರಳದಲ್ಲೇ ಇದ್ದೇವೆ ಅನ್ನುವಂತಿದ್ದರು. ಇಲ್ಲಿನ ವಿದ್ಯಾರ್ಥಿಗಳು ಇಲ್ಲಿ ಎಲ್ಲರೊಂದಿಗೆ ಬೆರೆತು ಈ ಹಬ್ಬವನ್ನು ಜಾತಿ,ಮತ,ಧರ್ಮದ ಭೇದವಿಲ್ಲದೆ ಆಚರಿಸಿದ್ದು,ಎಲ್ಲಾ ರಾಜ್ಯದ ವಿದ್ಯಾರ್ಥಿಗಳು ಸಂಭ್ರಮಿಸಿದರು.

ಕರ್ನಾಟಕದಲ್ಲಿ ಸನಾತನ ಸಂಸ್ಕ್ರತಿ ಯಲ್ಲಿ ಯುಗಾದಿ ನಂತರ ಹೊಸ ವರ್ಷ. ಅದೇ ರೀತಿ ಕೇರಳದಲ್ಲಿ ಈ ಓಣಂ ಹಬ್ಬದ ನಂತರ ಕೇರಳಿಗರಿಗೆ ಹೊಸ ವರ್ಷ. ಹೀಗಾಗಿ ಮುಂದಿನ ವರ್ಷವನ್ನು ಅದ್ದೂರಿಯಾಗಿ ಈ ಓಣಂ ಹಬ್ಬದ ಮೂಲಕ ಸ್ವಾಗತಿಸಲಾಗುತ್ತದೆ. ಒಟ್ಟಿನಲ್ಲಿ ಕೇರಳದ ಸಂಭ್ರವನ್ನು ಕರ್ನಾಟಕದಲ್ಲೂ ಈ ಕಾಲೇಜು ಮಾಡಿದ್ದು ಎಲ್ಲಾ ವಿದ್ಯಾರ್ಥಿಗಳ ಪ್ರಶಂಸೆಗೆ ಪಾತ್ರವಾಯಿತು.

ಇದನ್ನು ಓದಿ : Rishabh Pant: ಜವಾಬ್ದಾರಿ ಮರೆತ ರಿಷಭ್ ಪಂತ್’ಗೆ ಹಿಗ್ಗಾಮುಗ್ಗ ಬೈದ ಕ್ಯಾಪ್ಟನ್ ರೋಹಿತ್ ಶರ್ಮಾ

ಇದನ್ನೂ ಓದಿ : prabhakar rane ex minister died : ಶಿಕ್ಷಕರ ದಿನಾಚರಣೆಯಂದೇ ಮಾಜಿ ಶಿಕ್ಷಣ ಸಚಿವ ಪ್ರಭಾಕರ ರಾಣೆ ವಿಧಿವಶ

Onam celebrations in Mangalore

RELATED ARTICLES

Most Popular