ಪ್ರವೀಣ್ ನೆಟ್ಟಾರು ಕನಸು ನನಸು: 60 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಸಿ ಕೊಟ್ಟ ಬಿಜೆಪಿ

ಪುತ್ತೂರು: (Praveen Nettaru’s dream house) ಚುನಾವಣೆಯ ಹೊತ್ತಿನಲ್ಲಿ ಒಂದೊಂದು ಪಕ್ಷಗಳು ಒಂದೊಂದು ವಿಚಾರವನ್ನು ಅಸ್ತ್ರ ಮಾಡಿಕೊಳ್ಳೋದು ಕಾಮನ್. ಇದರಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಬಿಜೆಪಿ ಮಾನವೀಯತೆ ಹಾಗೂ ಅನುಕಂಪದ ಅಸ್ತ್ರವನ್ನು ಮತವಾಗಿ ಬಳಸಿಕೊಳ್ಳಲು ಸಿದ್ಧವಾಗಿದೆ. ಪಕ್ಷಕ್ಕಾಗಿ ದುಡಿದು ಮಡಿದ ಪ್ರವೀಣ್ ನೆಟ್ಟಾರು ಕೊನೆಯಾಸೆ ಈಡೇರಿಸುವ ಮೂಲಕ ಬಿಜೆಪಿ ಹಿಂದುತ್ವದ ಮತಗಳನ್ನು ಭದ್ರಪಡಿಸಿಕೊಳ್ಳಲು ಮುಂದಾಗಿದೆ.

ಇನ್ನೇನು ಎಲೆಕ್ಷನ್ ಗೆ ದಿನಗಣನೆ ನಡೆದಿದೆ. ಈ ಹೊತ್ತಿನಲ್ಲೇ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹೊಸ ಮನೆ ಗೃಹ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಹೌದು ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆ ಗೃಹ ಪ್ರವೇಶಕ್ಕೆ ಡೇಟ್ ಫಿಕ್ಸ್ ಆಗಿದ್ದು, ಈ ಗೃಹಪ್ರವೇಶದ ಮೂಲಕ ಕೊಟ್ಟ ಮಾತನ್ನು ಈಡೇರಿಸಿಕೊಂಡ ಹೆಗ್ಗಳಿಕೆಗೆ ಭಾಜನವಾಗಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಪ್ರವೀಣ್ ನೆಟ್ಟಾರು ಮನೆ ಕಟ್ಟಬೇಕೆಂಬ ಕನಸು ಕಂಡಿದ್ದರು. ಊರಿನಲ್ಲೇ ಚಿಕನ್ ಅಂಗಡಿ ಮಾಡಿಕೊಂಡು ತಮ್ಮ ಕನಸು ಈಡೇರಿಸಿಕೊಳ್ಳುವ ಸಿದ್ಧತೆಯಲ್ಲಿದ್ದರು. ಆ ವೇಳೆಯಲ್ಲೇ ಪ್ರವೀಣ್ ನೆಟ್ಟಾರನ್ನು ಭರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಕುಟುಂಬದ ಪರ ನಿಂತು ಡ್ಯಾಮೇಜ್ ಸರಿಪಡಿಸಿಕೊಂಡ ಬಿಜೆಪಿ

ಈ ವೇಳೆ ಸಂತ್ರಸ್ತ ಕುಟುಂಬಸ್ಥರನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರವೀಣ್ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ 2022ರಲ್ಲಿ ನ.2ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮನೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ವೇಗವಾಗಿ ಮನೆ ನಿರ್ಮಾಣ ಪೂರ್ತಿಗೊಂಡು ಏ‌.27ರಂದು ಗೃಹ ಪ್ರವೇಶಕ್ಕೆ ಮುಹೂರ್ತ ನಿಗದಿ ಪಡಿಸಲಾಗಿದೆ. ಆ ಮೂಲಕ ಬಿಜೆಪಿ ತನ್ನ ಕಾರ್ಯಕರ್ತರಿಗೆ ತಾವು ಪ್ರವೀಣ್ ಕುಟುಂಬದ ಪರ ನಿಂತಿದ್ದೇವೆ ಎಂಬ ಸಂದೇಶ ನೀಡಲು ಮುಂದಾಗಿದೆ. ಅಲ್ಲದೇ ಈ ಕೆಲಸದ ಮೂಲಕ ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ಆದ ಡ್ಯಾಮೇಜ್ ನ್ನು ಸರಿಪಡಿಸುವ ಸರ್ಕಸ್ ನಡೆಸಿದೆ.

ಇದನ್ನೂ ಓದಿ : BJP foundation day 2023 : ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮೋದಿ ಕಾರ್ಯಕ್ರಮ ವೀಕ್ಷಣೆ

ಪ್ರವೀಣ್ ‌ನೆಟ್ಟಾರು ಕನಸಿನ ಮನೆಯನ್ನು ನಳಿನ್ ನೇತೃತ್ವದಲ್ಲಿ 2,700 ಚ.ಅಡಿಯಲ್ಲಿ ಅಂದಾಜು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೇವಲ ಮನೆ ಮಾತ್ರವಲ್ಲ ಪ್ರವೀಣ್ ವಿಷಯದಲ್ಲಿ ಹೇಳಿದಂತೆ ನಡೆದುಕೊಂಡಿರೋ ಸರ್ಕಾರ, ಪ್ರವೀಣ್ ಪತ್ನಿಗೆ ಸದ್ಯ ‌ದ.ಕ ಜಿಲ್ಲಾಧಿಕಾರಿ ‌ಕಚೇರಿಯಲ್ಲಿ ಸರ್ಕಾರಿ ಉದ್ಯೋಗ ನೀಡಲಾಗಿದೆ. ಜುಲೈ 26 ರಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಟ್ಟಾರಿನಲ್ಲಿ ಪ್ರವೀಣ್ ರನ್ನು ಹತ್ಯೆ ನಡೆಸಿದ್ದ ಪ್ರಕರಣ ದೇಶಮಟ್ಟದಲ್ಲಿ ಸಂಚಲನ ಮೂಡಿಸಿತ್ತು.

Praveen Nettaru’s dream house: Praveen Nettaru’s dream come true: BJP built a house at a cost of 60 lakhs

Comments are closed.