ಬೈಂದೂರು : ರಸ್ತೆ ಮರ ತೆರವು ಕಾರ್ಯಾಚರಣೆ ; ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಜಸ್ಟ್‌ ಮಿಸ್‌

ಬೈಂದೂರು (Udupi News) : ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದಲೂ ಉತ್ತಮ ಮಳೆ ಸುರಿಯುತ್ತಿದೆ. ಅದ್ರಲ್ಲೂ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಭಾರೀ ಮಳೆಗೆ ಮರಗಳು ಉದುರಿಬಿದ್ದಿವೆ. ಹಾಲಾಡಿ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದಿದ್ದು, ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ (Byndur MLA Gururaj Gantihole) ಅವರು ತಮ್ಮ ಬೆಂಬಲಿಗರ ಜೊತೆ ಸೇರಿ ಮರ ತೆರವು ಕಾರ್ಯವನ್ನು ಮಾಡಿದ್ದಾರೆ.

ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ತೆರವು ಮಾಡುತ್ತಿದ್ದ ವೇಳೆಯಲ್ಲಿ ಮತ್ತೊಂದು ಮರ ಉರುಳಿ ಬಿದ್ದಿದೆ. ಅಪಾಯವನ್ನು ಅರಿತ ಶಾಸಕ ಗುರುರಾಜ್‌ ಗಂಟಿಹೊಳೆ ಹಾಗೂ ಬೆಂಬಲಿಗರು ಪಕ್ಕಕ್ಕೆ ಓಡುತ್ತಿದ್ದಂತೆಯೇ ಭಾರೀ ಅಪಾಯ ತಪ್ಪಿದಂತಾಗಿದೆ. ಸಮಾಜಸೇವೆಯ ಮೂಲಕವೇ ಪ್ರಸಿದ್ದಿಯನ್ನು ಪಡೆದಿದ್ದ ಶಾಸಕ ಗಂಟಿಹೊಳೆ ಇದೀಗ ಶಾಸಕರಾದ ನಂತರವೂ ಜನಸಾಮಾನ್ಯರಂತೆಯೇ ಬದುಕುತ್ತಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಎದುರಾದಾಗಲೂ ತಾನೇ ಸ್ವತಃ ನಿಂತು ಸಮಸ್ಯೆಯನ್ನು ಪರಿಹಾರ ಮಾಡುತ್ತಿದ್ದಾರೆ. ಶಾಸಕರಾದರೂ ಕೂಡ ತಾವೇ ಸ್ವತಃ ಮರ ತೆರವು ಕಾರ್ಯವನ್ನು ನಡೆಸುವ ಮೂಲಕ ಶಾಸಕ ಗುರುರಾಜ್‌ ಗಂಟಿಹೊಳೆ ಇತರರಿಗೆ ಮಾದರಿಯಾಗಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹಾಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ಬದಲು ಗುರುರಾಜ್‌ ಗಂಟಿಹೊಳೆ ಅವರಿಗೆ ಟಿಕೆಟ್‌ ನೀಡಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿ ಅವರ ವಿರುದ್ದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಗಂಟಿಹೊಳೆ ಅವರು ಬೈಂದೂರು ಶಾಸಕರಾಗಿ ಆಯ್ಕೆಯಾಗಿದ್ದರು.

Comments are closed.