Bommai press conference : ಆತ್ಮಸಾಕ್ಷಿಗೆ ಅನುಗುಣವಾಗಿ ಜನೋತ್ಸವ ರದ್ದು; ಪ್ರವೀಣ್​ ಹಂತಕರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ – ಸಿಎಂ ಬೊಮ್ಮಾಯಿ ಅಭಯ

ಬೆಂಗಳೂರು : Bommai press conference : ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಪ್ರಯುಕ್ತ ಇಂದು ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ. ಎರಡು ವರ್ಷಗಳ ಕಾಲ ಬಿಎಸ್​ವೈ ಹಾಗೂ ಮತ್ತೊಂದು ವರ್ಷದಲ್ಲಿ ನಾನು ಬಿಜೆಪಿ ಸರ್ಕಾರದ ಆಡಳಿತ ನಡೆಸಿದ್ದೇನೆ. ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕ ನಾವು ಬ್ವಾಂಕ್ವೆಟ್​ ಹಾಲ್​ ಹಾಗೂ ದೊಡ್ಡ ಬಳ್ಳಾಪುರದ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೇವೆ ಎಂದು ಹೇಳಿದ್ದಾರೆ.


ಅನೇಕರು ಪ್ರವೀಣ್​ ಹತ್ಯೆ ಬಳಿಕ ಹಿಂದೂ ಕಾರ್ಯಕರ್ತರ ಆಕ್ರೋಶದ ಭಾವನೆಗೆ ಹೆದರಿ ಬಿಜೆಪಿ ಸರ್ಕಾರ ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳ್ತಿದ್ದಾರೆ. ಇನ್ನೂ ಕೆಲವರು ಅನೇಕ ರೀತಿಯಲ್ಲಿ ವ್ಯಾಖ್ಯಾನವನ್ನು ನೀಡ್ತಿದ್ದಾರೆ. ಆದರೆ ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ಜನರಿಗೆ ಸರ್ಕಾರದ ಕಾರ್ಯಗಳ ಬಗ್ಗೆ ತಿಳಿಸಬೇಕಾದ ಅಗತ್ಯವಿದ್ದರಿಂದ ಇಂದು ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ಹೇಳಿದರು.


ನಮ್ಮ ಒಂದು ವರ್ಷದ ಸಾಧನೆಯಲ್ಲಿ ಸಚಿವ ಸಂಪುಟದ ಪಾಲು ಕೂಡ ಇದೆ. ಕೋವಿಡ್​ ಅವಧಿಯಲ್ಲಿ ಯಡಿಯೂರಪ್ಪ ಉತ್ತಮ ಆಡಳಿತವನ್ನು ನಿರ್ವಹಿಸಿದ್ದಾರೆ. ಅದಾದ ಬಳಿಕ ನಾನು ಅಧಿಕಾರಕ್ಕೆ ಬಂದಿದ್ದೇನೆ, ರೈತರ ಪರವಾಗಿ ಸಾಕಷ್ಟು ಯೋಜನೆಗಳನ್ನು ಆರಂಭಿಸಿದ್ದೇವೆ, 10 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಎಸ್​ಟಿ ಸಮುದಾಯಕ್ಕೂ ಭದ್ರತೆ ನೀಡಿದ್ದೇವೆ. ಬಡ ಎಸ್​ಟಿ ಕುಟುಂಬಕ್ಕೆ ಉಚಿತ ವಿದ್ಯುತ್​, ಎಸ್​ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್​ ಸೌಕರ್ಯ ಸೇರಿದಂತೆ ಸಾಕಷ್ಟು ಸೌಲಭ್ಯ ನೀಡಿದ್ದೇವೆ ಅಂತಂದ್ರು.


ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ಕೋಮು ಸೌಹಾರ್ದವನ್ನು ಕದಡುವಂತಹ ಕಾಣದ ಶಕ್ತಿಗಳು ತಲೆ ಎತ್ತಿವೆ. ಸ್ಲೀಪರ್​ ಸೆಲ್​ನಲ್ಲಿದ್ದ ಭಯೋತ್ಪಾದಕರನ್ನು ತಿಹಾರ್​ ಜೈಲಿಗೆ ಕಳಿಸುವ ಕೆಲಸವನ್ನು ನಾವು ಮಾಡಿದ್ದೇವೆ. ರಾಜ್ಯದಲ್ಲಿ ಡಿ.ಜೆ ಹಳ್ಳಿ ಗಲಭೆ ಪ್ರಕರಣವನ್ನು ಅತ್ಯಂತ ಸೂಕ್ತವಾಗಿ ನಿಭಾಯಿಸಿದ್ದೇವೆ. ಅದೇ ರೀತಿ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ನಮ್ಮ ಸರ್ಕಾರ ಎಂದಿಗೂ ರಾಜಿ ಮಾಡಿಕೊಳ್ಳೋದಿಲ್ಲ. ಆದಷ್ಟು ಬೇಗ ಆರೋಪಿಗಳ ಹೆಡೆಮುರಿ ಕಟ್ಟಲಿದ್ದೇವೆ. ಸಂಘಟಿತ ಅಪರಾಧಗಳ ವಿರುದ್ಧ ಬಿಜೆಪಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತೆ ಎಂದಿದ್ದಾರೆ.

ಇದನ್ನು ಓದಿ : Nutana Nettaru demands : ನನ್ನ ಪತಿ ಕೊಲೆ ಪ್ರಕರಣ ಎನ್​ಐಎಗೆ ವಹಿಸಿ : ರಾಜ್ಯ ಸರ್ಕಾರಕ್ಕೆ ಪ್ರವೀಣ್​ ನೆಟ್ಟಾರು ಪತ್ನಿ ಆಗ್ರಹ

ಇದನ್ನೂ ಓದಿ : accused is likely to be arrested : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ವ್ಯಕ್ತಿ ಬಂಧಿಸಿರುವ ಸಾಧ್ಯತೆ

CM Basavaraja Bommai press conference in Bangalore

Comments are closed.