ಮಂಗಳೂರು : Tourists banned from going to sea : ಇನ್ನೇನು ವೀಕೆಂಡ್ ಹತ್ತಿರ ಬಂತು. ಹೀಗಾಗಿ ವೆಕೇಷನ್ಗೆ ತೆರಳೋಣ ಎಂದು ಪ್ಲಾನ್ ಮಾಡುವವರು ಅನೇಕರಿದ್ದಾರೆ. ವೀಕೆಂಡ್ನಲ್ಲಿ ಬೀಚ್ಗೆ ತೆರಳೋಣ ಎಂದು ನೀವು ಯೋಚನೆ ಮಾಡಿದ್ದರೆ ನಿಮ್ಮ ಟೂರ್ ಪ್ಲಾನ್ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ಅದರಲ್ಲೂ ನಿಮ್ಮ ಪ್ಲಾನ್ ಕಡಲನಗರಿಯ ಸಮುದ್ರ ತೀರವಾಗಿದ್ದರೆ ನಿಮಗೆ ಸಮುದ್ರವನ್ನು ದೂರದಲ್ಲಿ ನಿಂತು ನೋಡುವುದನ್ನು ಬಿಟ್ಟು ಬೇರೆ ಇನ್ಯಾವ ಆಯ್ಕೆ ಕೂಡ ಉಳಿಯೋದಿಲ್ಲ. ಏಕೆಂದರೆ ಬೀಚ್ನಲ್ಲಿ ಮಸ್ತಿ ಮಾಡಲು ನಿರ್ಬಂಧ (Tourists banned sea) ಹೇರಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಸಮುದ್ರಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಸರಣಿ ರಜೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಬೇಕೆಂದು ಪ್ಲಾನ್ ಮಾಡಿದ್ದವರಿಗೆ ದೊಡ್ಡ ನಿರಾಶೆ ಎದುರಾಗಿದೆ. ಕಡಲಿನಲ್ಲಿ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳೂರಿನ ಪಣಂಬೂರು ಬೀಚ್ಗೆ ಎಂಟ್ರಿ ನೀಡಲು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಸಮುದ್ರದಲ್ಲಿ ಅಲೆಗಳ ಮಜಾ ಮಾಡಬಹುದು ಎಂದು ಕೊಂಡವರಿಗೆ ಇದರಿಂದ ಭಾರೀ ನಿರಾಶೆಯಾಗೋದಂತೂ ಪಕ್ಕಾ.
ಸಮುದ್ರದಲ್ಲಿ ಅಲೆಗಳ ಹೊಡೆತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಪಣಂಬೂರಿನ ಬೀಚ್ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೀಚ್ಗೆ ಇಳಿಯದಂತೆ ಎಲ್ಲಾ ಕಡೆಗಳಲ್ಲಿ ಹಗ್ಗ ಕಟ್ಟಿ ನಿರ್ಬಂಧ ಹೇರಲಾಗಿದೆ. ಬೀಚ್ನ ಸುತ್ತ ಹೋಮ್ ಗಾರ್ಡ್, ಲೈಫ್ ಗಾರ್ಡ್ಗಳನ್ನು ನಿಯೋಜನೆ ಮಾಡಲಾಗಿದೆ. ಮೂಲಗಳ ಪ್ರಕಾರ ಇನ್ನೂ ಒಂದು ತಿಂಗಳುಗಳ ಕಾಲ ಈ ನಿರ್ಬಂಧ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಪ್ರವಾಸಿಗರಿಗೆ ದೂರದಿಂದಲೇ ಬೀಚ್ ನೋಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ : remove the rakhi : ಮಂಗಳೂರಿನ ಶಾಲೆಯಲ್ಲಿ ರಕ್ಷಾ ಬಂಧನಕ್ಕೆ ಅಪಮಾನ: ರಾಖಿ ಕಳಚುವಂತೆ ವಿದ್ಯಾರ್ಥಿಗಳಿಗೆ ತಾಕೀತು
ಇದನ್ನೂ ಓದಿ : Johnson & Johnson : ವಿಶ್ವಾದ್ಯಂತ ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಿದ ಕಂಪನಿ
Tourists banned from going to sea in Mangalore