(ಚಿತ್ರಗಳು : ಪ್ರವೀಣ್ ಬ್ರಹ್ಮಾವರ)
ಬ್ರಹ್ಮಾವರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಟ್ರಾನ್ಸ್ ಫಾರ್ಮರ್ ಸುಟ್ಟ ಸುಮಾರು ಬೆಂಕಿ ಕಾಣಿಸಿಕೊಂಡಿರುವ ಘಟನೆ ಬ್ರಹ್ಮಾವರದ ದೂಪದಕಟ್ಟೆಯಲ್ಲಿ ನಡೆದಿದೆ.

ದೂಪದಕಟ್ಟೆಯ ಮಾನಸ ಬಾರ್ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಟ್ರಾನ್ಸ್ ಫಾರ್ಮರ್ ನಲ್ಲಿ ರಾತ್ರಿಯ ಹೊತ್ತಲ್ಲಿ ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಂಡು ಬೆಂಕಿಹೊತ್ತಿಕೊಂಡಿದೆ. ಇದರಿಂದಾಗಿ ಸುಮಾರು 200 ಮೀಟರ್ ನಷ್ಟು ಪ್ರದೇಶ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದೆ.

ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅದೃಷ್ಟವಶಾತ್ ಅದೇ ವೇಳೆಯಲ್ಲಿ ಸುರಿದ ಮಳೆಯಿಂದಾಗಿ ಬೆಂಕಿಯ ತೀವ್ರತೆ ಕಡಿಮೆ ಯಾಗಿತ್ತು. ನಂತರ ಸ್ಥಳಕ್ಕೆ ಅಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬ್ರಹ್ಮಾವರ ಸುತ್ತಮುತ್ತಲೂ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
