Virat Kohli Practice : ಏಷ್ಯಾ ಕಪ್ ಟೂರ್ನಿಗೆ ವಿರಾಟ್ ಕೊಹ್ಲಿ ಭರ್ಜರಿ ತಾಲೀಮು, ಹೇಗಿದೆ ಹೊತ್ತಾ ಕಿಂಗ್ ಕೊಹ್ಲಿಯ ಸಿದ್ಧತೆ

ಮುಂಬೈ: (Virat Kohli Practice) ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಏಷ್ಯಾ ಕಪ್ ಟೂರ್ನಿ ಮಾಡು ಇಲ್ಲ ಮಡಿ ಅಖಾಡ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಲೇಬೇಕು.

ತಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ ಏಷ್ಯಾ ಕಪ್ ಟೂರ್ನಿಗೆ (Asia Cup 2022) ವಿರಾಟ್ ಕೊಹ್ಲಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿರುವ ವೀಡಿಯೊವನ್ನು ವಿರಾಟ್ ಕೊಹ್ಲಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಜಗತ್ತಿನ ಖ್ಯಾತ ಫುಟ್ಬಾಲ್ ತಂಡವಾಗಿರುವ ಮ್ಯಾಂಚೆಸ್ಟರ್ ಸಿಟಿ ತಂಡದ ಜರ್ಸಿ ಧರಿಸಿರುವ ವಿರಾಟ್ ಕೊಹ್ಲಿ, ಫಿಟ್’ನೆಸ್ ನಡೆಸುತ್ತಿರುವ ವೀಡಿಯೊ ವೈರಲ್ ಆಗಿದೆ.

33 ವರ್ಷದ ವಿರಾಟ್ ಕೊಹ್ಲಿ ಸದ್ಯ ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. 2019ರ ನವೆಂಬರ್’ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊಹ್ಲಿ ಶತಕವನ್ನೇ ಗಳಿಸಿಲ್ಲ. ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಕೊಹ್ಲಿ ದಯನೀಯ ವೈಫಲ್ಯ ಎದುರಿಸಿದ್ದರು. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಕ್ರಿಕೆಟ್’ನಿಂದ ಬಿಡುವು ಪಡೆದಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತು ಪುತ್ರಿ ವಾಮಿಕಾ ಶರ್ಮಾ ಕೊಹ್ಲಿ ಜೊತೆ ಯುರೋಪ್ ಪ್ರವಾಸಕ್ಕೆ ತೆರಳಿದ್ದರು. ಯುರೋಪ್ ಪ್ರವಾಸದಿಂದ ಮುಂಬೈಗೆ ಮರಳಿರುವ ವಿರಾಟ್ ಕೊಹ್ಲಿ, ಅಭ್ಯಾಸ ಆರಂಭಿಸಿದ್ದಾರೆ.

ಏಷ್ಯಾ ಕಪ್ ಟಿ20 ಟೂರ್ನಿ ಆಗಸ್ಟ್ 27ರಿಂದ ಯುಎಇನಲ್ಲಿ ಆರಂಭವಾಗಲಿದ್ದು, ಆಗಸ್ಟ್ 28ರಂದು ದುಬೈನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ರಿಷಭ್ ಪಂತ್, ದೀಪಕ್ ಹೂಡ, ರವಿ ಬಿಷ್ಣೋಯ್, ಆವೇಶ್ ಖಾನ್.

ಏಷ್ಯಾಕಪ್ ಟಿ20 (Asia Cup 2022) ಟೂರ್ನಿಯ ವೇಳಾಪಟ್ಟಿ
Group A
ಭಾರತ Vs ಪಾಕಿಸ್ತಾನ: 28 ಆಗಸ್ಟ್, ದುಬೈ
ಭಾರತ Vs ಕ್ವಾಲಿಫೈಯರ್ ಟೀಮ್: 31 ಆಗಸ್ಟ್, ದುಬೈ
ಪಾಕಿಸ್ತಾನ Vs ಕ್ವಾಲಿಫೈಯರ್ ಟೀಮ್: 02 ಸೆಪ್ಟೆಂಬರ್, ಶಾರ್ಜಾ

Group B
ಶ್ರೀಲಂಕಾ Vs ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ
ಬಾಂಗ್ಲಾದೇಶ Vs ಅಫ್ಘಾನಿಸ್ತಾನ: 30 ಆಗಸ್ಟ್, ಶಾರ್ಜಾ
ಶ್ರೀಲಂಕಾ Vs ಬಾಂಗ್ಲಾದೇಶ: 01 ಸೆಪ್ಟೆಂಬರ್, ದುಬೈ

ಇದನ್ನೂ ಓದಿ : Rishabh Pant and actress Urvashi Rautela: ಕ್ರಿಕೆಟಿಗ ರಿಷಭ್ ಪಂತ್-ನಟಿ ಊರ್ವಶಿ ರೌಟೇಲಾ ಮಧ್ಯೆ ಏನಿದು ಹೊಸ ಕಥೆ..? ತೆರೆಯ ಹಿಂದೆ ನಡೆದದ್ದೇನು?

ಇದನ್ನೂ ಓದಿ : Legends League Cricket : ಟೀಂ ಇಂಡಿಯಾ ನಾಯಕನಾಗಿ ಸೌರವ್‌ ಗಂಗೂಲಿ ಆಯ್ಕೆ

Virat Kohli Practice Kohli intense training for the Asia Cup tournament, how is King Kohli’s preparation

Comments are closed.