ಉಡುಪಿ /ಕುಂದಾಪುರ : ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ (Tawar Chand Gehlot) ಅವರು ಕರಾವಳಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯಪಾಲರು ಉಡುಪಿಯ ಶ್ರೀ ಕೃಷ್ಣ ಮಠ (Udupi Shri Krishna ) ಹಾಗೂ ಕೊಲ್ಲೂರು ಮೂಕಾಂಬಿಕೆಯ (kollur mookambika) ದರ್ಶನ ಪಡೆದು ನಂತರ ಮುರುಡೇಶ್ವರಕ್ಕೆ ತೆರಳಿದ್ದಾರೆ.

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಕಡೆಗೋಲು ಶ್ರೀಕೃಷ್ಣ ನ ವಿಶೇಷ ದರ್ಶನ ಪಡೆದಿದ್ದಾರೆ. ನಂತರ ಮಠದಲ್ಲಿ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರನ್ನು ಭೇಟಿಯಾದ ರಾಜ್ಯಪಾಲರು ಮಠದಲ್ಲಿ ಕೆಲವು ಹೊತ್ತು ಸ್ವಾಮೀಜಿಗಳ ಜೊತೆಗೆ ಸಮಾಲೋಚನೆಯನ್ನು ನಡೆಸಿದ್ದಾರೆ.

ಈ ವೇಳೆಯಲ್ಲಿ ಪರ್ಯಾಯ ಅದಮಾರು ಮಠದಿಂದ ರಾಜ್ಯಪಾಲರಿಗೆ ಗೌರವ ಸಲ್ಲಿಸಲಾಯಿತು. ಉಡುಪಿ ಶಾಸಕ ರಘುಪತಿ ಭಟ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

ಉಡುಪಿಯ ಶ್ರೀಕೃಷ್ಣನ ದರ್ಶನ ಪಡೆದ ನಂತರ ರಾಜ್ಯಪಾಲರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಯನ್ನು ನೀಡಿದ್ದಾರೆ. ಮೂಕಾಂಬಿಕೆಯ ದರ್ಶನ ಪಡೆದ ನಂತರದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

ಉಡುಪಿ, ಕೊಲ್ಲೂರು ದೇವರ ದರ್ಶನದ ನಂತರ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಮುರುಡೇಶ್ವರಕ್ಕೆ ತೆರಳಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯಪಾಲರು ಕರಾವಳಿ ಜಿಲ್ಲೆಗಳ ಪ್ರವಾಸವನ್ನು ಕೈಗೊಂಡಿದ್ದಾರೆ.



ಇದನ್ನೂ ಓದಿ : Omicron emergency meeting : ಓಮಿಕ್ರಾನ್ ಪತ್ತೆ ಹಿನ್ನೆಲೆ : ತುರ್ತು ಸಭೆ ಕರೆದ ಸಿಎಂ ಬಸವರಾಜ್ ಬೊಮ್ಮಾಯಿ
ಇದನ್ನೂ ಓದಿ : ಬಿಜೆಪಿಗೆ ಮತ್ತೊಂದು ಶಾಕ್ ನೀಡಿತಾ ಟಿಎಂಸಿ..? ಕುತೂಹಲ ಮೂಡಿಸಿದ ಗೌತಮ್ ಅದಾನಿ-ಮಮತಾ ಬ್ಯಾನರ್ಜಿ ಭೇಟಿ..!
( Udupi Shri Krishna, kollur mookambika temple visit govenor Tawar Chand Gehlot )