ಬೈಂದೂರು : ಕರಾವಳಿಯಾದ್ಯಂತ ತಲ್ಲಣ ಮೂಡಿಸಿರುವ ಬೈಂದೂರಿನ ಒತ್ತಿನೆಣೆಯಲ್ಲಿ ಸುಟ್ಟ ಕಾರು (Ottinene Burnt car ) ಮತ್ತು ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ಕಂಡು ಬರುತ್ತಿದ್ದು, ಸಾಸ್ತಾನ ಟೋಲ್‌ಗೇಟ್‌ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಕಾರಿನಲ್ಲಿದ್ದ ಮಹಿಳೆಯ ದೃಶ್ಯ ಸೆರೆಯಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಡಿ ಭಾಗದಲ್ಲಿ ಪತ್ತೆಯಾದ ಸುಟ್ಟ ಕಾರು ಮತ್ತು ಅಸ್ಥಿಪಂಜರ ಜಿಲ್ಲೆಯಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸ್ ತನಿಖಾಧಿಕಾರಿಗಳಿಗೆ ಸುಟ್ಟ ಕಾರಿನಲ್ಲಿ ಪತ್ತೆಯಾದ ಅಸ್ಥಿಪಂಜರ ತಲೆನೋವಿಗೆ ಕಾರಣವಾಗಿದೆ. ಕಾರಿನ ಮಾಲಕ ಪತ್ತೆಯಾದಗಿದ್ದರೂ ಕೂಡ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಬೈಂದೂರು ತಾಲೂಕಿ ಶಿರೂರು ಒತ್ತನೆಣೆ ಹೆನ್ ಬೇರು ಎಂಬಲ್ಲಿ ಸೆಡಾನ್ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಅಲ್ಲದೇ ಅಸ್ಥಿಪಂಜರ ಪತ್ತೆಯಾಗಿತ್ತು. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಹೆಗ್ಗುಂಜೆ ಬಳಿಯಲ್ಲಿ ಬೆಂಗಳೂರು ಮೂಲದ ಯುವ ಜೋಡಿಯೊಂದು ನಡುರಾತ್ರಿ ಕಾರಿನಲ್ಲಿ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿತ್ತು. ಆದ್ರೆ ಈ ಘಟನೆಯ ಕಹಿನೆನಪು ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಪತ್ತೆಯಾಗಿರುವುದು ಕರಾವಳಿಗರನ್ನು ಆತಂಕಕ್ಕೆ ಈಡು ಮಾಡಿದೆ.
ಸಾಸ್ತಾನ ಟೋಲ್ ಗೇಟ್ ನ ಸಿಸಿ ಕ್ಯಾಮರಾದಲ್ಲಿ ಕಂಡ ಮಹಿಳೆ ಯಾರು ?
ಒತ್ತಿನೆಣೆಯಲ್ಲಿ ಸುಟ್ಟು ಹೋದ ಕಾರು ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರಿಗಾರ್ ಎಂಬವರಿಗೆ ಸೇರಿದ್ದುಅನ್ನೋದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ. ಕಾರಿನ ನಂಬರ್ ಸುಟ್ಟು ಕರಕಲಾಗಿದ್ದರೂ ಕೂಡ ಕಾರಿನ ಚೆಸ್ಸಿ ನಂಬರ್ ಮೂಲಕ ಕಾರು ಮಾಲಕರ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೊಂದೆಡೆಯಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅದ್ರಲ್ಲೂ ಮಂಗಳವಾರ ರಾತ್ರಿ 12.30ಕ್ಕೆ ಸಾಸ್ತಾನ ಟೋಲ್‌ಗೇಟ್‌ನಲ್ಲಿನ ಸಿಸಿ ಕ್ಯಾಮರಾದಲ್ಲಿ ಬೆಚ್ಚಿಬೀಳಿಸುವ ದೃಶ್ಯ ಸೆರೆಯಾಗಿದೆ. ಬೈಂದೂರು ಸಮೀಪದ ಒತ್ತಿನೆಣೆಯಲ್ಲಿ ಪತ್ತೆಯಾಗಿರುವ ಕಾರಿನ ಹಿಂಭಾಗದಲ್ಲಿ ಮಹಿಳೆಯೋರ್ವಳ ಅಸ್ಥಿಪಂಜರ ಪತ್ತೆಯಾಗಿತ್ತು. ಕಾರಿನಲ್ಲಿ ಸುಟ್ಟು ಹೋದ ಮಹಿಳೆಯ ಮೃತ ದೇಹ ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿಯಾಗಿರುವ ಶಿಲ್ಪಾ ಅವರದ್ದು ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದ್ರೀಗ ಕಾರಿನಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದ್ದ ಶಿಲ್ಪಾ ಅವರು ಬದುಕಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇನ್ನೊಂದೆಡೆಯಲ್ಲಿ ಕಾರಿನ ಮಾಲೀಕರಾಗಿರುವ ಸದಾನಂದ ಶೇರಿಗಾರ್ ಅವರು ಕೂಡ ಊರಿನಲ್ಲಿಯೇ ಇದ್ದಾರೆ ಅನ್ನೋದು ದೃಢಪಟ್ಟಿದೆ.
ಹತ್ತು ವರ್ಷದ ಹಿಂದೆ ಕಾರು ಮಾರಾಟ ?
ಕಾರ್ಕಳದ ಸದಾನಂದ ಶೇರಿಗಾರ್ ಅವರು ಹತ್ತು ವರ್ಷಗಳ ಹಿಂದೆ ಕಾರು ಮಾರಾಟ ಮಾಡಿದ್ದು, ಆದರೆ ಕಾರು ಖರೀದಿಸಿದ ವ್ಯಕ್ತಿ ಕಾರಿನ ದಾಖಲೆಗಳನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿರಲಿಲ್ಲ ಎನ್ನಲಾಗುತ್ತಿದೆ. ಆದರೆ ಗುತ್ತಿಗೆ ಆಧಾರದಲ್ಲಿ ಸರ್ವೆ ಕೆಲಸ ಮಾಡುತ್ತಿದ್ದ ಸದಾನಂದ ಶೇರಿಗಾರ್ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು, ತಮ್ಮ ವಿರುದ್ದ ಪ್ರಕರಣದಲ್ಲಿ ಶಿಕ್ಷೆ ತಪ್ಪಿಸಲು ಅಸ್ಥಿಪಂಜರವಿಟ್ಟು ನಾಟವಾಡಿದ್ರಾ ಅನ್ನೋ ಶಂಕೆಯೂ ವ್ಯಕ್ತವಾಗುತ್ತಿದೆ.
ಸುಟ್ಟ ಕಾರಿನ ಪಕ್ಕದಲ್ಲೇ ಪತ್ತೆಯಾಯ್ತು ಪೆಟ್ರೋಲ್ ಕ್ಯಾನ್ !
ಇನ್ನು ಕಾರು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ತುಂಬಿಸಿ ತಂದಿದ್ದ ಕ್ಯಾನ್ ಒಂದು ಪತ್ತೆಯಾಗಿದೆ. ಕಾರನ್ನು ಇಲ್ಲಿ ನಿಲ್ಲಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಸದಾನಂದ ಶೇರಿಗಾರ್ ಸೇರಿ ನಾಲ್ವರ್ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಶಿಲ್ಪಾ ಪೂಜಾರಿ, ಸತೀಶ್ ದೇವಾಡಿಗ, ನಿತಿಶ್ ದೇವಾಡಿಗ, ಸದಾನಂದ ಶೇರೆಗಾರ್ ಸೇರಿ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಸದಾನಂದ ಶೇರಿಗಾರ್ ಕಾರನ್ನು ಮಾರಾಟ ಮಾಡಿದ್ದು ನಿಜವೇ ? ಒಂದೊಮ್ಮೆ ಮಾರಾಟ ಮಾಡಿದ್ರೆ ಖರೀದಿ ಮಾಡಿದ ವ್ಯಕ್ತಿಯಿಂದಲೇ ಈ ಕೃತ್ಯ ನೆಡೆದಿದ್ಯಾ ? ಇಲ್ಲಾ ಸದಾನಂದ ಶೇರಿಗಾರ್ ನಾಟವಾಡ್ತಿದ್ದಾರಾ ? ಟೋಲ್‌ನಲ್ಲಿ ಪತ್ತೆಯಾದ ಮಹಿಳೆ ಯಾರು ಅನ್ನೋ ಕುರಿತು ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ.
ಕಾರಿನಲ್ಲಿದ್ದ ಅಸ್ಥಿಪಂಜರ ಯಾರದ್ದು ?
ಕಾರಿನಲ್ಲಿ ಮೂವರು ಇದ್ದರು ಎನ್ನಲಾಗಿದ್ದು, ಕಾರಿನಲ್ಲಿದ್ದ ಇಬ್ಬರು ಜೀವಂತವಾಗಿ ಊರಿನಲ್ಲಿದ್ದಾರೆ. ಆದರೆ ಪೊಲೀಸ್ ರಿಗೆ ಕಾಡುತ್ತಿರುವ ಯಕ್ಷಪ್ರಶ್ನೆ ಒಂದೆ ಹಾಗಾದ್ರೆ ಕಾರಿನಲ್ಲಿದ್ದ ಅಸ್ಥಿಪಂಜರ ಯಾರದ್ದು, ಆ ಮೂರನೆ ವ್ಯಕ್ತಿಯ ಯಾರು ಎನ್ನುವುದಾಗಿದೆ. ಇದುವರೆಗೂ ತನಿಖೆ ಯಾವುದೆ ಗುಟ್ಟು ಬಿಟ್ಟುಕೊಡದ ಪೊಲೀಸರು ಹೇಗೆ ಬೇಧಿಸುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : Udupi court sentenced 20 years : ಅಪ್ತಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : 20 ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ
ಇದನ್ನೂ ಓದಿ : Acid Attach Punishment: ಹುಷಾರ್! ಆಸಿಡ್ ದಾಳಿಗೆ ವಿಧಿಸುವ ಕಠಿಣಾತಿ ಕಠಿಣ ಶಿಕ್ಷೆಗಳಿವು!
Ottinene Burnt car with charred body found found Case Big twist