ಮೈಚಾಂಗ್ ಚಂಡಮಾರುತ: ಭಾರೀ ಮಳೆಯ ಎಚ್ಚರಿಕೆ, ಶಾಲಾ ರಜೆ ಘೋಷಣೆ

ಮೈಚಾಂಗ್‌ ಚಂಡ ಮಾರುತ (Michaung Cyclone) ಆರ್ಭಟಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ತಮಿಳುನಾಡಿಗೆ (Tamil Nadu) ಹೊಂದಿಕೊಂಡಿರುವ ಕೇರಳ (Kerala), ಕರ್ನಾಟಕ (Karnataka) ದಲ್ಲಿಯೂ ಭಾರೀ ಮಳೆಯಾಗುವ (heavy Rain Alert) ಸಾಧ್ಯತೆಯಿದೆ.

ಮೈಚಾಂಗ್‌ ಚಂಡ ಮಾರುತ (Michaung Cyclone) ಆರ್ಭಟಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ತಮಿಳುನಾಡಿಗೆ (Tamil Nadu) ಹೊಂದಿಕೊಂಡಿರುವ ಕೇರಳ (Kerala), ಕರ್ನಾಟಕ (Karnataka) ದಲ್ಲಿಯೂ ಭಾರೀ ಮಳೆಯಾಗುವ (heavy Rain Alert) ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳ ಶಾಲೆ, ಕಾಲೇಜುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆಯನ್ನು(School Holiday) ಘೋಷಣೆ ಮಾಡಿದೆ.

ಚೆನ್ನೈನಲ್ಲಿ ಭಾರಿ ಮಳೆ ಸುರಿದಿದೆ. ಮಳೆಯ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಗಳು, ಕಚೇರಿಗಳು ಬಂದ್‌ ಆಗಿದ್ದು, ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚನೆಯನ್ನು ನೀಡಲಾಗಿದೆ. ತುರ್ತು ಸೇವಾ ಸಿಬ್ಬಂದಿಗಳು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ಸೂಚನೆಯನ್ನು ನೀಡಲಾಗಿದೆ.

Michaung Cyclone Heavy Rainfall Alert Announced School Holiday for Andrapradesh and Tamilnaadu 
Image Credit : Twitter

ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯಲ್ಲಿ ಪಾಂಡಿಚೇರಿ, ಕಾರೈಕಲ್ ಮತ್ತು ಯಾನಂನಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೈಚಾಂಗ್ ಚಂಡಮಾರುತದ ಹಿನ್ನೆಲೆಯಲ್ಲಿ ಡಿಸೆಂಬರ್ 5 ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಡಿಸೆಂಬರ್‌ನಲ್ಲಿ 18 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ

ತಮಿಳುನಾಡಿನ ಚೆಂಗಲ್‌ಪೇಟ್, ಕಾಂಚೀಪುರಂ ಮತ್ತು ತಿರುವಳ್ಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಚಂಡಮಾರುತದ ಆರ್ಭಟಕ್ಕೆ ಮೆಟ್ರೋ ನಿಲ್ದಾಣಗಳು ಜಲಾವೃತವಾಗಿದೆ. ಮಾತ್ರವಲ್ಲ ನಗರ ಹಲವು ಕಡೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು ಬಾರೀ ಅವಾಂತರ ಸೃಷ್ಟಿಯಾಗಿದೆ.

ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮೈಚಾಂಗ್ ಚಂಡಮಾರುತ ಕಳೆದ ಆರು ಗಂಟೆಗಳಲ್ಲಿ 8 ಕಿಮೀ ವೇಗದಲ್ಲಿ ಉತ್ತರ-ವಾಯುವ್ಯಕ್ಕೆ ಚಲಿಸುತ್ತಿದೆ. ಪುದುಚೇರಿಯ ಪೂರ್ವ-ಈಶಾನ್ಯಕ್ಕೆ 230 ಕಿಲೋಮೀಟರ್, ಚೆನ್ನೈನ ಪೂರ್ವ-ಆಗ್ನೇಯಕ್ಕೆ 190 ಕಿಲೋಮೀಟರ್, ನೆಲ್ಲೂರಿನಿಂದ 310 ಕಿಲೋಮೀಟರ್ ಆಗ್ನೇಯ, ಬಾಪಟ್ಲಾದಿಂದ 410 ಕಿಲೋಮೀಟರ್ ಆಗ್ನೇಯ ಆಗ್ನೇಯ ಮತ್ತು ಮಚಲಿಪಟ್ಟಣ ದಿಂದ 430 ಕಿಲೋಮೀಟರ್ ದಕ್ಷಿಣ ಆಗ್ನೇಯಕ್ಕೆ ಕೇಂದ್ರೀಕೃತವಾಗಿದೆ ಎಂದು ತಿಳಿದು ಬಂದಿದೆ.

Michaung Cyclone Heavy Rainfall Alert Announced School Holiday for Andrapradesh and Tamilnaadu 
Image Credit : Twitter

ಚಂಡಮಾರುತವು ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ, ಸೋಮವಾರ ಮುಂಜಾನೆ ವೇಳೆಗೆ ದಕ್ಷಿಣ ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡು ಕರಾವಳಿಯಿಂದ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯನ್ನು ತಲುಪುತ್ತದೆ.

ಇದನ್ನೂ ಓದಿ : ಭಾರತದಲ್ಲಿ ಟಾಪ್ 10 ಕಲುಷಿತ ನಗರಗಳ ಪಟ್ಟಿ : ದೆಹಲಿಗೆ ಅಗ್ರಸ್ಥಾನ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ ?

ಡಿಸೆಂಬರ್ 5ರಂದು ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯಲ್ಲಿ ಚಂಡಮಾರುತ ಬೀಸಲಿದೆ. ಈ ವೇಳೆಯಲ್ಲಿ ಗಂಟೆಗೆ 100 ರಿಂದ 110 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಯನ್ನು ನೀಡಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈ ಸೆಂಟ್ರಲ್‌ನಿಂದ ಆರು ರೈಲುಗಳನ್ನು ರದ್ದುಗೊಳಿಸಲಾಗಿದೆ.

Michaung Cyclone Heavy Rainfall Alert Announced School Holiday for Andrapradesh and Tamilnaadu 
Image Credit : Twitter

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್. ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ತುರ್ತು ಕಾರ್ಯಾಚರಣೆ ಯ ಕೇಂದ್ರದಲ್ಲಿ ಸಿದ್ದತೆಯ ಬಗ್ಗೆ ಪರಿಶೀಲನೆಯನ್ನು ನಡೆಸಿದ್ದಾರೆ. ತಿರುವಳ್ಳೂರು, ಚೆನ್ನೈ, ಕಾಂಚೀಪುರಂ ಮತ್ತು ಚೆಂಗಲ್‌ಪೇಟ್ ಜಿಲ್ಲೆಗಳಲ್ಲಿನ 685 ಮಂದಿ ನಿರಾಶ್ರಿತರನ್ನು 11 ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಉತ್ತರದಲ್ಲಿ ಬಿಜೆಪಿ ದಿಗ್ವಿಜಯ : ಟ್ರೆಂಡ್‌ ಆಗ್ತಿದೆ ಮೋದಿ ಗ್ಯಾರಂಟಿ 

ತಮಿಳುನಾಡು, ಒಡಿಶಾ, ಪುದುಚೇರಿ ಮುಖ್ಯ ಕಾರ್ಯದರ್ಶಿಗಳು ಮತ್ತು ವಿಶೇಷ ಮುಖ್ಯ ಕಾರ್ಯದರ್ಶಿ, ಕಂದಾಯ ಮತ್ತು ವಿಪತ್ತು ನಿರ್ವಹಣೆ, ಆಂಧ್ರಪ್ರದೇಶ ಎನ್‌ಸಿಎಂಸಿಗೆ ತೆಗೆದುಕೊಳ್ಳುತ್ತಿರುವ ಪೂರ್ವಸಿದ್ಧತಾ ಕ್ರಮಗಳ ಬಗ್ಗೆ ವಿವರಿಸಿದರು. ತಗ್ಗು ಪ್ರದೇಶಗಳನ್ನು ಗುರುತಿಸಲಾಗಿದ್ದು, ಪರಿಹಾರ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಲಾಗಿದೆ ಎಂದು ಸಮಿತಿಗೆ ತಿಳಿಸಲಾಯಿತು.

Michaung Cyclone Heavy Rainfall Alert Announced School Holiday for Andrapradesh and Tamilnaadu 

Comments are closed.