ಭಾನುವಾರ, ಏಪ್ರಿಲ್ 27, 2025
HomeCoastal Newsಉಡುಪಿಯ ಜಯಲಕ್ಷ್ಮೀ ಸಿಲ್ಕ್ಸ್‌ ಮಳಿಗೆಯಲ್ಲಿ ಬಂದೂಕಿನಿಂದ ಸಿಡಿದ ಗುಂಡು, ಓರ್ವನಿಗೆ ಗಾಯ

ಉಡುಪಿಯ ಜಯಲಕ್ಷ್ಮೀ ಸಿಲ್ಕ್ಸ್‌ ಮಳಿಗೆಯಲ್ಲಿ ಬಂದೂಕಿನಿಂದ ಸಿಡಿದ ಗುಂಡು, ಓರ್ವನಿಗೆ ಗಾಯ

- Advertisement -

Udupi Jayalakshmi silks gun Misfiring : ಉಡುಪಿ : ಬಂದೂಕಿನಿಂದ ಗುಂಡು ಸಿಡಿದು ಓರ್ವ ಗಾಯಗೊಂಡಿರುವ ಘಟನೆ ಉಡುಪಿಯ ಜಯಲಕ್ಷ್ಮೀ ಸಿಲ್ಕ್ಸ್‌ನಲ್ಲಿ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ವಾರಾಸುದಾರರಿಲ್ಲದ ಗನ್‌ ಪತ್ತೆಯಾಗಿದ್ದು, ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.

1969 ರಲ್ಲಿ ಉಡುಪಿಯ ಉದ್ಯಾವರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಯಲಕ್ಷ್ಮೀ ಸಿಲ್ಕ್ಸ್‌ ಇತ್ತೀಚಿಗಷ್ಟೇ ಉಡುಪಿ ನಗರದ ಬನ್ನಂಜೆಗೆ ಸ್ಥಳಾಂತರಗೊಂಡಿತ್ತು. ಏಳು ಅಂತಸ್ಥಿನ ಕಟ್ಟಡದಲ್ಲಿ ಇಂದು ಅಪರಿಚತ ಗನ್‌ ಪತ್ತೆಯಾಗಿತ್ತು. ಸಿಬ್ಬಂದಿ ಪರಿಶೀಲನೆಯ ವೇಳೆಯಲ್ಲಿ ಗನ್‌ ಸಿಡಿದು ಅವಘಡ ಸಂಬಂಧಿಸಿದೆ ಎನ್ನಲಾಗುತ್ತಿದೆ.

Udupi Famous Clothing Store Jayalakshmi silks gun Misfiring
Image Credit to Original Source

ಗನ್‌ ಪತ್ತೆಯಾಗುತ್ತಿದ್ದಂತೆಯೇ ಅಲ್ಲಿಯೇ ಸಿಬ್ಬಂದಿಗಳು ಆಶ್ಚರ್ಯ ಚಕಿತರಾಗಿದ್ದಾರೆ. ಪರಿಶೀಲನೆ ನಡೆಸುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಬಟ್ಟೆ ಮಳಿಗೆಯಲ್ಲಿ ಗನ್‌ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಾತ್ರವಲ್ಲ ಗ್ರಾಹಕರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಪೊಲೀಸರ ತನಿಖೆಯ ನಂತರಷ್ಟೇ ಘಟನೆಗೆ ನಿಖರವಾದ ಕಾರಣ ತಿಳಿದು ಬರಬೇಕಾಗಿದೆ.

ಇದನ್ನೂ ಓದಿ : ಯುವನಿಧಿ ಯೋಜನೆ ನೋಂದಣಿ ಆರಂಭ : ಯುವನಿಧಿ ಟೋಲ್ ಫ್ರೀ ಸಂಖ್ಯೆ 1800 599 9918ಗೆ ಕರೆ ಮಾಡಿ

ಗನ್‌ ಸಿಡಿದಿಲ್ಲ ಜಯಲಕ್ಷ್ಮೀ ಸಿಲ್ಕ್ಸ್‌ ಮಾಲೀಕರ ಹೇಳಿಕೆ :
ಜಯಲಕ್ಷ್ಮೀ ಸಿಲ್ಕ್ಸ್‌ ಮಳಿಗೆಯ ಪುರುಷರ ಶೌಚಾಲಯದಲ್ಲಿ ಅಪರಿಚಿತ ಗನ್‌ ಪತ್ತೆಯಾಗಿದೆ. ಆದರೆ ಈ ಗನ್‌ ಯಾರದ್ದೂ ಎಂದು ತಿಳಿದಿಲ್ಲ. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಗನ್‌ ಪತ್ತೆಯಾದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಆದರೆ ಗನ್‌ ಸಿಡಿದಿಲ್ಲ, ಜೊತೆಗೆ ಯಾರಿಗೂ ಗಾಯವಾಗಿಲ್ಲ ಎಂದು ಜಯಲಕ್ಷ್ಮೀ ಸಿಲ್ಕ್ಸ್‌ನ ಮಾಲೀಕರು ನ್ಯೂಸ್‌ ನೆಕ್ಸ್ಕ್ಸ್‌ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : LPG Link : ಎಲ್‌ಪಿಜಿ ಗ್ರಾಹಕರಿಗೆ ಡಿಸೆಂಬರ್‌ 31ರ ಒಳಗೆ EKYC ಕಡ್ಡಾಯವೇ ? ಆಹಾರ ಇಲಾಖೆಯಿಂದ ಹೊಸ ಆದೇಶ

Udupi Famous Clothing Store Jayalakshmi silks gun Misfiring
Image Credit to Original Source

ಮಳಿಗೆಗೆ ಬಂದಿದ್ದ ಗ್ರಾಹಕರೇ ಈ ಗನ್‌ ಅನ್ನು ಶೌಚಾಲಯದಲ್ಲಿ ಇರಿಸಿರಬಹುದು. ಮಳಿಗೆಗೆ ಬರುವ ಗ್ರಾಹಕರನ್ನು ತಪಾಸಣೆ ನಡೆಸುವುದಿಲ್ಲ. ಈ ಕಾರಣದಿಂದಾಗಿ ಯಾರು ಇರಿಸಿದ್ದು ಎಂದು ಹೇಳುವುದು ಕಷ್ಟ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಅದಾ ಶರ್ಮಾ ಹೊಸವರ್ಷದ ನಿರ್ಧಾರವೇನು ಗೊತ್ತಾ ? ಕೇಳಿದ್ರೇ ಅಚ್ಚರಿ ಆಗ್ತೀರಾ !

Udupi Famous Clothing Store Jayalakshmi silks gun Misfiring

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular