Liz Truss to be Britain’s next PM : ಭಾರತೀಯ ಮೂಲದ ರಿಷಿ ಸುನಕ್​​ರನ್ನು ಮಣಿಸಿ ಬ್ರಿಟನ್​​ನ ಪ್ರಧಾನಿಯಾಗಿ ಆಯ್ಕೆಯಾದ ಲಿಜ್​ ಟ್ರೂಸ್​

ಬ್ರಿಟನ್​ : Liz Truss to be Britain’s next PM Liz Truss Rishi Sunak: ಬ್ರಿಟನ್​ ಪ್ರಧಾನಿ ಹುದ್ದೆಗಾಗಿ ನಡೆದ ಚುನಾವಣೆಯಲ್ಲಿ ಭಾರತೀಯ ಮೂಲದ ರಿಷಿ ಸುನಕ್​ ಗೆಲುವು ಬಹುತೇಕ ಪಕ್ಕಾ ಎನ್ನಲಾಗಿತ್ತು. ಆದರೆ ಬ್ರಿಟನ್​​ ಪ್ರಧಾನಿ ಹಣಾಹಣಿಯಲ್ಲಿ ರಿಷಿ ಸುನಕ್​​ರಿಗೆ ಸೋಲುಣಿಸಿದ ಆಡಳಿತ ಕನ್ಸರ್ವೇಟಿವ್​​ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್​ ಟ್ರುಸ್​​ ಜಯಭೇರಿ ಬಾರಿಸಿದ್ದಾರೆ.

ಯುಕೆ ವಿದೇಶಾಂಗ ಕಾರ್ಯದರ್ಶಿಯಾಗಿರುವ ಲಿಜ್​ ಟ್ರುಸ್​​ ಬ್ರಿಟನ್​ ಪ್ರಧಾನಿಯಾಗಲು ಕನ್ಸರ್ವೇಟಿವ್​ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ರಿಷಿ ಸುನಕ್​ರನ್ನು ಸೋಲಿಸಿ ಜಯ ಸಾಧಿಸಿದ್ದಾರೆ ಎಂದು ಪಕ್ಷವು ಇಂದು ಮಾಹಿತಿ ನೀಡಿದ್ದಾರೆ. ಬ್ರಿಟನ್​ ದೇಶವು ಜೀವನ ವೆಚ್ಚದ ಬಿಕ್ಕಟ್ಟು, ಕೈಗಾರಿಕಾ ಅಶಾಂತಿ ಹಾಗೂ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಲಿಜ್​ ಟ್ರೂಸ್​​ ಬ್ರಿಟನ್​ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಬ್ರಿಟನ್​​ನಲ್ಲಿ ಕಳೆದೊಂದು ತಿಂಗಳಿನಿಂದ ಬ್ರಿಟನ್​ ಪ್ರಧಾನಿ ವಿಚಾರವಾಗಿ ಭಾರೀ ರಾಜಕೀಯ ಹೈ ಡ್ರಾಮಾ ನಡೆದಿತ್ತು. ಕೊನೆಗೂ ಈ ರಾಜಕೀಯ ಹೈಡ್ರಾಮಾಕ್ಕೆ ತೆರೆ ಬಿದ್ದಂತಾಗಿದೆ. 1922ರ ಬ್ಯಾಕ್​ಬೆಂಚ್​​​ ಟೋರಿ ಸಂಸದರ ಸಮಿತಿಯ ಅಧ್ಯಕ್ಷರು ಹಾಗೂ ನಾಯಕತ್ವದ ಚುನಾವಣೆಯ ರಿಟರ್ನಿಂಗ್​​ ಆಫೀಸರ್​​​ 10 ಡೌನಿಂಗ್​​​ ಸ್ಟ್ರೀಟ್​​ನಲ್ಲಿ ನಡೆಸಿದ ಸ್ಪರ್ಧೆಯಲ್ಲಿ 47 ವರ್ಷ ವಯಸ್ಸಿನ ಲಿಜ್​ ಟ್ರೂಸ್​​ ವಿಜೇತರಾಗಿದ್ದಾರೆ.

ಇನ್ಪೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯನಾಗಿರುವ ರಿಷಿ ಸುನಕಲ್‌ ಈ ಬಾರಿ ಬ್ರಿಟನ್‌ ಪ್ರಧಾನಿ ಆಗುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೆ ಬ್ರಿಟನ್‌ ಚುನಾವಣೆಯಲ್ಲಿ ಅಧಿಕ ಮತಗಳನ್ನು ಪಡೆದಿರುವ ಲಿಜ್‌ ಟ್ರುಸ್‌ ಪ್ರಧಾನಿ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತೀಯ ಮೂಲದ ವ್ಯಕ್ತಿಯಾಗಿರುವ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿ ಆಗುತ್ತಾರೆ ಅನ್ನೋ ಭಾರತೀಯರ ಆಸೆ ಕೊನೆಗೂ ಫಲಿಸಲಿಲ್ಲ.

ಇದನ್ನು ಓದಿ : prabhakar rane ex minister died : ಶಿಕ್ಷಕರ ದಿನಾಚರಣೆಯಂದೇ ಮಾಜಿ ಶಿಕ್ಷಣ ಸಚಿವ ಪ್ರಭಾಕರ ರಾಣೆ ವಿಧಿವಶ

ಇದನ್ನೂ ಓದಿ : Rishabh Pant: ಜವಾಬ್ದಾರಿ ಮರೆತ ರಿಷಭ್ ಪಂತ್’ಗೆ ಹಿಗ್ಗಾಮುಗ್ಗ ಬೈದ ಕ್ಯಾಪ್ಟನ್ ರೋಹಿತ್ ಶರ್ಮಾ

Liz Truss to be Britain’s next PM, defeats Indian-origin Rishi Sunak

Comments are closed.