ದಕ್ಷಿಣ ಕನ್ನಡ : Praveen Nettaru’s father : ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾದ ಬಳಿಕ ಅವರ ಕುಟುಂಬವನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ, ಯಾರದ್ದೋ ದ್ವೇಷದ ಹಗೆಗೆ ಒಂದು ಪ್ರವೀಣ್ ನೆಟ್ಟಾರು ಕುಟುಂಬ ಬೇಯುವಂತಾಗಿದೆ. ಮನೆಯ ಆಧಾರ ಸ್ತಂಭವೇ ಆಗಿದ್ದ ಪ್ರವೀಣ್ ನೆಟ್ಟಾರು ಸಾವಿನ ಬಳಿಕ ಪತ್ನಿ ಹಾಗೂ ತಂದೆ – ತಾಯಿಗೆ ಇದೀಗ ದಿಕ್ಕೆ ತೋಚದಂತಾಗಿದೆ.
ಸುಳ್ಯ ತಾಲೂಕು ಬೆಳ್ಳಾರೆಯ ನೆಟ್ಟಾರು ಗ್ರಾಮದಲ್ಲಿರುವ ಪುಟ್ಟ ಮನೆಯಲ್ಲಿದ್ದ ಪ್ರವೀಣ್ ನೆಟ್ಟಾರು ತಂದೆ – ತಾಯಿಗೆ ಒಬ್ಬನೇ ಮಗ, ಪುತ್ರ ಕೆಲಸ ಮುಗಿಸಿ ಮನೆಗೆ ಬರ್ತಾನೆ ಎಂದುಕೊಂಡಿದ್ದ ಪೋಷಕರಿಗೆ ಪುತ್ರನ ಹತ್ಯೆಯ ವಾರ್ತೆ ಬರ ಸಿಡಿಲಿನಂತೆ ಬಡಿದಿದೆ. ಯಾರೊಂದಿಗೂ ವೈರತ್ಯವನ್ನೇ ಇಟ್ಟುಕೊಳ್ಳದ ಪ್ರವೀಣ್ ಸಾವು ಅವರ ಪೋಷಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪುತ್ರನ ಅಂತ್ಯಕ್ರಿಯೆಯಲ್ಲಿ ನಿನ್ನೆ ಭಾಗಿಯಾಗಿದ್ದ ತಂದೆ ಶೇಖರ್ ಪೂಜಾರಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಮೊದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಶೇಖರ್ ಪೂಜಾರಿ ಇದ್ದೊಬ್ಬ ಮಗನನ್ನೂ ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಪುತ್ರನ ಸಾವಿನಿಂದ ಕಂಗೆಟ್ಟಿದ್ದ ಶೇಖರ್ ಪೂಜಾರಿ ಅಸ್ವಸ್ಥರಾಗಿದ್ದು ಅವರನ್ನು ಬೆಳ್ಳಾರೆ ಭಾರದ್ವಾಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತೆರಳಿದ ಶೇಖರ್ ಪೂಜಾರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಯಾರದ್ದೋ ಸೇಡಿಗೆ ಅಮಾಯಕ ಪ್ರವೀಣ್ ನೆಟ್ಟಾರು ಬಲಿಯಾಗಿದ್ದಾರೆ. ಇದೇ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಮುಸ್ಲಿಂ ಯುವಕನ ಕೊಲೆಗೆ ಇದು ಪ್ರತೀಕಾರ ಎಂದು ಹೇಳಲಾಗ್ತಿದೆ. ಮೃತ ಪ್ರವೀಣ್ಗೂ ಕೂಡ ಹಿಂದೂ ಯುವಕನನ್ನು ಸಾಯಿಸಲು ಪ್ಲಾನ್ ಮಾಡುತ್ತಿದ್ದರು ಎಂಬ ಮಾಹಿತಿ ಮೊದಲೇ ತಿಳಿದಿದ್ದಂತೆ. ಆದರೆ ದುಷ್ಕರ್ಮಿಗಳ ಸಂಚಿಗೆ ತಾನೇ ಬಲಿಯಾಗುತ್ತೇನೆಂಬ ಸಣ್ಣ ಸುಳಿವೂ ಅವರಿಗಿರಲಿಲ್ಲ. ಎಂದಿನಂತೆ ಕೋಳಿ ಅಂಗಡಿಯನ್ನು ಬಂದ್ ಮಾಡಿ ಮನೆಗೆ ತೆರಳಬೇಕಿದ್ದ ಸಂದರ್ಭದಲ್ಲಿ ಕೇರಳದ ನಂಬರ್ ಪ್ಲೇಟ್ ಇದ್ದ ಬೈಕಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಪ್ರವೀಣ್ರನ್ನು ತಲವಾರ್ನಿಂದ ಕೊಚ್ಚಿ ಕೊಲೆಗೈದು ಎಸ್ಕೇಪ್ ಆಗಿದ್ದರು.
ಇದನ್ನು ಓದಿ : accused is likely to be arrested : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ವ್ಯಕ್ತಿ ಬಂಧಿಸಿರುವ ಸಾಧ್ಯತೆ
Praveen Nettaru’s father Shekhar Pujari is unwell: admitted to hospital