Power Cut : ಉಡುಪಿ : ಅಗಸ್ಟ್‌ 22, 23 ರಂದು ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ವಿದ್ಯುತ್‌ ಕಡಿತ, ಇಲ್ಲಿದೆ ಸಂಪೂರ್ಣ ಮಾಹಿತಿ

ಉಡುಪಿ : ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಆಗಸ್ಟ್ 22 ಮತ್ತು 23 ರಂದು ಈ ಕೆಳಗೆ ತಿಳಿಸಲಾದ ಸ್ಥಳಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ ಎಂದು ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಎಷ್ಟು ಗಂಟೆಗಳ ಕಾಲ ವಿದ್ಯುತ್‌ ವ್ಯತ್ಯಯವಾಗಲಿದೆ ಎಂಬ ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ.

220/110/11 ಕೆ.ವಿ ಕೇಮಾರ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಫೀಡರ್ಗಳಾದ ನಿಟ್ಟೆ, ಕಲ್ಯಾ, ಲೆಮಿನಾ, ನಿಟ್ಟೆ ವಾಟರ್ ಸಪ್ಲೈ, 110/11 ಕೆ.ವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11ಕೆ.ವಿ ಪದವು ಫೀಡರ್ ಹಾಗೂ 110/11 ಕೆ.ವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಫೀಡರ್ಗಳಾದ ಮುಂಡ್ಕೂರು, ನಂದಳಿಕೆ, ಬೋಳ ಮತ್ತು ಬೆಳ್ಮಣ್ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟೆ ವಾಟರ್ ಸಪ್ಲೈ, ಬೊರ್ಗಲ್ ಗುಡ್ಡೆ, ಹಾಮಾಜೆ, ಕುಂಟಾಡಿ, ಕೈರಬೆಟ್ಟು, ನಿಟ್ಟೆ ಪಂಚಾಯತ್, ನಿಟ್ಟೆ ಮಸೀದಿ, ಲೆಮಿನಾ ಇಂಡಸ್ಟ್ರಿಸ್, ದೂಪದಕಟ್ಟೆ, ಕೆಮ್ಮಣ್ಣು, ಗುಂಡ್ಯಡ್ಕ, ಕಲ್ಲಂಬಾಡಿ, ಪದವು, ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಬೆಳ್ಮಣ್, ಬೆಳ್ಮಣ್ ದೇವಸ್ಥಾನ, ಗೋಳಿಕಟ್ಟೆ, ನಂದಳಿಕೆ, ಜಂತ್ರ, ನೀಚಾಲು, ಕೆದಿಂಜೆ, ಅಂಬರಾಡಿ, ಬೋಳ ಪಂಚಾಯತ್, ಪಿಲಿಯೂರು, ಕೆರೆಕೋಡಿ, ಒಂಜಾರೆ ಕಟ್ಟೆ, ಬಾರೆಬೈಲು, ಪುಕ್ಕಲ್ಲು, ಕೆಂಪುಜೋರ, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಕೊರಜೆ, ಮುಂಡ್ಕೂರು, ಕಾಂಜರಕಟ್ಟೆ, ಸಚ್ಚರಿಪೇಟೆ, ಮುಲ್ಲಡ್ಕ, ಕೋಡಿಮಾರು, ಸಂಕಲಕರಿಯ, ನಾನಿಲ್ ತಾರ್, ಜಾರಿಗೆಕಟ್ಟೆ, ಪರಪ್ಪಾಡಿ, ಲೆಮಿನಾ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 22 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ವಿ.ಪಿ.ನಗರ, ವಿ.ಆರ್.ನಗರ, ಕೆ.ಎಂ.ಸಿ, ಉದ್ಯಾವರ-2, ಭಂಡಾರಿ ಪವರ್ ಲೈನ್ ಮತ್ತು ಇಂದ್ರಾಳಿ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಸಿಂಡಿಕೇಟ್ ಸರ್ಕಲ್, ಎಂ.ಜಿ.ಸಿ ಸ್ಕೂಲ್, ಬಿ.ಎಸ್.ಎನ್.ಎಲ್, ಟೆಲಿಫೋನ್ ಎಕ್ಸ್ ಛೇಂಜ್, ವಿದ್ಯಾರತ್ನ ನಗರ, ಡಿ.ಸಿ ಆಫೀಸ್, ಆರ್.ಟಿ.ಒ ಆಫೀಸ್, ಪೆರಂಪಳ್ಳಿ, ಸಗ್ರಿ ನೋಳೆ, ಕೆ.ಎಂ.ಸಿ ಆಸ್ಪತ್ರೆ, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಉದ್ಯಾವರ, ಕಟಪಾಡಿ, ಇಂಡಸ್ಟ್ರಿಯಲ್ ಏರಿಯಾ, ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 22 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

110/11ಕೆ.ವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಚಾಂತಾರು, ಕೊಳಲಗಿರಿ, ಉಪ್ಪೂರು, ಹೇರೂರು ಫೀಡರ್ ಮಾರ್ಗದಲ್ಲಿ ಮತ್ತು 110/11 ಕೆ.ವಿ ಮಧುವನ ಉಪಕೇಂದ್ರದಿAದ ಹೊರಡುವ ಬಾರ್ಕೂರು ಎಕ್ಸ್ಪ್ರೆಸ್ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿAದ ಅಗ್ರಹಾರ, ನಂದಿಗುಡ್ಡೆ, ಕೊಳಂಬೆ, ತೊಂಬಟ್ಟುಕೆರೆ, ಶ್ರೀ ಕೃಷ್ಣ ಪೌಲ್ಟ್ರಿ ಫಾರ್ಮ್, ಉಗ್ಗೇಲ್ ಬೆಟ್ಟು, ಜಾತಾಬೆಟ್ಟು, ಹಾವಂಜೆ, ಹೈರಾಬೆಟ್ಟು, ಕೆ.ಜಿ.ರೋಡ್, ಸಾಲ್ಮರ, ಮಾಯಾಡಿ, ಅಮ್ಮುಂಜೆ, ಹೇರೂರು, ಬೈಕಾಡಿ, ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 22 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

110/33/11 ಕೆ.ವಿ ನಿಟ್ಟೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬನ್ನಂಜೆ ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿAದ ಅಜ್ಜರಕಾಡು, ಎಲ್.ಐ.ಸಿ, ಜೋಡುಕಟ್ಟೆ, ಟಿ.ಎಂ.ಎ ಪೈ ಆಸ್ಪತ್ರೆ, ಖಜಾನೆ, ತಾಲೂಕು ಪಂಚಾಯತ್, ಮಿಷನ್ ಕಂಪೌಂಡ್ 1ನೇ ಮುಖ್ಯ ರಸ್ತೆ, ಮಂಜುನಾಥ ಪೆಟ್ರೋಲ್ ಪಂಪ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 22 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

110/11 ಕೆ.ವಿ ಹಾಲಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಆವರ್ಸೆ, ಬಿದ್ಕಲ್ಕಟ್ಟೆ, ಬೈಲೂರು, ಬೆಳ್ವೆ, ಹೈಕಾಡಿ ಮತ್ತು ಕೆ.ಎನ್.ಎನ್.ಎಲ್ ಹಾಲಾಡಿ ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕುಳುಂಜೆ, ಶಂಕರನಾರಾಯಣ, ಬಿದ್ಕಲ್ಕಟ್ಟೆ, ಹಾಲಾಡಿ, ಮೊಳಹಳ್ಳಿ, ಹಾರ್ದಳ್ಳಿ-ಮಂಡಳ್ಳಿ, ಕಕ್ಕುಂಜೆ, ಯಡಾಡಿ-ಮತ್ಯಾಡಿ, ಹೆಸ್ಕತ್ತೂರು, ಮಚ್ಚಟ್ಟು, ಅಮಾಸೆಬೈಲು, ಹಳ್ಳಾಡಿ-ಹರ್ಕಾಡಿ, ಅಲ್ಬಾಡಿ, ಆರ್ಡಿ, ಶೇಡಿಮನೆ, ಹೈಕಾಡಿ, ಗೋಳಿಯಂಗಡಿ, ಬೆಳ್ವೆ, ಹೆಂಗವಳ್ಳಿ, ಸೂರ್ಗೋಳಿ, ಬೈಲೂರು, ಕಾಜಾಡಿ ಮತ್ತು ಕೊಂಡಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 22 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ.

ಶಿರಿಯಾರ ಶಾಖಾವ್ಯಾಪ್ತಿಯಲ್ಲಿ ನಿರ್ವಹಣೆ ಮತ್ತು ಮಾರ್ಗ ಸ್ಥಳಾಂತರ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 110/11 ಕೆ.ವಿ ಮಧುವನ ವಿದ್ಯುತ್ ಉಪಕೇಂದ್ರದಿAದ ಹೊರಡುವ 11 ಕೆ.ವಿ ಬಿಲ್ಲಾಡಿ ಮತ್ತು ಮಂದಾರ್ತಿ ಫೀಡರ್ಗಳ ಶಿರಿಯಾರ, ಬಿಲ್ಲಾಡಿ, ಶಿರೂರು, ವಂಡಾರು, ಆವರ್ಸೆ, ಮಂದಾರ್ತಿ, ಹೆಗ್ಗುಂಜೆ, ಹಿಲಿಯಾಣ, ಕೊಕ್ಕರ್ಣೆ ಹಾಗೂ ಬಾರಾಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 22 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ.

33/11 ಕೆ.ವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಕಳ್ತೂರು, ವಾಟರ್ ಸಫ್ಲೈ ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿAದ ಮಂಡಾಡಿಜೆಡ್ಡು, ಕಳ್ತೂರು, ಸಂತೆಕಟ್ಟೆ, ಕರ್ಜೆ, ಕುರ್ಪಾಡಿ, ಹೊಸೂರು, ಹುತ್ತುರ್ಕೆ ವಾಟರ್ ಸಫ್ಲೈ, ಕಲ್ಲಿಲ್ಲು ವಾಟರ್ ಸಫ್ಲೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 23 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.‌ ಇದನ್ನೂ ಓದಿ : Kundapura : ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಬಿ ಆಡಿಟ್‌ ವರ್ಗೀಕರಣ ಪ್ರಶಸ್ತಿ

220/110/11 ಕೆ.ವಿ ಹೆಗ್ಗುಂಜೆ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ 11 ಕೆ.ವಿ ಹೆಗ್ಗುಂಜೆ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕಾಡೂರು, ಮೊಗವೀರಪೇಟೆ, ಕೊಕ್ಕರ್ಣೆ, ಕೆಂಜೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 23 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Udupi Power cut on August 22, 23: Power cut everywhere, here is complete information

Comments are closed.