Swami Vivekananda Jayanti controversy : ಬಾರಕೂರಲ್ಲಿ ವಿವೇಕಾನಂದ ಜಯಂತಿ ಆಚರಣೆಗೆ ಉಪನ್ಯಾಸಕಿ ವಿರೋಧ : ಪೊಲೀಸರಿಗೆ ದೂರು

ಬ್ರಹ್ಮಾವರ: ವಿಶ್ವಕ್ಕೆ ಬ್ರಾತೃತ್ವದ ಸಂದೇಶದ ಸಾರಿದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯುವ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸುವಂತೆ ಸೂಚಿಸಿವೆ. ಆದರೆ ಕಾಲೇಜಿನಲ್ಲಿ ವಿವೇಕಾನಂದ ದಿನಾಚರಣೆಯನ್ನು ಆಚರಿಸಲು ಉಪನ್ಯಾಸಕಿಯೋರ್ವರು ಅಡ್ಡಿಪಡಿಸಿದ್ದಾರೆ ( Swami Vivekananda Jayanti controversy ). ಅಲ್ಲದೇ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರ ಹಾಕಿದ ಘಟನೆ ಉಡುಪಿ ಜಿಲ್ಲೆಯ ಬಾರಕೂರಿನ ರುಕ್ಮಿಣಿ ಶೆಡ್ತಿ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ರಾಜ್ಯ ಸರಕಾರದ ಆದೇಶವಿದ್ದರೂ ಕೂಡ ಕಾಲೇಜಿನಲ್ಲಿ ವಿವೇಕಾನಂದ ಜಯಂತಿಯನ್ನು ಆಚರಣೆ ಮಾಡಲಿಲ್ಲ. ಆದರೆ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಯುವದಿನಾಚರಣೆಯನ್ನು ಆಚರಿಸಿದ್ದಾರೆ. ಕಾಲೇಜಿನ ಉಪ ಪ್ರಾಂಶುಪಾಲರು ಕಾರ್ಯಕ್ರಮ ಆಚರಣೆಗೆ ಅನುಮತಿಯನ್ನು ನೀಡಿದ್ದರೂ ಕೂಡ ಕಾಲೇಜಿನ ಉಪನ್ಯಾಸಕಿಯೋರ್ವರು ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಚರಿಸಿದ್ದು, ಕಾಲೇಜಿನ ಇತಿಹಾಸ ಉಪನ್ಯಾಸಕರು ವಿವೇಕಾನಂದರ ಸಾಧನೆಯ ಬಗ್ಗೆ ಭಾಷಣ ಮಾಡಿದ್ದಾರೆ.

ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು, ಉಪನ್ಯಾಸಕರ ದೂರು

ಕಾರ್ಯಕ್ರಮ ಮುಗಿದ ನಂತರದಲ್ಲಿ ಉಪನ್ಯಾಸಕಿ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ನೀಡದೆ ಹೊರಹಾಕಿದ್ದಾರೆ. ಹಲವು ದಿನಗಳಿಂದ ನಮಗೆ ತರಗತಿ ವಂಚಿತವಾಗಿದ್ದೇವೆ ಈ ಕುರಿತು ತನಗೆ ನ್ಯಾಯ ಒದಗಿಸಿ ಕೊಡಬೇಕೆಂದು ವಿದ್ಯಾರ್ಥಿಗಳು ಉಪನ್ಯಾಸಕಿಯ ವಿರುದ್ದ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತಿಹಾಸ ಉಪನ್ಯಾಸಕರಾದ ಅರುಣ್‌ ಕುಮಾರ್‌ ಅವರಿಗೆ ಕೂಡ ತರಗತಿಗೆ ಪಾಠ ಮಾಡಲು ತೆರಳುವಾಗ ಉಪನ್ಯಾಸಕಿ ಅನ್ನಪೂರ್ಣ ಹಾಗೂ ಸಹಾಯಕ ಪ್ರಾಧ್ಯಾಪಕ ಕಾರ್ತಿಕ್‌ ಪೈ ಎಂಬವರು ಅಡ್ಡಿಪಡಿಸಿದ್ದಾರೆ. ಈ ಕುರಿತು ತನಿಖೆಯನ್ನು ನಡೆಸಿ ತನಗೆ ಪಾಠ ಮಾಡಲು ಅವಕಾಶ ಕಲ್ಪಿಸಬೇಕೆಂದು ಪ್ರಾಂಶುಪಾಲಕರಿಗೆ ಉಪನ್ಯಾಸಕ ಅರುಣ್‌ ಕುಮಾರ್‌ ದೂರು ನೀಡಿದ್ದರು.

ಪೊಲೀಸರಿಗೆ ದೂರು ಕೊಟ್ಟ ಉಪನ್ಯಾಸಕಿ

ಆದರೆ ಕಾರ್ಯಕ್ರಮ ನಡೆದ ಮೂರು ದಿನಗಳ ನಂತರ, ಇತಿಹಾಸ ಉಪನ್ಯಾಸಕರು ತನಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಉಪನ್ಯಾಸಕಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಅಷ್ಟೇ ಅಲ್ಲಾ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಗ್ರಂಥ ಪಾಲಕರ ಹೆಸರನ್ನು ಕೂಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ತನಗೆ ನ್ಯಾಯ ಒದಗಿಸುವಂತೆ ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ.

ಒಟ್ಟಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಲುವಾಗಿ ಬಾರಕೂರಿನಲ್ಲಿ ಆರಂಭಗೊಂಡಿದ್ದ ಕಾಲೇಜು ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಈ ಕುರಿತು ಸರಕಾರ ಹಾಗೂ ಶಿಕ್ಷಣ ಇಲಾಖೆ ಮಧ್ಯ ಪ್ರವೇಶಿಸಿ ಕಾಲೇಜಿನ ಉಪನ್ಯಾಸಕರ ನಡುವಿನ ಗೊಂದಲ ಪರಿಹರಿಸಬೇಕಾಗಿದೆ. ಜೊತೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯಿದೆ.

ಇದನ್ನೂ ಓದಿ : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?

ಇದನ್ನೂ ಓದಿ : ಜಿಲ್ಲಾ ಕಾಂಗ್ರೆಸ್ಸಿನಿಂದ ನಾರಾಯಣ ಗುರು ಸ್ವಾಭಿಮಾನ ಯಾತ್ರೆ, ಯುವ ಕಾಂಗ್ರೆಸ್ಸಿನಿಂದ ರಕ್ತದಾನ ಶಿಬಿರ !

( Swami Vivekananda Jayanti controversy, Lecturer opposition to celebration in Barkur complained to police)

Comments are closed.