Police Dance : ಪುನೀತ್‌ ರಾಜ್‌ ಕುಮಾರ್‌ ಸ್ಮರಣೆ : ಶಿವರಾಜ್‌ ಕುಮಾರ್‌ ಜೊತೆಗೆ ಮಂಗಳೂರು ಪೊಲೀಸರ ಭರ್ಜರಿ ಡ್ಯಾನ್ಸ್‌

ಮಂಗಳೂರು : ಸ್ಯಾಂಡಲ್‌ವುಡ್‌ ಸ್ಟಾರ್‌ ದಿ. ಪುನೀತ್‌ ರಾಜ್‌ ಕುಮಾರ್‌ (Puneet Rajkumar ) ಅವರ ಸ್ಮರಣೆಯ ಕುರಿತು ಮಂಗಳೂರು ನಗರ ಪೊಲೀಸ್‌ ಆಯುಕ್ತರ ವತಿಯಿಂದ ಪುನೀತ್‌ ಸ್ಮರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಟ ಶಿವರಾಜ್‌ ಕುಮಾರ್‌ (Shiva Rajkumar) ಹಾಗೂ ಗೀತಾ ಶಿವರಾಜ್‌ ಕುಮಾರ್‌ ಅವರು ಭಾಗಿಯಾಗಿದ್ದರು. ಶಿವಣ್ಣ ಜೊತೆಗೆ ಮಂಗಳೂರು ಪೊಲೀಸರು ಡ್ಯಾನ್ಸ್‌ (Police Dance ) ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತರು ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ. ಅಲ್ಲದೇ ಅಪ್ಪುವನ್ನು ನೆನಪಿಸಿಕೊಂಡ ಶಿವಣ್ಣ, ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡಿನ ಸಾಲುಗಳನ್ನು ಹಾಡಿದರು. ನಗರ ಪೊಲೀಸ್‌ ಆಯುಕ್ತರ ವತಿಯಿಂದ ಶಿವರಾಜ್‌ ಕುಮಾರ್‌ ಹಾಗೂ ಗೀತಾ ಶಿವರಾಜ್‌ ಕುಮಾರ್‌ ದಂಪತಿಗಳನ್ನು ಸನ್ಮಾನಿಸಲಾಯಿತು.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್.‌ ಶಶಿಕುಮಾರ್‌, ಡಿಸಿಪಿ ಹರಿರಾಂ ಶಂಕರ್‌, ನಿರ್ಮಾಪಕ ರಾಜೇಶ್‌ ಭಟ್‌, ಮೇಘರಾಜ್‌ ಹಾಗೂ ರಾಜೇಂದ್ರ ಕುಮಾರ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು. ಶಿವಣ್ಣ ಡ್ಯಾನ್ಸ್‌ ಮಾಡುತ್ತಿದ್ದಂತೆಯೇ ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌, ಡಿಸಿಪಿ ಹರಿರಾಂ ಶಂಕರ್‌ ಸೇರಿದಂತೆ ಪೊಲೀಸರು ಡ್ಯಾನ್ಸ್‌ ಮಾಡಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : ಬೋಲ್ಡ್​ ಫೋಟೋಗಳ ಮೂಲಕ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ ನಟಿ ಕಿಯಾರಾ ಅಡ್ವಾಣಿ

ಇದನ್ನೂ ಓದಿ : ಕೋಟಿ ಮೌಲ್ಯದ ಪಾನ್​ಮಸಾಲಾ ಆ್ಯಡ್​ ತಿರಸ್ಕರಿಸಿದ ಯಶ್

Puneet Rajkumar memory: Shiv Raj Kumar dances with Mangalore police Dance

Comments are closed.