ಉಡುಪಿ : ಯುಪಿಎಸ್ ಸಿಯಲ್ಲಿ ಟಾಪರ್ ಆಗಿದ್ದ ದಕ್ಷಿಣ ಕನ್ನಡ ಮೂಲಕ ಡಾ.ನವೀನ್ ಭಟ್ ವೈ ಅವರನ್ನು ಉಡುಪಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಉಡುಪಿ ಜಿ.ಪಂ. ಸಿಇಓ ಆಗಿದ್ದ ಪ್ರೀತಿ ಗೆಹ್ಲೋಟ್ ಅವರನ್ನು ವರ್ಗಾವಣೆಗೊಳಿಸಿದೆ. ಆದರೆ ಅವರಿಗೆ ಸರಕಾರ ಯಾವುದೇ ಹುದ್ದೆಯನ್ನು ತೋರಿಸಿಲ್ಲ. ಹಾಸನ ಉಪ ವಿಭಾಗದ ಸಹಾಯಕ ಆಯುಕ್ತರಾಗಿದ್ದ ಡಾ.ನವೀನ್ ಭಟ್ ಅವರಿಗೆ ಸಿಇಓ ಆಗಿ ಬಡ್ತಿ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಉಮೇಶ್ ಭಟ್ ಅವರ ಪುತ್ರರಾಗಿರುವ ಡಾ.ನವೀನ್ ಭಟ್ ವೈ ಅವರು 20017ರ ಯುಪಿಎಸ್ಇ ಪರೀಕ್ಷೆಯಲ್ಲಿ ರಾಜ್ಯದಲ್ಲಿ 3ನೇ ಸ್ಥಾನ ಪಡೆದಿದ್ದರು.

ಈಗಾಗಲೇ ಐಎಎಸ್ ಕರ್ನಾಟಕ ಕೇಡರ್ ಸೇವೆಗೆ ಆಯ್ಕೆಯಾಗಿದ್ದು, ಪ್ರೊಬೆಷನರಿ ತರಬೇತಿಯನ್ನು ಮುಗಿಸಿದ್ದಾರೆ. ಹಾಸನದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಸುಮಾರು 10 ತಿಂಗಳ ಸೇವೆ ಸಲ್ಲಿಸಿದ ಬಳಿಕ ವರ್ಗಾವಣೆಗೊಳಿಸಲಾಗಿದೆ.

ಬಂಟ್ವಾಳದಲ್ಲಿ ಪ್ರೌಢ ಶಿಕ್ಷಣವನ್ನು ಪಡೆದಿದ್ದು, ವಿಟ್ಲದಲ್ಲಿ ಪಿಯುಸಿ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ್ದಾರೆ.