Udupi power cut : ಉಡುಪಿ : ಜುಲೈ 25, 26 ರಂದು ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ವಿದ್ಯುತ್‌ ಕಡಿತ, ಇಲ್ಲಿದೆ ಮಾಹಿತಿ

ಉಡುಪಿ : ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ (Udupi power cut) ಜುಲೈ 25 ಮತ್ತು 26 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. ಎಲ್ಲೆಲ್ಲಿ ಎಷ್ಟು ಗಂಟೆಗಳ ಕಾಲ ವಿದ್ಯುತ್‌ ವ್ಯತ್ಯಯವಾಗಲಿದೆ ಎಂಬ ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ.

ಶಿರಿಯಾರ ಶಾಖಾ ವ್ಯಾಪ್ತಿಯಲ್ಲಿ ಕೇಬಲ್ ಕಟ್ ಮಾಡಿ ಫೀಡರ್ ಮಾರ್ಗದಲ್ಲಿ ಅಳವಡಿಸುವ ಕಾಮಗಾರಿ ಮತ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 110/11 ಕೆ.ವಿ ಮಧುವನ ವಿದ್ಯುತ್ ಉಪಕೇಂದ್ರದಿAದ ಹೊರಡುವ 11 ಕೆ.ವಿ ಬಿಲ್ಲಾಡಿ, ಮಂದಾರ್ತಿ ಮತ್ತು ಶಿರಿಯಾರ ಫೀಡರ್ಗಳ ಶಿರಿಯಾರ, ಶಿರೂರು, ಅಚ್ಲಾಡಿ, ಸೈಬ್ರಕಟ್ಟೆ, ಹೆಸ್ಕತ್ತೂರು, ಯಡ್ತಾಡಿ, ಬಿಲ್ಲಾಡಿ, ವಂಡಾರು, ಆವರ್ಸೆ, ಮಂದಾರ್ತಿ, ಗುಡ್ಡಟ್ಟು, ಕಕ್ಕುಂಜೆ, ಹೆಗ್ಗುಂಜೆ, ಮಧುವನ, ಕೊಕ್ಕರ್ಣೆ, ಹೆಸ್ಕತ್ತೂರು, ಬೇಳೂರು, ಕೊರ್ಗಿ, ಕಾವಡಿ ಹಿಲಿಯಾಣ, ಹಳ್ಳಾಡಿ-ಹರ್ಕಾಡಿ ಹಾಗೂ ಬಾರಾಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 25 ರಂದು ಬೆಳಗ್ಗೆ 9 ರಿಂದ ಸಂಜೆ 6 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು.

ನಾವುಂದ ಕೊಯಾನಗರ ರೈಲ್ವೆಬ್ರಿಡ್ಜ್ ರೋಡ್ ಕ್ರಾಸ್ 11 ಕೆ.ವಿ ಆಲೂರು, ಬಡಾಕೆರೆ ಹಾಗೂ ಹೇರೂರು ಮಾರ್ಗಗಳ ಓವರ್ಹೆಡ್ ಮಾರ್ಗವನ್ನು ಭೂಗತ ಕೇಬಲ್ ಮಾರ್ಗಕ್ಕೆ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ, 110/11 ಕೆ.ವಿ ನಾವುಂದ ವಿದ್ಯುತ್ ಉಪಕೇಂದ್ರದಿಂದ ಹೊರಡುವ 33/11 ಕೆ.ವಿ ಬೈಂದೂರು ಮತ್ತು ಕೊಲ್ಲೂರು ಮಾರ್ಗ ಮತ್ತು 11 ಕೆ.ವಿ ಆಲೂರು, ಬಡಾಕೆರೆ ಹಾಗೂ ಹೇರೂರು ಮಾರ್ಗಗಳಲ್ಲಿ ಬೈಂದೂರು, ಉಪ್ಪುಂದ, ಶಿರೂರು, ಗಂಗನಾಡು, ತೂದಳ್ಳಿ, ತಗ್ಗರ್ಸೆ, ಯಡ್ತರೆ, ಕೊಲ್ಲೂರು, ಜಡ್ಕಲ್, ಇಡೂರು, ಹೊಸೂರು, ಮುದೂರು, ಗೋಳಿಹೊಳೆ,, ಯಳಜಿತ್, ಆಲೂರು, ಬಡಾಕೆರೆ ಮತ್ತು ಹೇರೂರು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 25 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

110/11 ಕೆ.ವಿ ಮಧುವನ ಉಪಕೇಂದ್ರದಿಂದ ಹೊರಡುವ ಬಾರ್ಕೂರು ಎಕ್ಸ್ಪ್ರೆಸ್ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿAದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 25 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11 ಕೆ.ವಿ ಬೆಳಪು ವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಪಣಿಯೂರು ಫೀಡರ್ ಮಾರ್ಗದಲ್ಲಿ ನಿಯತಕಾಲಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಪಣಿಯೂರು, ಬೆಳಪು ಗ್ರಾಮ ಪಂಚಾಯತ್ ಏರಿಯಾ, ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು. 25 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಲೈನ್ ಶಿಫ್ಟಿಂಗ್ ಹಾಗೂ 110 ಕೆ.ವಿ ಕಾರ್ಕಳ ವಿದ್ಯುತ್ ಕೇಂದ್ರದಲ್ಲಿ ಫೀಡರ್ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಬಂಡಿಮಠ ದುರ್ಗಾ, ಬೈಲೂರ್ ಎಕ್ಸ್ಪ್ರೆಸ್, ಮುಂಡ್ಲಿ, ಜಾರ್ಕಳ, ಕೆ.ಹೆಚ್.ಬಿ, ನಕ್ರೆ ಮತ್ತು ಪದವು ಫೀಡರ್ಗಳಲ್ಲಿ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಆದ್ದರಿಂದ ಬಂಡೀಮಠ, ಪೆರ್ವಾಜೆ, ಪತ್ತೊಂಜಿಕಟ್ಟೆ, ಜೋಡುರಸ್ತೆ, ಮುಂಡ್ಲಿ, ತೆಳ್ಳಾರು, ಪಲಾಯಿಪಕ್ಯಾರು, ಕಜೆ, ಪೊಲ್ಲಾರು, ಕುಕ್ಕುಂದೂರು, ಅಯ್ಯಪ್ಪನಗರ, ಪಿಲಿಚಂಡಿ ಸ್ಥಾನ, ಗಣಿತನಗರ, ಜಾರ್ಕಳ, ದುರ್ಗಾ, ಮಲೆಬೆಟ್ಟು, ಕಡಂಬಳ, ಬೈಲೂರು, ನೀರೆ, ಕೌಡೂರು, ಕೆ.ಹೆಚ್.ಬಿ. ಕಾಲೋನಿ, ಎರ್ಲಪಾಡಿ, ಪರಪು, ಕುಂಟಾಡಿ, ಪಳ್ಳಿ, ಆನಂದಿ ಮೈದಾನ, ನಕ್ರೆ, ಪೊಸನೊಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು. 25 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11 ಕೆ.ವಿ ವಿದ್ಯುತ್ ಸ್ಥಾವರ ಮಣಿಪಾಲದಲ್ಲಿ 110ಕೆ.ವಿ ಬಸ್ನಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿAದ, ಸದರಿ ಸ್ಥಾವರದಿಂದ ಹೊರಡುವ 110 ಕೆ.ವಿ ನಿಟ್ಟೂರು, 110 ಕೆ.ವಿ ಬ್ರಹ್ಮಾವರ, 33 ಕೆವಿ ಶಿರ್ವ, 33 ಕೆವಿ ಕುಂಜಿಬೆಟ್ಟು 1 ಮತ್ತು 2 ಮಾರ್ಗಗಳಲ್ಲಿ, 33 ಕೆವಿ ಮಲ್ಪೆ/ಉದ್ಯಾವರ ಹಾಗೂ ಎಲ್ಲಾ 11ಕೆವಿ ಫೀಡರಿನಲ್ಲಿ ಉಡುಪಿ, ಮಣಿಪಾಲ, ಕುಂಜಿಬೆಟ್ಟು, ನಿಟ್ಟೂರು, ಮಲ್ಪೆ, ಉದ್ಯಾವರ, ಶಿರ್ವ, ಬ್ರಹ್ಮಾವರ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜು. 26 ರಂದು ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿAದ ಹೊರಡುವ 11ಕೆವಿ ಕೆ.ಎಂ.ಎಫ್ ಮತ್ತು ಪ್ರಗತಿನಗರ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ ಈಶ್ವರನಗರ, ಸರಳೆಬೆಟ್ಟು, ಗಣೇಶ್ ಭಾಗ್, ಪ್ರಗತಿನಗರ, 80 ಬಿಬಿಟಿ, ಟ್ಯಾಪ್ಮಿ, ಶಾಂತಿನಗರ, ರಾಜೀವನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು. 26 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

ಇದನ್ನೂ ಓದಿ : Udupi News : ಉಡುಪಿ : ಅರಶಿನಗುಂಡಿ ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ನೀರುಪಾಲು : ವಿಡಿಯೋ ವೈರಲ್‌

33/11 ಕೆವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಹೆಬ್ರಿ, ಶಿವಪುರ, ಚಾರ, ಮುದ್ರಾಡಿ ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿAದ ಹೆಬ್ರಿಪೇಟೆ, ಗುಳಿಬೆಟ್ಟು, ಮಠದಬೆಟ್ಟು, ಬಂಗಾರಗುಡ್ಡೆ, ರಾಜೀವನಗರ, ಇಂದಿರಾನಗರ, ಹೆಬ್ರಿ, ಚಾರ, ಹೊಸೂರು, ಶಿವಪುರ, ಭಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿAಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ, ಕನ್ಯಾನ, ಸರ್ಕಾರಿ ಆಸ್ಪತ್ರೆ ಬಳಿ, ಮುದ್ರಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು. 26 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Udupi power cut: Udupi: Power cut on July 25, 26: Power cut everywhere, here is the information

Comments are closed.