ಪುತ್ತೂರು : ಬೆಳ್ಳಂಬೆಳಗ್ಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೋಳುವಾರಿನಲ್ಲಿ ಅಗ್ನಿದುರಂತ ಸಂಭವಿಸಿದೆ. ಸತತ ಮೂರು ಗಂಟೆಗಳ ಕಾಲ ಸ್ಟುಡಿಯೋ, ಸೆಲೂನ್, ಮೊಬೈಲ್ ಶಾಪ್, ತರಕಾರಿ ಅಂಗಡಿಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಹೊತ್ತಿ ಉರಿದಿವೆ.

ಪುತ್ತೂರಿನ – ಉಪ್ಪಿನಂಗಡಿ ರಸ್ತೆಯ ಆಂಜನೇಯ ಮಂತ್ರಾಯಲದ ಬಳಿಯಿಂದ ಪುತ್ತೂರು ಮುಖ್ಯರಸ್ತೆಯನ್ನು ಸಂರ್ಪಕಿಸುವ ಏಕಮುಖ ರಸ್ತೆಯ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಆರಂಭದಲ್ಲಿ ಹ್ಯಾರಿಂಗ್ ಸ್ಟುಡಿಯೋ ಸೆಲೂನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮಿಸಿದ ಹೈವೆ ಪೆಟ್ರೋಲ್ ಸಿಬ್ಬಂದಿಗಳು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸತತ ಮೂರು ಗಂಟೆಗಳ ಕಾಲ ಹೊತ್ತಿ ಉರಿದ ಬೆಂಕಿಯಿಂದಾಗಿ ಹ್ಯಾರಿಂಗ್ ಸ್ಟುಡಿಯೋ ಸೆಲೂನ್. ಡಿ.ಕೆ.ಮೊಬೈಲ್, ತರಕಾರಿ ಅಂಗಡಿ ಮಾತ್ರವಲ್ಲದೇ ಹೋಟೆಲ್ ನ ಒಂದು ಭಾಗ ಬೆಂಕಿಯಲ್ಲಿ ಸುಟ್ಟು ಹೋಗಿದೆ. ಕೊನೆಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗಘಡ ಸಂಭವಿಸಿದೆ ಎನ್ನಲಾಗುತ್ತಿದೆ.