Charmadi bomb blast:‌ ಮಂಗಳೂರು ಚಾರ್ಮಾಡಿಯಲ್ಲೂ ಬಾಂಬ್ ಬ್ಲಾಸ್ಟ್

ಮಂಗಳೂರು: (Charmadi bomb blast) ನಾಗುರಿಯಲ್ಲಿ ರಿಕ್ಷಾದಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸದಿಂತೆ ತನಿಖೆ ಚುರುಕುಗೊಂಡಿದೆ. ಮಂಗಳೂರು ಬ್ಲಾಸ್ಟ್ ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ನಡೆಸುತ್ತಿದೆ. ಮಂಗಳೂರು ಬ್ಲಾಸ್ಟ್ ಬೆನ್ನಲ್ಲೇ ಇದೀಗ ಪಶ್ಚಿಮಘಟ್ಟದ ತಪ್ಪಲು ಚಾರ್ಮಾಡಿ ಭಾಗದಲ್ಲಿ ಬಾಂಬ್ ಬ್ಲಾಸ್ಟ್ ಆಗಿರುವ ಸ್ಟೋಟ ಮಾಹಿತಿ ಲಭ್ಯವಾಗಿದೆ.

ಮಂಗಳೂರು ಬಾಂಬ್‌ ಬ್ಲಾಸ್ಟ್‌(Charmadi bomb blast) ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಬಯಲಾಗುತ್ತಲೇ ಇವೆ. ಉಗ್ರರು ಬಾಂಬ್‌ ಬ್ಲಾಸ್ಟ್‌ ಮಾಡಲು ಹಲವಾರು ಪ್ರದೇಶಗಳನ್ನು ಟಾರ್ಗೆಟ್‌ ಮಾಡಿದ್ದು, ಹಲವೆಡೆ ಟ್ರಯಲ್‌ ಬ್ಲಾಸ್ಟ್‌ ಕೂಡ ನಡೆಸಿದ್ದಾರೆ. ಇದೀಗ ಬಾಂಬ್‌ ಬಾಸ್ಟ್‌ ಪ್ರರಣಕ್ಕೆ ಇನ್ನೊಂದು ಟ್ವಿಸ್ಟ್‌ ಸಿಕ್ಕಿದ್ದು, ಚಾರ್ಮಾಡಿ ತಪ್ಪಲಿನಲ್ಲೂ ಕೂಡ ಟ್ರಯಲ್‌ ಬ್ಲಾಸ್ಟ್‌ ನಡೆದಿದೆ ಎಂಬ ಮಾಹಿತಿ ಬಯಲಾಗಿದೆ.

ಮಂಗಳೂರಲ್ಲಿ ಬಂಧನಕ್ಕೆ ಒಳಗಾಗಿರುವ ಉಗ್ರ ಶಾರೀಖ್‌ ಸ್ಯಾಟಲೈಟ್‌ ಫೋನ್‌ ಬಳಸಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಮಾತನಾಡುತ್ತಿದ್ದ ಎಂಬ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ತನಿಖೆಗೆ ಇಳಿದಿದ್ದರು. ಹಲವು ಪ್ರದೇಶಗಳಲ್ಲಿ ಸ್ಯಾಟಲೈಟ್‌ ತನಿಖೆ ನಡೆಸುತ್ತಿದ್ದು, ಚಾರ್ಮಾಡಿ ತಪ್ಪಲಿನಲ್ಲೂ ಕೂಡ ತನಿಖೆಯನ್ನು ನಡೆಸಿದ್ದಾರೆ. ಚಾರ್ಮಾಡಿ ಅರಣ್ಯ ಪ್ರದೇಶದ ತಪ್ಪಲಿನಲ್ಲಿ ಸ್ಯಾಟಲೈಟ್‌ ತನಿಖೆ ನಡೆಸುವ ವೇಳೆಯಲ್ಲಿ ಪೊಲೀಸರಿಗೆ ಸ್ಫೋಟಕ ಮಾಹಿತಿಯೊಂದು ದೊರೆತಿದ್ದು, ಚಾರ್ಮಾಡಿ ತಪ್ಪಲಿನ ಅರಣ್ಯ ಪ್ರದೇಶದಲ್ಲಿಯೂ ಕೂಡ ಉಗ್ರರು ಟ್ರಯಲ್‌ ಬ್ಲಾಸ್ಟ್‌ ನಡೆಸಿದ್ದರು ಎನ್ನುವುದು ತಿಳಿದುಬಂದಿದೆ. ಈ ಹಿಂದೆ ಶಿವಮೊಗ್ಗದಲ್ಲಿಯೂ ಕೂಡ ಉಗ್ರ ಶಾರೀಖ್‌ ಹಾಗೇ ಇನ್ನೂ ಕೆಲವು ಉಗ್ರರು ಟ್ರಯಲ್‌ ಬ್ಲಾಸ್ಟ್‌ ನಡೆಸಿದ್ದರು. ಇದೀಗ ಚಾರ್ಮಾಡಿ ತಪ್ಪಲಿನಲ್ಲೂ ಕೂಡ ಟ್ರಯಲ್‌ ಬ್ಲಾಸ್ಟ್‌ ನಡೆದಿದೆ ಎಂಬುದು ತಿಳಿದು ಬಂದಿದೆ.

ಚಾರ್ಮಾಡಿ ತಪ್ಪಲಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಬೆಂದ್ರಾಳ ಅರಣ್ಯಪ್ರದೇಶದಲ್ಲಿ ಸುಮಾರು ಏಳು ದಿನಗಳ ಹಿಂದೆ ರಾತ್ರಿ 11 ಗಂಟೆಯ ಸುಮಾರಿಗೆ ಟ್ರಯಲ್‌ ಬ್ಲಾಸ್ಟ್‌ ನಡೆದಿರುವುದು ತನಿಖೆ ವೇಳೆ ತಿಳಿದುಬಂದಿದೆ. ಭಾರೀ ಪ್ರಮಾಣದಲ್ಲಿ ಬಾಂಬ್‌ ಸ್ಫೋಟಗೊಂಡಿದ್ದು, ಸ್ಥಳೀಯರು ಸ್ಫೋಟದ ತೀವ್ರತೆಗೆ ಬೆಚ್ಚಿಬಿದ್ದಿದ್ದಾರೆ ಎಂದು ಸ್ಥಳೀಯರಾದ ಚೆಲುವಮ್ಮ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : Truck Bus Accident : ಟ್ರಕ್‌ ಬಸ್‌ ಮುಖಾಮುಖಿ 1 ಸಾವು, 50 ಮಂದಿಗೆ ಗಾಯ

ಇದನ್ನೂ ಓದಿ : Collision between two vehicles: ಗಾವಳಿಯಲ್ಲಿ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ: ಖಾಸಗಿ ಬಸ್‌ ಚಾಲಕ ಗಂಭೀರ

ಏನಿದು ಬಾಂಬ್‌ ಸ್ಫೋಟ ಪ್ರಕರಣ..?

ಮಂಗಳೂರು ನಗರದ ನಾಗುರಿ ಎಂಬಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಆಟೋ ಚಾಲಕ ಹಾಗೂ ಉಗ್ರ ಶಾರೀಖ್ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ಕುರಿತು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಶಾಕಿಂಗ್ ಮಾಹಿತಿ ಲಭ್ಯವಾಗಿತ್ತು. ಶಾರೀಖ್ ಸ್ಪೋಟಿಸಿದ್ದು ಕುಕ್ಕರ್ ಬಾಂಬ್ ಅನ್ನೋ ಮಾಹಿತಿಯ ಜಾಡು ಹಿಡಿದ ಪೊಲೀಸರು ಈಗಾಗಲೇ ಉಗ್ರರನಿಗೆ ಸಹಕಾರ ನೀಡಿದರವನ್ನು ಬಂಧಿಸಿದ್ದಾರೆ. ಸದ್ಯ ಶಾರೀಖ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

(Charmadi bomb blast) The investigation has been accelerated in connection with the case of bomb blast in a rickshaw in Naguri. NIA is investigating the Mangalore blast case. Right after the Mangalore blast, information has now become available that there was a bomb blast in the Charmadi area of the Western Ghats.

Comments are closed.