ಬ್ರಹ್ಮಾವರ : (Terrorist Target Mandarthi) ಮಂಗಳೂರು ಬ್ಲಾಸ್ಟ್ ಬೆನ್ನಲ್ಲೇ ಕರಾವಳಿ ಭಾಗದ ಹಲವು ಧಾರ್ಮಿಕ ಕ್ಷೇತ್ರಗಳನ್ನು ಉಗ್ರರು ಟಾರ್ಗೇಟ್ ಮಾಡಿದ್ದಾರೆ ಅನ್ನೋ ಸ್ಪೋಟಕ ಮಾಹಿತಿಗಳು ಲಭ್ಯವಾಗುತ್ತಿದೆ. ಇದೀಗ ಉಡುಪಿ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರವಾಗಿರುವ ಮಂದಾರ್ತಿ ದುರ್ಗಾಪರಮೇಶ್ವರಿ ದೇವಾಲಯದ ಕೂಗಳತೆ ದೂರದಲ್ಲಿ ಸ್ಯಾಟಲೈಟ್ ಪೋನ್ (Satellite phone ring Mandarth) ರಿಂಗಣಿಸಿರುವ ಮಾಹಿತಿ ಲಭ್ಯವಾಗಿದೆ.
ಉಡುಪಿ ಜಿಲ್ಲೆಯ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೂಗಳತೆ ದೂರದಲ್ಲಿರುವ ಕಾಡಿನಲ್ಲಿ ಸ್ಯಾಟಲೈಟ್ ಪೋನ್ ರಿಂಗಣಿಸಿರುವ ಕುರಿತು ಮಾಹಿತಿ ಇದೀಗ ಲಭ್ಯವಾಗಿದೆ. ಇಲ್ಲಿಗೆ ಸಮೀಪದಲ್ಲಿರುವ ಗೇರು ಬೀಜ ಕಾರ್ಖಾನೆಯ ಬಳಿಯಲ್ಲಿ ಸ್ಯಾಟಲೈಟ್ ಪೋನ್ ಕರೆ ಹೋಗಿರುವ ಲೊಕೇಷನ್ ಪತ್ತೆಯಾಗಿದೆ ಎಂಬ ಕುರಿತು ಮಾಧ್ಯಮಗಳು ವರದಿ ಮಾಡಿವೆ.
Satellite phone ring Mandarth : ಉಗ್ರರ ಟಾರ್ಗೆಟ್ ಆಗಿದ್ಯಾ ಮಂದಾರ್ತಿ ?
ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ಕರಾವಳಿ ಭಾಗದ ಪ್ರಮುಖ ಪುಣ್ಯಕ್ಷೇತ್ರ. ಇದೀಗ ಮಂದಾರ್ತಿ ಸುತ್ತಮುತ್ತಲೂ ಸ್ಯಾಟಲೈಟ್ ಪೋನ್ ರಿಂಗ್ ಆಗಿರುವುದು ಸಹಜವಾಗಿಯೇ ಆತಂಕವನ್ನು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಯಾಟಲೈಟ್ ಪೋನಿನ ಜಾಡು ಹಿಡಿದು ತನಿಖೆಯನ್ನು ನಡೆಸುತ್ತಿದ್ದಾರೆ. ಮಂಗಳೂರಿನ ನಾಗುರಿಯಲ್ಲಿ ನಡೆದಿರುವ ರಿಕ್ಷಾ ಬಾಂಬ್ ಸ್ಪೋಟ ಪ್ರಕರಣದ ಬೆನ್ನಲ್ಲೇ ಉಗ್ರ ಶಾರೀಖ್ ಬಂಧನವಾಗಿತ್ತು. ಈ ವೇಳೆಯಲ್ಲಿ ಆತ ಕದ್ರಿಯ ಮಂಜುನಾಥೇಶ್ವರ ದೇವಸ್ಥಾನ, ಧರ್ಮಸ್ಥಳದ ಮಂಜುನಾಥ ದೇವಸ್ಥಾನ, ಉಡುಪಿಯ ಶ್ರೀ ಕೃಷ್ಣ ಮಠವನ್ನು ಉಗ್ರರು ಟಾರ್ಗೆಟ್ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಉಜಿರೆಯಲ್ಲಿ ಸ್ಯಾಟಲೈಟ್ ಪೋನ್ ರಿಂಗ್ ಆಗಿರುವ ಕುರಿತು ಪೊಲೀಸರು ತನಿಖೆಯನ್ನು ನಡೆಸಿದ್ದರು. ವೇಳೆಯಲ್ಲಿ ಚಾರ್ಮಾಡಿ ತಪ್ಪಲಿನಲ್ಲಿ ಉಗ್ರರು ಟ್ರಯಲ್ ಬಾಂಬ್ ಬ್ಲಾಸ್ಟ್ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಸ್ಥಳೀಯರು ಬಾಂಬ್ ಬ್ಲಾಸ್ಟ್ ಆಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಒಟ್ಟಿನಲ್ಲಿ ಕರಾವಳಿ ಭಾಗ ಉಗ್ರರ ಟಾರ್ಗೆಟ್ ಆಗಿದೆ ಅನ್ನೋದು ಮಂಗಳೂರು ಬ್ಲಾಸ್ಟ್ ಬೆನ್ನಲ್ಲೇ ಬಯಲಾಗುತ್ತಿದೆ. ಪೊಲೀಸ್ ಇಲಾಖೆ ಹಾಗೂ ಎನ್ಐಎ ಅಧಿಕಾರಿಗಳು ಈ ಕುರಿತು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : Truck Bus Accident : ಟ್ರಕ್ ಬಸ್ ಮುಖಾಮುಖಿ 1 ಸಾವು, 50 ಮಂದಿಗೆ ಗಾಯ
ಇದನ್ನೂ ಓದಿ : A bomb blast: ಮಂಗಳೂರು ಚಾರ್ಮಾಡಿಯಲ್ಲೂ ಬಾಂಬ್ ಬ್ಲಾಸ್ಟ್
Terrorist Target Mandarthi Sri Durgaparameshawari Temple : Satellite phone ring in Mandarthi forest?