Kantara: ಕೆಜಿಎಫ್​ 2, ಆರ್​ಆರ್​ಆರ್​ ಸಿನಿಮಾಗಳ ರೇಟಿಂಗ್​ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ ‘ಕಾಂತಾರ’

Kantara Highest Rated Indian Film: ಚಿತ್ರರಂಗದಲ್ಲಿ ಸದ್ಯ ಕನ್ನಡ ಫಿಲಂ ಇಂಡಸ್ಟ್ರಿ ರಾಜ್ಯಭಾರ ಮಾಡ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಸಾಲು ಸಾಲು ಹಿಟ್​ ಸಿನಿಮಾಗಳನ್ನು ನೀಡುತ್ತಿರುವ ಸ್ಯಾಂಡಲ್​ವುಡ್​​ ಮಿಕ್ಕೆಲ್ಲ ಚಿತ್ರರಂಗದವರು ತನ್ನತ್ತ ತಿರುಗಿ ನೀಡುವಂತೆ ಮಾಡ್ತಿದೆ. ಒಂದು ಕಾಲದಲ್ಲಿ ಬಾಲಿವುಡ್​ ಅಂದರೆ ಎಲ್ಲ ಕಲಾವಿದರ ಪಾಲಿಗೆ ಒಂದು ಕನಸಿನ ಇಂಡಸ್ಟ್ರಿಯಾಗಿತ್ತು. ಆದರೆ ಈಗ ಈ ಸ್ಥಾನವನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಪಡೆದುಕೊಂಡಿದೆ . ಬಾಲಿವುಡ್​ನಲ್ಲಿ ಸಾಕಷ್ಟು ಸಾಲು ಸಾಲು ಸಿನಿಮಾಗಳಲ್ಲಿ ಸೋತ ಬಳಿಕ ಬ್ರಹ್ಮಾಸ್ತ್ರ ಸಿನಿಮಾ ಹಿಟ್​ ಆಗಿತ್ತು. ಇದಾದ ಬಳಿಕ ಬಾಲಿವುಡ್​ ಮತ್ತೆ ಟೇಕಾಫ್​ ಆಯ್ತು ಅಂದುಕೊಳ್ಳುವಷ್ಟರಲ್ಲಿ ವಿಕ್ರಮ್​ ವೇದ ಸಿನಿಮಾವು ಕಳಪೆ ಪ್ರದರ್ಶನ ಕಾಣುವ ಮೂಲಕ ಬಾಲಿವುಡ್​ ಮತ್ತೆ ಗೆಲ್ಲುತ್ತೆ ಎಂಬ ಮಾತು ಪ್ರಶ್ನಾರ್ಥಕವಾಗಿಯೇ ಉಳಿಯುವಂತೆ ಮಾಡಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಮ್​ ಸೇತು ಹಾಗೂ ಥ್ಯಾಂಕ್​ಗಾಡ್​ ಸಿನಿಮಾ ರಿಲೀಸ್​ ಆಗುವವರೆಗೂ ಬಾಲಿವುಡ್​ ಮತ್ತೆ ಗೆಲ್ಲುತ್ತೆ ಎಂಬ ಯಾವ ನಿರೀಕ್ಷೆಯೂ ಇಲ್ಲ. ಮಣಿರತ್ನಂರ ಪೊನ್ನಿಯನ್​ ಸೆಲ್ವನ್​​ ಸಾರ್ವಕಾಲಿಕ ಬಾಕ್ಸಾಫೀಸು ದಾಖಲೆಗಳನ್ನು ಮುರಿದು ತಮಿಳುನಾಡು ಬಾಕ್ಸಾಫೀಸಿನಲ್ಲಿ ಅತೀ ಹೆಚ್ಚು ಗಳಿಕೆಯನ್ನು ಮಾಡಿದೆ.

ಸ್ಯಾಂಡಲ್​ವುಡ್​ನಲ್ಲಿ ಕೆಜಿಎಫ್​ 2 ಸಿನಿಮಾವು ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಈ ಸ್ಥಾನವನ್ನು ರಿಷಬ್​ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾವು ಪಡೆದುಕೊಂಡಿದೆ. ಪ್ಯಾನ್​​ ಇಂಡಿಯಾದಲ್ಲಿ ಕನ್ನಡದಲ್ಲಿಯೇ ರಿಲೀಸ್​ ಆಗಿದ್ದ ಈ ಸಿನಿಮಾ ಇದೀಗ ಭಾರೀ ಬೇಡಿಕೆಯ ಹಿನ್ನೆಲೆಯಲ್ಲಿ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್​ ಆಗಿದೆ.

ಕಾಂತಾರ ಸಿನಿಮಾವು ಕನ್ನಡದಲ್ಲಿ ತನ್ನ ಐತಿಹಾಸಿಕ ಓಟವನ್ನು ಮುಂದುವರಿಸುತ್ತಿರುವ ನಡುವೆಯೇ ರಿಷಬ್​ ಶೆಟ್ಟಿ ಅಭಿನಯದ ಈ ಚಲನಚಿತ್ರವು ಇಂಟರ್ನೆಟ್​ ಮೂವಿ ಡೇಟಾಬೇಸ್​ನಲ್ಲಿ ಅತ್ಯಧಿಕ ರೇಟಿಂಗ್​ ಪಡೆದ ಭಾರತೀಯ ಸಿನಿಮಾವಾಗಿದೆ. ಹಾಗೂ ಈ ಮೂಲಕ ಆರ್​ಆರ್​ಆರ್​ ಹಾಗೂ ಕೆಜಿಎಫ್​ 2 ಸಿನಿಮಾಗಳ ದಾಖಲೆಗಳನ್ನು ಉಡೀಸ್​ ಮಾಡಿದೆ. 13181 ವೋಟ್​ಗಳ ಮೂಲಕ ಕಾಂತಾರ ಸಿನಿಮಾವು ಪ್ರಸ್ತುತ 9.5 ರೇಟಿಂಗ್​ಗಳನ್ನು ಪಡೆದುಕೊಂಡಿದೆ.

ಎಸ್​.ಎಸ್​ ರಾಜಮೌಳಿ ಜಾಗತಿಕ ಬ್ಲಾಕ್​ಬಸ್ಟರ್​ ಆರ್​ಆರ್​ಆರ್​ 8.0 ರೇಟಿಂಗ್​ ಪಡೆದುಕೊಂಡಿದೆ. ಪ್ರಶಾಂತ್​ ನೀಲ್​ ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್​​ನ ಕೆಜಿಎಫ್​ ಚಾಪ್ಟರ್​ 2 ಸಿನಿಮಾವು 8.4 ರೇಟಿಂಗ್​ ಪಡೆದುಕೊಂಡಿದೆ. ಕಾಶ್ಮೀರಿ ಫೈಲ್ಸ್​ 8.3 ಹಾಗೂ ಕಾರ್ತಿಕೇಯ 8.1 ರೇಟಿಂಗ್​ ಪಡೆದುಕೊಂಡಿದೆ.

ಇದನ್ನು ಓದಿ : Puttur Bus Stand:ಪುತ್ತೂರು ಬಸ್​ ನಿಲ್ದಾಣ ಇನ್ಮುಂದೆ ‘ಕೋಟಿ -ಚೆನ್ನಯ್ಯ ಬಸ್​ ನಿಲ್ದಾಣ’ : ಸರ್ಕಾರದಿಂದ ಮಹತ್ವದ ಆದೇಶ

ಇದನ್ನೂ ಓದಿ : Ajaideh Randam Moshanam:ಸೆಟ್ಟೇರಿತು ‘ಅಜಯಂತೆ ರಂದಂ ಮೋಷನಂ’- 3ಡಿಯಲ್ಲಿ ಮೋಡಿ ಮಾಡಲಿದ್ದಾರೆ ಟೊವಿನೋ ಥಾಮಸ್, ಕೃತಿ ಶೆಟ್ಟಿ..!

Kannada Epic ‘Kantara’ Beats ‘RRR’ & ‘KGF 2’ To Become The Highest Rated Indian Film On IMDb

Comments are closed.