ದಕ್ಷಿಣ ಕನ್ನಡ : Puttur Bus Stand : ಕರಾವಳಿ ಭಾಗಗಳಲ್ಲಿ ದೈವಗಳಿಗೆ ವಿಶೇಷ ಸ್ಥಾನಮಾನ ಇದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ದೈವಗಳು ಇಲ್ಲಿನ ಭಾಗದ ಜನತೆಯ ಭಾವನೆ, ಧರ್ಮ, ಭಕ್ತಿ ಎಲ್ಲವೂ ಆಗಿದೆ. ಇದೇ ವಿಚಾರವನ್ನು ಮನವರಿಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಗರಗಳಲ್ಲಿ ಒಂದಾದ ಪುತ್ತೂರು ಬಸ್ ನಿಲ್ದಾಣಕ್ಕೆ ಇಲ್ಲಿನ ಕಾರಣಿಕ ಶಕ್ತಿ ಅವಳಿ ವೀರಪುತ್ರರಾದ ಕೋಟಿ- ಚೆನ್ನಯ್ಯರ ಹೆಸರನ್ನು ನಾಮಕರಣ ಮಾಡಿದೆ. ಇನ್ಮುಂದೆ ಪುತ್ತೂರು ಬಸ್ ನಿಲ್ದಾಣವು ಕೋಟಿ – ಚೆನ್ನಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.
ಈ ಸಂಬಂಧ ಸರ್ಕಾರದ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರದ ಮೂಲಕ ನಿರ್ದೇಶನವನ್ನು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಪುತ್ತೂರು ಬಸ್ ನಿಲ್ದಾಣವನ್ನು ಕೋಟಿ ಚೆನ್ನಯ್ಯ ಬಸ್ ನಿಲ್ದಾಣ ಎಂದು ನಾಮಕರಣ ಮಾಡುವ ಕುರಿತು ಪೂರ್ವಾನುಮೋದನೆ ನೀಡುವಂತೆ ಮನವಿ ಮಾಡಿದ್ದರು. ಈ ಪ್ರಸ್ತಾವನೆಯನ್ನು ಪರಿಶೀಲನೆ ಮಾಡಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ನಗರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣಕ್ಕೆ ‘‘ಕೋಟಿ ಚೆನ್ನಯ್ಯ ಬಸ್ ನಿಲ್ದಾಣ’‘ ಎಂದು ಸರ್ಕಾರವು ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ನಮ್ಮ ತುಳುನಾಡಿನ ಕಾರ್ಣಿಕ ಅವಳಿ ಶಕ್ತಿಗಳಾದ ಕೋಟಿ – ಚೆನ್ನಯರ ಹೆಸರನ್ನು ನಮ್ಮ ಪುತ್ತೂರಿನ KSRTC ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
— Sanjeeva Matandoor (@s__matandoor) October 14, 2022
ನನ್ನ ಮನವಿಗೆ ಸ್ಪಂದಿಸಿ ಈ ಕುರಿತು ಆದೇಶ ಹೊರಡಿಸಿದ ಮಾನ್ಯ ಸಾರಿಗೆ ಸಚಿವರಾದ ಶ್ರೀ @sriramulubjp ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.#KotiChennayaBusStand pic.twitter.com/pkjci0yXrq
ಕೋಟಿ ಚೆನ್ನಯ್ಯ ತುಳುನಾಡಿನ ಹೆಸರಾಂತ ವೀರಪುತ್ರರಾಗಿದ್ದಾರೆ. ಅನೇಕರು ಈ ಅವಳಿ ಸಹೋದರರನ್ನು ದೈವ ಎಂದು ಆರಾಧಿಸುತ್ತಾರೆ. ಪುತ್ತೂರು ತಾಲೂಕಿನ ಪಡುಮಲೆ ನಿವಾಸಿಗಳಾದ ಕೋಟಿ ಚೆನ್ನಯ್ಯರು ಯೋಧರಾಗಿದ್ದು ಯುದ್ಧದಲ್ಲಿ ಹೋರಾಡಿ ಮಡಿದು ಬಳಿಕ ದೈವಗಳಾದರು ಎಂಬ ನಂಬಿಕೆಯಿದೆ. ಕರಾವಳಿಯ ಶಕ್ತಿಯಾಗಿದ್ದ ದೇಯಿ ಬೈತೇಯಿ ಮಕ್ಕಳಾದ ಕೋಟಿ ಹಾಗೂ ಚೆನ್ನಯ್ಯ ದೈವ ಕಾರ್ಯಕ್ಕೆಂದೇ ಭೂಮಿಯ ಮೇಲೆ ಜನ್ಮ ತಾಳಿದ್ದರು ಎಂಬ ನಂಬಿಕೆಯಿದೆ.
ಇದನ್ನು ಓದಿ : murugha shri:ಮುರುಘಾ ಶ್ರೀಗಳಿಗೆ ಹೊಸ ಸಂಕಷ್ಟ : ಶ್ರೀಗಳ ವಿರುದ್ಧ ಮತ್ತೆ ದಾಖಲಾಯ್ತು ಲೈಂಗಿಕ ದೌರ್ಜನ್ಯ ಪ್ರಕರಣ
ಇದನ್ನೂ ಓದಿ : Brahmanda Guruji Narendra Babu Sharma : ಕರ್ನಾಟಕ ಮೂರು ಭಾಗ, 3 ಮುಖ್ಯಮಂತ್ರಿ,3 ರಾಜ್ಯಪಾಲರು : ಬ್ರಹ್ಮಾಂಡ ಗುರೂಜಿ ಭವಿಷ್ಯ
Puttur Bus Stand will henceforth be ‘Koti-Chennai Bus Stand’: An important order from the Govt