Kickboxer Nikhil Suresh Dies : ಕಿಕ್ ಬಾಕ್ಸಿಂಗ್ ಪಂದ್ಯಾವಳಿ ಎಡವಟ್ಟು: ಎದುರಾಳಿ ಪಂಚ್ ಗೆ ಪ್ರಾಣಬಿಟ್ಟ ಬಾಕ್ಸರ್‌

ಮನೋರಂಜನೆ ಹಾಗೂ ಸ್ಪರ್ಧೆಗಾಗಿ ಏರ್ಪಡಿಸಿದ್ದ ಬಾಕ್ಸಿಂಗ್ ಪಂದ್ಯಾವಳಿಯೇ ಬಾಕ್ಸರ್ ಪ್ರಾಣಕ್ಕೆ (Kickboxer Nikhil Suresh Dies) ಕಂಟಕವಾಗಿ ಪರಿಣಮಿಸಿದ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಾಕ್ಸಿಂಗ್ ರಿಂಗ್ ನಲ್ಲಿ ಎದುರಾಳಿಯ ಪಂಚ್ ಗೆ ಗಾಯಗೊಂಡಿದ್ದ ಬಾಕ್ಸರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಕ್ರೀಡೆ ಆಯೋಜನೆಯ ವೇಳೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದೇ ಇರೋದೇ ಘಟನೆ ಕಾರಣ ಎನ್ನಲಾಗ್ತಿದೆ.

ಬೆಂಗಳೂರಿನ A1 ಕಿಕ್ ಬಾಕ್ಸಿಂಗ್ ಸಂಘಟನೆ ಜುಲೈ 10 ರಂದು ಕೆಂಗೇರಿಯಲ್ಲಿ ಬಾಕ್ಸಿಂಗ್ ಪಂದ್ಯಾವಳಿ ಆಯೋಜಿಸಿತ್ತು. ಈ ವೇಳೆ ಮೈಸೂರಿನ ಬಾಕ್ಸರ್ ನಿಖಿಲ್ ಹಾಗೂ ಇನ್ನೋರ್ವ ಸ್ಪರ್ಧಿಯ ನಡುವೆ ಪಂದ್ಯಾವಳಿ ನಡೆದಿತ್ತು. ಈ ವೇಳೆ ನಿಖಿಲ್ ಎದುರಾಳಿ ನಿಖಿಲ್ ಗೆ ಪಂಚ್ ನೀಡಿದ್ದು ಈ ವೇಳೆ ನಿಖಿಲ್ ಹೊಡೆತದ ತೀವ್ರತೆಗೆ ರಿಂಗ್ ನಲ್ಲೇ ಕುಸಿದು ಬಿದ್ದಿದ್ದರು.

ರಿಂಗ್ ನಲ್ಲೇ ಕುಸಿದು ಬಿದ್ದ ನಿಖಿಲ್ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪಂಚ್ ತೀವ್ರತೆಗೆ ಕೋಮಾಗೆ ತೆರಳಿದ್ದ‌ ನಿಖಿಲ್ ಎರಡು ದಿನಗಳ ಬಳಿಕ ಸಾವನ್ನಪ್ಪಿದ್ದಾರೆ. ಮೈಸೂರಿನ ಹೊಸಕೇರಿ‌ನಿವಾಸಿ ನಿಖಿಲ್ ಬಾಕ್ಸಿಂಗ್ ಫ್ಯಾಮಿಲಿಯಿಂದಲೇ ಬಂದವರಾಗಿದ್ದು, ತಮ್ಮ ತಂದೆಯಿಂದಲೇ ತರಬೇತಿ ಪಡೆಯುತ್ತಿದ್ದರು. 23 ವರ್ಷದ ನಿಖಿಲ್ ರಿಂಗ್ ನಲ್ಲಿ ಕುಸಿದು ಬಿದ್ದ ವೇಳೆ ಆಯೋಜಕರು ನಿಖಿಲ್ ರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬಮಾಡಿದ್ದರು.

ಅಲ್ಲದೇ ಸ್ಪರ್ಧೆ ಆಯೋಜಕರು ಸ್ಥಳದಲ್ಲಿ ಆ್ಯಂಬುಲೆನ್ಸ್, ಸ್ಟ್ರೆಚರ್ ಸೇರಿದಂತೆ ಯಾವುದೇ ಅಗತ್ಯ ಎರ್ಮೆಜೆನ್ಸಿ ಸೌಲಭ್ಯಗಳನ್ನು ಹೊಂದಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ವಿಳಂಬ ವಾಗಿದೆ. ಇದರಿಂದ ಗಾಯಗೊಂಡ ನಿಖಿಲ್ ಶ್ವಾಸಕೋಶಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಆಂತರಿಕ ರಕ್ತಸ್ರಾವವಾಗಿದೆ. ಈ ವೇಳೆ ತಕ್ಷಣ ಚಿಕಿತ್ಸೆ ದೊರಕದೇ ಇರೋದರಿಂದ ನಿಖಿಲ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ನಿಖಿಲ್ ತಂದೆ ಕುಸ್ತಿ ಹಾಗೂ ಕರಾಟೆ ಪಟು ಸುರೇಶ್ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಕ್ಸಿಂಗ್ ಆಯೋಜಿಸಿದ್ದ ರವಿಶಂಕರ್ ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ನಿಖಿಲ್ ಯಾವ ವಯೋಮಾನದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಅವರ ಪ್ರತಿಸ್ಪರ್ಧಿ ಯಾರಾಗಿದ್ದರು ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ : Virat Kohli Dropped : ವಿಂಡೀಸ್ ಟಿ20 ಸರಣಿಗೆ ಟೀಮ್ ಇಂಡಿಯಾ ಪ್ರಕಟ ; ಇದೇ ಮೊದಲ ಬಾರಿ ಭಾರತ ತಂಡದಿಂದ ವಿರಾಟ್ ಕೊಹ್ಲಿ ಡ್ರಾಪ್

ಇದನ್ನೂ ಓದಿ : Ottinene Burnt car : ಒತ್ತಿನೆಣೆ ಕಾರು ಸುಟ್ಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಸಾಸ್ತಾನ ಟೋಲ್‌ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಮಹಿಳೆ ಯಾರು ?

Kickboxer Nikhil Suresh Dies During Competition in Bangalore, who is Nikhil Suresh, father blames Organizers

Comments are closed.