ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಹುಂಡೈ : ಸ್ಯಾಂಟ್ರೊ, ​​ಸೆಡಾನ್​ ಕಾರು ಬೆಲೆಯಲ್ಲಿ ಭಾರೀ ಡಿಸ್ಕೌಂಟ್

0

ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆಯಾಗಿರುವ ಹುಂಡೈ ತನ್ನ ಗ್ರಾಹಕರಿಗೆ ಭರ್ಜರಿ ಆಫರ್​ ನೀಡಿದೆ. ದೀಪಾವಳಿಯ ಪ್ರಯುಕ್ತ ಈ ಡಿಸ್ಕೌಂಟ್ ಆಫರ್ ಘೋಷಿಸಿದೆ.

ಹಬ್ಬದ ದಿನದಂದು ಕಾರು ಖರೀದಿಸಲು ಪ್ಲ್ಯಾನ್ ಮಾಡಿದವರಿಗೆ ಅನುಕೂಲವಾಗಿದೆ. ಅದ್ರಲ್ಲೂ ಸ್ಯಾಂಟ್ರೋ, ಸೇಡಾನ್ ಕಾರಿನ ಮೇಳೆ ಭರ್ಜರಿ ಆಫರ್ ಘೋಷಿಸಿದೆ.

ಹುಂಡೈ ಪ್ರಮುಖವಾಗಿ ಸ್ಯಾಂಟ್ರೊ, ಗ್ರಾಂಡ್​​10, ಗ್ರಾಂಡ್​​ ಐ10 ನಿಯೋಸ್​, ಸೆಡಾನ್​ ಕಾರುಗಳಾದ ಎಲೆನ್ಟ್ರಾ, ಔರಾ ಕಾರಿನ ಮೇಲೆ ಆಫರ್​ ನೀಡಿದೆ. ಅಷ್ಟೇ ಅಲ್ಲದೇ ವೆನ್ಯು, ಕ್ರೆಟಾ 2020, ವರ್ನಾ ಕಾರಿನ್ನು ಡಿಸ್ಕೌಂಟ್​ ಬೆಲೆ ಮಾರಾಟ ಮಾಡುತ್ತಿದೆ.

ಸ್ಯಾಂಟ್ರೋ ಕಾರಿನ ಮೇಲೆ 25 ಸಾವಿರ ಡಿಸ್ಕೌಂಟ್​ ಜೊತೆಗೆ 15 ಸಾವಿರ ಎಕ್ಸ್​ಚೇಂಜ್​ ಬೋನಸ್​, 5 ಸಾವಿರ ಕಾರ್ಪೊರೇಟ್​ ಬೋನಸ್​ ಘೋಷಿಸಿದೆ. ಅಷ್ಟೇ ಅಲ್ಲದೇ 15 ಸಾವಿರ ಕ್ಯಾಶ್​​ ಡಿಸ್ಕೌಂಟ್​ ನೀಡುತ್ತಿದೆ.

ಗ್ರಾಂಡ್​ ಐ10 ಪ್ರೆಟ್ರೋಲ್​ ಮಾಡೆಲ್​ ಕಾರಿನ ಮೇಲೆ 40 ಸಾವಿರ ಡಿಸ್ಕೌಂಟ್​​, 15 ಸಾವಿರ ಎಕ್ಸ್​ಚೇಂಜ್​ ಬೋನಸ್​​, 5 ಸಾವಿರ ಕಾರ್ಪೋರೇಟ್​ ಬೋನಸ್​ ನೀಡುತ್ತಿದೆ.

ಗ್ರಾಂಡ್​ ಐ10 ನಿಯೋಸ್​ ಕಾರಿನ ಮೇಲೆ 10 ಸಾವಿರ ಡಿಸ್ಕೌಂಟ್​, 10 ಸಾವಿರ ಎಕ್ಸ್​ಚೇಂಜ್​ ಬೋನಸ್​, 5 ಸಾವಿರ ಕಾರ್ಪೊರೇಟ್​ ಬೆನಿಫಿಟ್​ ನೀಡುತ್ತಿದೆ.

ಹುಂಡೈ ಎಲೈಟ್​ ಕಾರಿನ ಮೇಲೆ 50 ಸಾವಿರ ಡಿಸ್ಕೌಂಟ್​, 20 ಸಾವಿರ ಎಕ್ಸ್​ಚೇಂಜ್​ ಬೆನಿಫಿಟ್​, 5 ಸಾವಿರ ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ.

Leave A Reply

Your email address will not be published.