ಭಾನುವಾರ, ಏಪ್ರಿಲ್ 27, 2025
HomeCoastal Newsಗೋವಾ - ಮಂಗಳೂರು ನಡುವೆ ಸಂಚರಿಸಲಿದೆ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು

ಗೋವಾ – ಮಂಗಳೂರು ನಡುವೆ ಸಂಚರಿಸಲಿದೆ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು

- Advertisement -

ಕರಾವಳಿ ಕರ್ನಾಟಕದಲ್ಲಿ ವಂದೇ ಭಾರತ ರೈಲು ಸಂಚರಿಸುವ ಕಾಲ ದೂರಲಿಲ್ಲ. ಮಂಗಳೂರು ಸೆಂಟ್ರಲ್ ಮತ್ತು ಮಡಗಾಂವ್(mangalore to madgaon) ನಡುವೆ ಮೊದಲ ರೈಲು ಸಂಚರಿಸಲಿದ್ದು, ಕರಾವಳಿ ಕರ್ನಾಟಕದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express train ) ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ ಅಂತ್ಯದೊಳಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel)ತಿಳಿಸಿದ್ದಾರೆ.

ವಂದೇ ಭಾರತ್‌ ರೈಲು ಕರಾವಳಿ ಭಾಗದಲ್ಲಿ ಸಂಚರಿಸಬೇಕು ಅನ್ನೋದು ಕರಾವಳಿಗರ ಬಹು ಸಮಯದ ಬೇಡಿಕೆ. ದೇಶದ ಪ್ರೀಮಿಯಂ ಹೈಸ್ಪೀಡ್‌ ರೈಲು ಎಂಬ ಖ್ಯಾತಿಗೆ ಪಾತ್ರವಾಗಿರುವ ವಂದೇ ಭಾರತ ಎಕ್ಸ್‌ಪ್ರೆಸ್‌ ಇದೀಗ ಕರಾವಳಿಯಲ್ಲಿ ಸಂಚರಿಸಲಿದೆ. ವಂದೇ ಭಾರತ್ ಮಂಗಳೂರು ಸೆಂಟ್ರಲ್ ಸ್ಟೇಷನ್ ನಿಂದ ಗೋವಾದ ಮಡಗಾಂವ್ ವರೆಗೆ ಸಂಚರಿಸಲಿದೆ.

Vande Bharat Express train will run between Goa and Mangalore
Image Credit to Original Source

ಕಳೆದ ಎರಡು ತಿಂಗಳ ಹಿಂದೆಯಷ್ಟೇ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ಕರಾವಳಿ ಭಾಗದಲ್ಲಿ ವಿಸ್ತರಿಸುವಂತೆ ಮನವಿ ಮಾಡಿದ್ದರು. ಕೊನೆಗೂ ಕರಾವಳಿಗರಿಗೆ ವಂದೇ ಭಾರತ್‌ ರೈಲಿನಲ್ಲಿ ಸಂಚರಿಸುವ ಅವಕಾಶ ಒದಗಿ ಬರಲಿದೆ.

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಡಿಸೆಂಬರ್‌ನಲ್ಲಿ 18 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ

ಮಂಗಳೂರು ಮತ್ತು ಮಡಗಾಂವ್ (ಗೋವಾ) ದೇಶದ ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಕಡಲ ತೀರದ ಜೊತೆಗೆ ನೈಸರ್ಗಿಕ ಸೌಂದರ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಮಾರ್ಗದಲ್ಲಿ ಇದೀಗ ವಂದೇ ಭಾರತ್‌ ರೈಲು ಸಂಚಾರದಿಂದ ಪ್ರವಾಸೋದ್ಯಮ, ವ್ಯಾಪಾರ – ವ್ಯವಹಾರದ ಅಭಿವೃದ್ದಿಯೂ ಆಗಲಿದೆ ಅನ್ನೋದು ಸದ್ಯದ ಲೆಕ್ಕಾಚಾರ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೆಲವೇ ದಿನಗಳಲ್ಲಿ ಬೆಂಗಳೂರು-ಬೆಳಗಾವಿ (ಧಾರವಾಡದಿಂದ ವಿಸ್ತರಿಸಲಾಗಿದೆ) ನಡುವೆ ಕಾರ್ಯನಿರ್ವಹಿಸಲಿದೆ. ಈಗಾಗಲೇ ಈ ರೈಲು ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಿದೆ. ಮುಂದಿನ ದಿನಗಳಲ್ಲಿ ಟಿಕೆಟ್ ಬೆಲೆ ಗೊತ್ತಾಗಲಿದ್ದು, ಟಿಕೆಟ್ ದರ ಸುಮಾರು 1500 ರೂಪಾಯಿ ಆಗಿರಬಹುದು ಎನ್ನಲಾಗುತ್ತಿದೆ.

Vande Bharat Express train will run between Goa and Mangalore
Image Credit to Original Source

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕರ್ನಾಟಕದಲ್ಲಿ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿದೆ. ಕಳೆದ ಸೆಪ್ಟೆಂಬರ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಪ್ರಮುಖ ಐಟಿ ನಗರಗಳನ್ನು ಸಂಪರ್ಕಿಸಲು ಕಾಚಿಗುಡ (ಹೈದರಾಬಾದ್) ಮತ್ತು ಯಶವಂತಪುರ (ಬೆಂಗಳೂರು) ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಉದ್ಘಾಟಿಸಿದರು.

ಇದನ್ನೂ ಓದಿ : ಮಹಿಳೆಯ ಉಚಿತ ಬಸ್‌ ಪ್ರಯಾಣಕ್ಕೆ ಸ್ಮಾರ್ಟ್‌ ಕಾರ್ಡ್‌ : ಶಕ್ತಿ ಯೋಜನೆಗೆ ಹೊಸ ರೂಲ್ಸ್‌ ಜಾರಿ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿಮಾನಗಳಲ್ಲಿಯೂ ಇಲ್ಲದ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. ಆರಾಮದಾಯಕ ಆಸನ ವ್ಯವಸ್ಥೆ, ಬಯೋ ಟಾಯ್ಲೆಟ್, ವೈಫೈ ಸೌಲಭ್ಯ, ಸ್ವಯಂಚಾಲಿತ ಬಾಗಿಲು, ಅಗ್ನಿ ಸುರಕ್ಷತಾ ಸಾಧನವಿದೆ. ಪ್ಯಾಂಟಿ ವ್ಯವಸ್ಥೆಯೂ ಇದೆ. ಈ ಕಾರಣದಿಂದಲೇ ವಂದೇ ಭಾರತ್‌ ರೈಲು ಯುವ ಜನತೆಯನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ : ಮೈಚಾಂಗ್ ಚಂಡಮಾರುತ: ಭಾರೀ ಮಳೆಯ ಎಚ್ಚರಿಕೆ, ಶಾಲಾ ರಜೆ ಘೋಷಣೆ

ಮಂಗಳೂರು ಮುಂಬೈ ಮಾರ್ಗದ ರೈಲು ಸದ್ಯ ಮಡಗಾಂವ್‌ – ಮಂಗಳೂರು ನಡುವೆ ಸಂಚಾರ ನಡೆಸುತ್ತಿವೆ. ಆದರೆ ವಂದೇ ಭಾರತ್‌ ರೈಲು ಸಂಚಾರದಿಂದ ಕರಾವಳಿಗರಿಗೆ ಅನುಕೂಲ ಆಗಲಿದೆ. ಜೊತೆಗೆ ಮಂಗಳೂರು– ಬೆಂಗಳೂರು, ಬೆಂಗಳೂರು– ಕಲಬುರಗಿ, ಬೆಂಗಳೂರು– ಶಿವಮೊಗ್ಗ, ಬೆಂಗಳೂರು– ವಿಜಯಪುರ ನಡುವೆ ವಂದೇ ಭಾರತ್‌ ರೈಲಿಗಾಗಿ ಬೇಡಿಕೆ ಬಂದಿದೆ.

Vande Bharat Express train will run between Goa and Mangalore

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular