ಭಾನುವಾರ, ಏಪ್ರಿಲ್ 27, 2025
HomeCoastal Newsಪುಟ್ಟ ಮಗುವನ್ನು ಕಾಡುತ್ತಿದೆ ಭಯಾನಕ ತಾಲಸೀಮಿಯಾ ! ಬಾಬಣ್ಣ ಪೂಜಾರಿ ಅವರ ಬಡ ಕುಟುಂಬಕ್ಕೆ ಬೇಕಿದೆ...

ಪುಟ್ಟ ಮಗುವನ್ನು ಕಾಡುತ್ತಿದೆ ಭಯಾನಕ ತಾಲಸೀಮಿಯಾ ! ಬಾಬಣ್ಣ ಪೂಜಾರಿ ಅವರ ಬಡ ಕುಟುಂಬಕ್ಕೆ ಬೇಕಿದೆ ನೆರವಿನ ಹಸ್ತ

- Advertisement -

ಕುಂದಾಪುರ : ಅವರದ್ದು ಬಡ ಕುಟುಂಬ ಆದರೂ ಮುದ್ದಾದ ಮಗಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿ ದೇಶದ ಉನ್ನತ ಹುದ್ದೆಗೇರಿಸ ಬೇಕೆಂಬ ಕನಸು ಕಂಡಿದ್ದರು. ಆದ್ರೆ ಮಗು ಹುಟ್ಟಿ 4 ತಿಂಗಳು ಕಳೆಯುವಷ್ಟರಲ್ಲಿಯೇ ಆ ದಂಪತಿಗಳಿಗೆ ಶಾಕ್ ಎದುರಾಗಿದೆ. ಅತ್ಯಂತದ ಅಪರೂಪದ ತಾಲಸೀಮಿಯಾ ಅನ್ನೋ ಭಯಾನಕ ಕಾಯಿಲೆ ಮಗುವನ್ನು ಕಾಡುತ್ತಿದ್ದು, ಬಡ ಕುಟುಂಬವೀಗ ಕಣ್ಣೀರಲ್ಲೇ ಕೈತೊಳೆಯುತ್ತಿದೆ.

ಹೀಗೆ ಮುದ್ದು ಮುದ್ದಾಗಿರೋ ಈ ಮುದ್ದು ಮಗುವಿನ ಹೆಸರು ತನುಶ್ರೀ. ಈಗಿನ್ನೂ ಐದು ವರ್ಷ ವಯಸ್ಸು. ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ಬಾಬಣ್ಣ ಪೂಜಾರಿ ಹಾಗೂ ಗೀತಾ ಪೂಜಾರ್ತಿ ದಂಪತಿಗಳ ಮಗಳು. ಶಾಲೆಗೆ ಸೇರಿಸಬೇಕಾಗಿದ್ದ ವಯಸ್ಸಲ್ಲೀಗ ದಂಪತಿ ಮಗಳನ್ನು ಉಳಿಸಿಕೊಳ್ಳುವುದಕ್ಕೆ ಕಂಡ ಕಂಡವರಲ್ಲಿ ಸಹಾಯಕ್ಕೆ ಮೊರೆಯಿಡುತ್ತಿದ್ದಾರೆ.

ತನುಶ್ರೀ 4 ತಿಂಗಳ ಮಗುವಿದ್ದಾಗ ಅನಾರೋಗ್ಯ ಕಾಡಿತ್ತು. ಈ ವೇಳೆಯಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ಮಗುವು ತಾಲಸೀಮಿಯಾ ಅನ್ನೋ ಭಯಾನಕ ಕಾಯಿಲೆಯಿಂದ ಬಳಲುತ್ತಿರೋದಾಗಿ ಹೇಳಿದ್ದಾರೆ. ಇದರಿಂದಾಗಿ ಬಡ ದಂಪತಿಗಳಿಗೆ ಆಘಾತ ಎದುರಾಗಿತ್ತು. ಲಕ್ಷದಲ್ಲಿ ಓರ್ವರನ್ನು ಮಾತ್ರವೇ ಈ ತಾಲಸೀನಿಮಾ ಕಾಡುತ್ತೆ.

ಹೇಗಾದ್ರೂ ಮಾಡಿ ಮಗಳನ್ನು ಉಳಿಸಿಕೊಳ್ಳಲೇ ಬೇಕೆಂದು ತಣತೊಟ್ಟ ದಂಪತಿ ಸಾಲ ಸೋಲ ಮಾಡಿ ಮಗಳಿಗೆ ಪ್ರತೀ ತಿಂಗಳು 10 ರಿಂದ 20 ಸಾವಿರ ರೂಪಾಯಿ ವ್ಯಯಿಸಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ನಂತರ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ವೈದ್ಯರನ್ನು ಸಂಪರ್ಕ ಮಾಡಿದಾಗ ತಾಲಸೀಮಿಯಾ ಮೊದಲ ಹಂತದಲ್ಲಿದ್ದು, ಬೋನ್ ಮ್ಯಾರೋ ಕಸಿ ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ರೆ ಸರಿಯಾಗುತ್ತೆ ಅಂತಾ ಸೂಚಿಸಿದ್ದಾರೆ.

ಆದರೆ ಈ ಶಸ್ತ್ರ ಚಿಕಿತ್ಸೆಯನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ. ಬೋನ್ ಮ್ಯಾರೋ ದಾನಿಗಳ ಜೊತೆಗೆ ಶಸ್ತ್ರ ಚಿಕಿತ್ಸೆಗೆ ಬರೋಬ್ಬರಿ 18 ರಿಂದ 20 ಲಕ್ಷ ರೂಪಾಯಿ ವೆಚ್ಚ ತಗಲುತ್ತಿದೆ. ಆದರೆ ಮಗುವಿನ ತಾಯಿಯ ಬೋನ್ ಮ್ಯಾರೋ ಮ್ಯಾಚ್ ಆಗಿದೆ. ಆದರೆ ಲಕ್ಷಾಂತರ ರೂಪಾಯಿ ಹಣವನ್ನು ಹೊಂದಿಸುವುದು ಕಷ್ಟ ಸಾಧ್ಯವಾಗಿದೆ.

ಲಾಕ್ ಡೌನ್ ವೇಳೆಯಲ್ಲಿ ಕೆಲಸವಿಲ್ಲದಿದ್ದರೂ ಕೂಡ ದಂಪತಿಗಳು ಮನೆಯಲ್ಲಿದ್ದ ಚಿನ್ನ, ಆಸ್ತಿಯನ್ನು ಅಡವಿಟ್ಟು ಮಗಳಿಗೆ ಬೆಂಗಳೂರಿನಲ್ಲಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಆದರೆ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟಸಾಧ್ಯ. ಮಗುವಿನ ನೆರವಿಗಾಗಿ ಸರಕಾರಗಳಿಗೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬಡ ಕುಟುಂಬವೀಗ ಸರಕಾರ, ಸಂಘ ಸಂಸ್ಥೆ ಹಾಗೂ ದಾನಿಗಳಲ್ಲಿ ನೆರವು ನೀಡುವಂತೆ ಮನವಿ ಮಾಡುತ್ತಿದೆ.

ಹೊತ್ತಿನ ತುತ್ತಿಗಾಗಿ ಕೂಲನಾಲಿ ಮಾಡಿ ಬದುಕು ಸಾಗಿಸುತ್ತಿರುವ ಈ ಬಡ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಿ ಚಿಕಿತ್ಸೆ ಕೊಡಿಸುವುದು ಸಾಧ್ಯವಿಲ್ಲ. ತಾಯಿಯ ಬೋನ್ ಮ್ಯಾರೋ ಮಗುವಿನೊಂದಿಗೆ ಹೊಂದಾಣಿಕೆಯಾಗಿದ್ದು, ಕಸಿ ಶಸ್ತ್ರ ಚಿಕಿತ್ಸೆ ಮಾಡಿಸಬೇಕಾಗಿದೆ. ದಾನಿಗಳು ಹಾಗೂ ಸರಕಾರ ನೆರವಿನ ಹಸ್ತವನ್ನು ಚಾಚಿದ್ರೆ ಖಂಡಿತಾ ಬಡಕುಟುಂಬದ ಮೊಗದಲ್ಲಿ ನಗು ಅರಳುವುದಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ಬಾಬಣ್ಣ ಪೂಜಾರಿ ಅವರ ಕುಟುಂಬಕ್ಕೆ ನೆರವಿನ ಹಸ್ತ ಚಾಚಬೇಕಾಗಿದೆ.

ಈ ಬಡ ಕುಟುಂಬಕ್ಕೆ ನೆರವಾಗ ಬಯಸುವವರು ಈ ಕೆಳಕಂಡ ಖಾತೆಗೆ ಹಣವನ್ನು ಜಮಾ ಮಾಡಬಹುದಾಗಿದೆ.

Babanna Poojary

Account number : 0647101057574

IFSC CODE : CNRB0000647

CANARA BANK BELVE BRANCH

MOBILE : 9845684701

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular