janmastami in udupi : ಕೃಷ್ಣನೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ: ನಾಳೆ ವಿಟ್ಲಪಿಂಡಿ ಸಡಗರ

ಉಡುಪಿ : janmastami in udupi : ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ದೇವಾಲಯಗಳ ಊರು ಉಡುಪಿಯಲ್ಲಿ ಸಂಭ್ರಮ ಜೋರಾಗಿದೆ. ಪ್ರಸಿದ್ಧ ಶ್ರೀಕೃಷ್ಣ ಮಠದಲ್ಲಿ ಇಂದು ಜನ್ಮಾಷ್ಟಮಿ ಸಂಭ್ರಮ ನಡೆಯಲಿದ್ದು ನಾಳೆ ವಿಟ್ಲಪಿಂಡಿ ಉತ್ಸವ ನೆರವೇರಲಿದೆ. ಪರ್ಯಾಯ ಕೃಷ್ಣಾಪುರ ಮಠದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ವಿಟ್ಲಪಿಂಡ ಉತ್ಸವದಲ್ಲಿ ಭಾಗಿಯಾಗಲು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಕೃಷ್ಣನೂರಿಗೆ ಆಗಮಿಸುತ್ತಿದ್ದಾರೆ.


ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ ವೇಳೆಗೆ ಶ್ರೀಕೃಷ್ಣನಿಗೆ ಅರ್ಘ್ಯವನ್ನು ಪ್ರದಾನ ಮಾಡಲಾಗುತ್ತದೆ. ಜನ್ಮಾಷ್ಟಮಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೃಷ್ಣಾಪುರ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಸಹಿತ ಕೃಷ್ಣ ಭಕ್ತರು ನಿರ್ಜಲ ಉಪವಾಸದಲ್ಲಿದ್ದಾರೆ. ಇಂದು ಮಧ್ಯರಾತ್ರಿ ಕೃಷ್ಣ ಪೂಜೆಯನ್ನು ನೆರವೇರಿಸಿ 12:21ರ ಬಳಿಕ ಪೊಡವಿಗೊಡೆಯನಿಗೆ ಅರ್ಘ್ಯ ಪ್ರದಾನ ನಡೆಯಲಿದೆ.


ಹೀಗಾಗಿ ಕೃಷ್ಣ ದೇವರಿಗೆ ಸರ್ಮಪಣೆ ಮಾಡಲು ವಿವಿಧ ರೀತಿಯ ಉಂಡೆಗಳನ್ನು ತಯಾರಿಸಲಾಗುತ್ತೆ. ಅಲ್ಲದೇ ಭಕ್ತರಿಗೆ ನೀಡಲೆಂದು ಚಕ್ಕುಲಿ ಹಾಗೂ ಉಂಡೆಗಳನ್ನು ತಯಾರಿಸಲಾಗುತ್ತಿದೆ.ಮಠದಲ್ಲಿರುವ ಬಾಣಸಿಗರು ಚಕ್ಕುಲಿ, ಗುಂಡಿಟ್ಟು ಲಾಡು, ಅರಳುಂಡೆ, ನೆಲಕಡ್ಲೆ ಲಾಡು, ಹೆಸರಿಟ್ಟು ಲಾಡು, ಕಡ್ಲೆ ಹಾಗೂ ಎಳ್ಳು ಉಂಡೆ, ಶುಂಠಿ, ಗೋಡಂಬಿ ಲಾಡುಗಳನ್ನು ತಯಾರಿಸುತ್ತಿದ್ದಾರೆ. ವಿಟ್ಲಪಿಂಡಿಯ ದಿನದಂದು ಭಕ್ತರಿಗೆ ಪ್ರಸಾದದ ರೂಪವಾಗಿ ಇದನ್ನು ನೀಡಲಾಗುತ್ತದೆ. ಕಳೆದ 2 ವರ್ಷಗಳಿಂದ ಕೋವಿಡ್​ ಹಾಗೂ ಲಾಕ್​​ಡೌನ್​​ನ ಕಾರಣದಿಂದಾಗಿ ಕೃಷ್ಣನೂರಿನಲ್ಲಿ ವಿಟ್ಲಪಿಂಡಿಯ ಆಚರಣೆಯನ್ನು ಅಷ್ಟೊಂದು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ . ಆದರೆ ಈ ಬಾರಿ ಅಷ್ಟಮಿ ಆಚರಣೆಗೆ ಯಾವುದೇ ಅಡೆತಡೆಗಳು ಇರದ ಕಾರಣ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಯಾರಿ ಭರದಿಂದ ಸಾಗುತ್ತಿದೆ.


ವಿಟ್ಲಪಿಂಡಿ ಉತ್ಸವಕ್ಕಾಗಿ ರಥಬೀದಿಯಲ್ಲಿ ಆಕರ್ಷಕ ಮಂಟಪಗಳು, ಗುರ್ಜಿಗಳು ಹಾಗೂ ಹಾಲು, ಮೊಸರು, ಓಕುಳಿ ತುಂಬಿದ ಮಡಿಕೆಗಳನ್ನು ಸಿದ್ಧಪಡಿಸಲಾಗಿದೆ. ರಥಬೀದಿಯಲ್ಲಿ ಕೇದಗೆ ಒಲಿ ಖೊಟ್ಟೆ ಮಾರಾಟ, ಪೇಟ್ಲ ಕಾಯಿಗಳ ಮಾರಾಟ ಕಾರ್ಯಗಳು ಭರದಿಂದ ಸಾಗಿದೆ. ಅಲ್ಲದೇ ಕರಾವಳಿಯ ಹೆಮ್ಮೆ ಹುಲಿ ವೇಷ ಕುಣಿತ ಕೂಡ ಇರಲಿದೆ. ನಾಳೆ ಮಧ್ಯಾಹ್ನದ ವೇಳೆಗೆ ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.


ಇಂದು ಬೆಳಗ್ಗೆಯಿಂದಲೇ ಕೃಷ್ಣ ಮಠದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಈಗಾಗಲೇ ಆರಂಭಿಸಲಾಗಿದೆ. ಸರ್ಕಾರವೇ ಜನ್ಮಾಷ್ಟಮಿಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಉಡುಪಿಯ ಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಕೇಂದ್ರ ಬಿಂದುವೆಂದರೆ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ. ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಶ್ರೀ ಕೃಷ್ಣ ಮಠದ ಪರಿಸರಕ್ಕೆ ಆಗಮಿಸುತ್ತಾರೆ.

ಇದನ್ನು ಓದಿ : Kichcha Sudeep next movie : ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು : ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ

ಇದನ್ನೂ ಓದಿ : Former minister KS Eshwarappa : ಡಿ.ಕೆ ಶಿವಕುಮಾರ್​, ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಗುಡುಗು

sri krishna janmastami in udupi tommrow vitla pindi

Comments are closed.