ಕಾಪು ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ನಾಮಪತ್ರ ಸಲ್ಲಿಕೆ

ಕಾಪು : (Suresh Shetty nomination) ಚುನಾವಣೆ ಸಮೀಪಿಸುತ್ತಿದ್ದು, ನಾಮಪತ್ರ ಸಲ್ಲಿಕೆಯ ದಿನವೂ ಮುಗಿಯುತ್ತಾ ಬಂದಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಇಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಬೆಳಿಗ್ಗೆ 10 ಗಂಟೆಗೆ ಕಾಪು ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸಮಾವೇಶ ನಡೆಸಿದ್ದು, ಇದರಲ್ಲಿ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಪ್ರದಾನ ಭಾಷಣ ಮಾಡಿದರು. ಸಮಾವೇಶದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್‌ ಕುಮಾರ್‌, ಶಾಸಕರಾದ ಲಾಲಾಜಿ ಆರ್.‌ ಮೆಂಡನ್‌, ರಘುಪತಿ ಭಟ್‌ ಉಪಸ್ಥಿತರಿದ್ದರು. ಸಮಾವೇಶದ ಬಳಿಕ ಜನಾರ್ದನ ದೇವಸ್ಥಾನದಿಂದ ತಾಲೂಕು ಆಡಳಿತ ಸೌಧದವರೆಗೆ ಪಾದಯಾತ್ರೆ ಮೂಲಕ ಸಾಗಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಕಳೆದ ಐದಾರು ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದ ಸಂದರ್ಭ ಸುರೇಶ್‌ ಶೆಟ್ಟಿ ಗುರ್ಮೆ ಅವರ ಸಂಘಟನಾತ್ಮಕ ಗುಣ ಬಿಜೆಪಿಗೆ ಸಾಕಷ್ಟು ಲಾಭ ತಂದಿತ್ತು. ಸುರೇಶ್ ಶೆಟ್ಟಿ ಕಾಪು ಮೂಲದವರು. 2013ರ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಭಾವ್ಯ ಅಭ್ಯರ್ಥಿಯಾಗಿ ಅವರ ಹೆಸರು ಕೇಳಿಬಂದಿತ್ತು.

ಇದನ್ನೂ ಓದಿ : Prasad Raj Kanchan Nomination : ಉಡುಪಿ : ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ ರಾಜ್‌ ಕಾಂಚನ್‌ ನಾಮಪತ್ರ ಸಲ್ಲಿಕೆ

ಇದನ್ನೂ ಓದಿ : PM Modi to Udupi : ಉಡುಪಿಗೆ ಮೇ 4ಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಸಾಧ್ಯತೆ

ಬಳ್ಳಾರಿ ನಗರಕ್ಕೆ ಬಂದು ಹೊಟೇಲ್ ಉದ್ಯಮ ಆರಂಭಿಸಿದ್ದಲ್ಲದೆ. ಅನೇಕರಿಗೆ ಉದ್ಯೋಗ ನೀಡಿದ್ದರು. ಅಷ್ಟೇ ಅಲ್ಲದೆ ಅವರ ಸಮಾಜ ಸೇವೆ, ಸಾಂಸ್ಕೃತಿಕ ವಲಯ, ಸಾಹಿತ್ಯ ವಲಯದಲ್ಲಿ ತೊಡಗಿಸಿಕೊಂಡು ಸ್ನೇಹ ಜೀವಿಗಳಾಗಿದ್ದರು. ಅವರು ತುಂಗಭದ್ರ ಬಂಟರ್ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನಷ್ಟು ಜನ ಸೇವೆಗೆಂದು ಬಯಸಿದ್ದ ಅವರು ತಮ್ಮ ತವರು ಕ್ಷೇತ್ರ ಕಾಪುವಿನ ಶಾಸಕರಾಗಲು ಬಯಸಿ ರಾಜಕೀಯ ವಲಯಕ್ಕೆ ಕಾಲಿಟ್ಟಿದ್ದಾರೆ.

Suresh Shetty nomination: BJP candidate for Kapu Assembly Constituency Gurme Suresh Shetty submission of nomination papers

Comments are closed.