Orange Alert in Coastal‌ : ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಇಂದು ಭಾರೀ ಮಳೆ : ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು : (Orange Alert in Coastal) ಹವಾಮಾನ ಇಲಾಖೆ ವರದಿಯಂತೆ ಜೂನ್‌ ತಿಂಗಳ ಕೊನೆಯಲ್ಲಿ ವರುಣ ತುಸು ಜೋರಾಗಿದೆ. (Orange Alert in Coastal‌ ) ಹೀಗಾಗಿ ಮುಂದಿನ ಐದು ದಿನಗಳವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ಜೋರಾಗಿ ಸುರಿಯಲಿದೆ. ಅಷ್ಟೇ ಅಲ್ಲದೇ ಈ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದ ಮಳೆ ಸುರಿಯುತ್ತಿದ್ದು, ದಿನವಿಡೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಕರಾವಳಿ ಹೆಚ್ಚಿನ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿಯೊಂದಿಗೆ ಗಂಟೆಗೆ 40 ರಿಂದ 45 ಕಿ.ಮೀ ವೇಗದಲ್ಲಿ ವೇಗದಲ್ಲಿ ಬೀಸಲಿದೆ. ಮೀನುಗಾರರು, ಪ್ರವಾಸಿಗರು ಹಾಗೂ ಸ್ಥಳೀಯರು ಸಮುದ್ರ ಇಳಿಯದಂತೆ ಸೂಚಿಸಲಾಗಿದೆ.

ಇನ್ನು ರಾಜ್ಯದ ಕರಾವಳಿ ಜಿಲ್ಲೆಗಳಾದ ಕಾರವಾರ, ಪಣಂಬೂರು, ಗೋಕರ್ಣ, ಹೊನ್ನಾವರ, ಶಿರಾಲಿ, ಕುಮಟಾ, ಮಾಣಿ, ಅಂಕೋಲಾ, ಗೇರುಸೊಪ್ಪು, ಕೊಲ್ಲೂರು, ಕುಂದಾಪುರ, ಕೋಟ, ಪುತ್ತೂರು, ಉಡುಪಿ, ಕಾರ್ಕಳ, ಮುಲ್ಕಿ, ಮಂಕಿ, ಬೇಲಿಕೇರಿ, ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ, ಸುಬ್ರಹ್ಮಣ್ಯ, ನಾಪೋಕ್ಲು, ಕ್ಯಾಸಲ್‌ ರಾಕ್‌, ಸಿದ್ದಾಪುರ, ಭಾಗಮಂಡಲ, ಕೊಟ್ಟಿಗೆಹಾರ, ಕದ್ರಾ, ವಿರಾಜಪೇಟೆ, ಲಿಂಗನಮಕ್ಕಿ, ಯಲ್ಲಾಪುರ, ಶೃಂಗೇರಿ, ಕಮ್ಮರಡಿ, ತಾಳಗುಪ್ಪ, ಪೊನ್ನಂಪೇಟೆ, ಗೋಣಿಕೊಪ್ಪಲ್‌, ಮಧುಗಿರಿ, ಕಮಲಾಪುರ, ಕೊಪ್ಪ, ಕಡೂರುದಲ್ಲಿ ಮಳೆಯಾಗಲಿದೆ.

ಇದನ್ನೂ ಓದಿ : Bakrid 2023 : ಬಕ್ರೀದ್‌ ಹಿನ್ನೆಲೆ ಅನಧಿಕೃತ ಪ್ರಾಣಿಗಳ ವಧೆ ಮೇಲೆ ಕಣ್ಗಾವಲು : ಉಡುಪಿ ಡಿಸಿ ಸೂಚನೆ

ಇದನ್ನೂ ಓದಿ : ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ : ಜುಲೈ 1ರ ವರೆಗೆ ಯೆಲ್ಲೋ ಅಲರ್ಟ್‌

ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜನಗರದಲ್ಲೂ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.

Orange Alert in Coastal: Heavy rain in coastal district of the state today: Orange Alert announced

Comments are closed.