Udupi DC Transfer : ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ವರ್ಗಾವಣೆ : ವಿದ್ಯಾ ಕುಮಾರಿ ನೂತನ ಡಿಸಿ

ಉಡುಪಿ : ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ (Udupi DC Transfer) ಕೂರ್ಮ ರಾವ್‌ ಎಮ್‌ (Kurma Rao M) ವರ್ಗಾವಣೆ, ಬೆನ್ನಲ್ಲೇ ನೂತನ ಜಿಲ್ಲಾಧಿಕಾರಿಯಾಗಿ (Vidyakumari K) ವಿದ್ಯಾಕುಮಾರಿ ಕೆ. ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿದೆ.

ವಿದ್ಯಾಕುಮಾರಿ.ಕೆ. ಅವರು ತುಮಕೂರಿನಲ್ಲಿ ಜಿಲ್ಲಾ ಪಂಚಾಯತ್‌ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ರಾಜ್ಯ ಸರಕಾರದ ಆದೇಶದ ಮೇರೆಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ : Yellow alert : ಉಡುಪಿ, ದಕ ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಜುಲೈ 19ರವರೆಗೂ ಭಾರಿ ಮಳೆ : ಯೆಲ್ಲೋ ಅಲರ್ಟ್‌ ಘೋಷಣೆ

ಇದನ್ನೂ ಓದಿ : Royal Enfield company : ಶೀಘ್ರದಲ್ಲೇ ಭಾರತದಲ್ಲಿ 3 ಹೊಸ ಬೈಕ್‌ಗಳನ್ನು ಪರಿಚಯಿಸಲಿದೆ ರಾಯಲ್ ಎನ್‌ಫೀಲ್ಡ್ ಕಂಪೆನಿ

ಈ ಹಿಂದೆ ಜಿಲ್ಲಾಧಿಕಾರಿ ಕೂರ್ಮ ರಾವ್‌ ಸವರು ಸೆಪ್ಟೆಂಬರ್‌ 2021ರಲ್ಲಿ ಉಡುಪಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು ಉತ್ತಮ ಸೇವೆ ಸಲ್ಲಿಸಿದ್ದು,ಇಂದು ವರ್ಗಾವಣೆಗೊಂಡಿದ್ದಾರೆ. ಎಮ್‌ ಕೂರ್ಮ ರಾವ್‌ ಅವರು ಮೂಲತಃ ಆಂಧ್ರಪ್ರದೇಶದವರಾಗಿದ್ದು, 2010ನೇ ಸಾಲಿನಲ್ಲಿ ಐಎಎಸ್‌ ಅಧಿಕಾರಿ ಸ್ಥಾನ ಪಡೆದಿದ್ದರು.

Udupi DC Transfer: Udupi District Collector Kurma Rao transferred, Vidyakumari selected as the new District Collector

Comments are closed.