ನಿಮ್ಮ ಪಾಲಿಸಿ ಲ್ಯಾಪ್ಸ್ ಆಗಿದೆಯಾ ? ಪುನರುಜ್ಜೀವ ಗೊಳಿಸಲು ಅವಕಾಶ ಕಲ್ಪಿಸಿದೆ LIC

0

ನಿಮ್ಮ ಜೀವವಿಮಾ ಪಾಲಿಸಿ ಲ್ಯಾಪ್ಸ್ ಆಗಿದೆಯಾ ? ಪಾಲಿಸಿಗಳನ್ನು ಆರ್ಧಕ್ಕೆ ಕಟ್ಟಿ ನಿಲ್ಲಿಸಿದ್ದೀರಾ ? ಹಾಗಾದ್ರೆ ಲ್ಯಾಪ್ಸ್ ಆಗಿರುವ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸುವ ಕುರಿತು ಎಲ್ ಐಸಿ ಅವಕಾಶವೊಂದನ್ನು ಕಲ್ಪಿಸಿದೆ.

ಲ್ಯಾಪ್ಸ್ ಆಗಿರುವ ಪಾಲಿಸಿಗಳ ಪುನರುಜ್ಜೀವಗೊಳಿಸುವ ಕುರಿತು ಅಗಸ್ಟ್ 10 ರಿಂದ ಆರಂಭವಾಗಿದ್ದು, ಅಕ್ಟೋಬರ್ 9ರ ವರೆಗೂ ಅವಕಾಶವನ್ನು ಕಲ್ಪಿಸಲಾಗಿದೆ.

ಪಾಲಿಸಿ ಪುನರುಜ್ಜೀವನಕ್ಕೆ ವಿಳಂಬ ಶುಲ್ಕದಲ್ಲಿ ರಿಯಾಯಿತಿ ಇದಾಗಿದ್ದು, 1 ಲಕ್ಷದ ವರೆಗಿನ ಮೊತ್ತಕ್ಕೆ ಶೇ. 20 ಅಥವಾ ಗರಿಷ್ಠ ರಿಯಾಯಿತಿ ಮಿತಿ 1,500 ರೂಪಾಯಿ ಹಾಗೂ 1 ಲಕ್ಷದಿಂದ 3 ಲಕ್ಷದ ವರೆಗೆ ಶೇ. 20 ಅಥವಾ ಗರಿಷ್ಠ ಮಿತಿ 2,000 ಹಾಗೂ 3 ಲಕ್ಷಕ್ಕೂ ಮೇಲ್ಪಟ್ಟ ಪಾಲಿಸಿಗಳಿಗೆ ಶೇ. 30 ಅಥವಾ 2,500 ರೂಪಾಯಿ ಗರಿಷ್ಠ ರಿಯಾಯಿತಿ ಮಿತಿಯನ್ನು ನೀಡಲಾಗುತ್ತಿದೆ.

ಟರ್ಮ್ ಅಶ್ಯೂರೆನ್ಸ್, ಹೆಲ್ತ್ ಇನ್ಶ್ಯೂರೆನ್ಸ್, ಮಲ್ಟಿಪಲ್ ರಿಸ್ಕ್ ಪಾಲಿಸಿ ಸೇರಿದಂತೆ ಇತ್ಯಾದಿ ಹೈ ರಿಸ್ಕ್ ಪಾಲಿಸಿಗಳಿಗೆ ಈ ಯೋಜನೆ ಅನ್ಚಯವಾಗುವುದಿಲ್ಲ.

ಸಂದಾಯ ಮಾಡಿಲ್ಲದ ಪ್ರಥಮ ಪ್ರೀಮಿಯಂನ ತಾರೀಕಿನಿಂದ ಐದು ವರ್ಷಗಳ ಒಳಗೆ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಬಹುದು ಎಂದು ತಿಳಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಮೀಪದ ಎಲ್ ಐಸಿ ಕಚೇರಿ ಅಥವಾ ಎಲ್ ಐಸಿ ಎಜೆಂಟರ್ ನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಯನ್ನು ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.