ಉಡುಪಿ: (Weekly train service started) ಪ್ರಯಾಣಿಕರ ಹಲವು ದಿನಗಳ ಬೇಡಿಕೆಯ ಹಿನ್ನಲೆಯಲ್ಲಿ ಫೆ. 3 ರಿಂದ ಮುಂಬೈ ಸೆಂಟ್ರಲ್ ರೈಲ್ವೆಯ ಸಹಯೋಗದೊಂದಿಗೆ ಮುಂಬಯಿ ಲೋಕಮಾನ್ಯ ತಿಲಕ್ ಹಾಗೂ ಸುರತ್ಕಲ್ ನಡುವೆ ವಿಶೇಷ ಸಾಪ್ತಾಹಿಕ ರೈಲು ಸೇವೆ ಆರಂಭಿಸಲು ಕೊಂಕಣ ರೈಲ್ವೆ ನಿರ್ಧರಿಸಿದ್ದು, ಈ ಬಗ್ಗೆ ಕೊಂಕಣ ರೈಲ್ವೇ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಕೊಂಕಣ ರೈಲ್ವೇಯ ಮಾಹಿತಿಯಂತೆ, ರೈಲು ನಂ. 02453 ಲೋಕಮಾನ್ಯ ತಿಲಕ್ – ಸುರತ್ಕಲ್ ನಡುವಿನ ವಿಶೇಷ ಸಾಪ್ತಾಹಿಕ ರೈಲು ಫೆ. 3 ರಿಂದ ಮಾರ್ಚ್ 31 ರ ವರೆಗೆ ಪ್ರತಿ ಶುಕ್ರವಾರ ರಾತ್ರಿ 10:15 ಕ್ಕೆ ಪ್ರಯಾಣ ಬೆಳೆಸಲಿದ್ದು, ಮರುದಿನ ಮಧ್ಯಾಹ್ನ 3:30 ಕ್ಕೆ ಸುರತ್ಕಲ್ ನಿಲ್ದಾಣ ತಲುಪಲಿದೆ. ಅದೇ ರೀತಿ ರೈಲು ನಂ. 01454 ಸುರತ್ಕಲ್ – ಲೋಕಮಾನ್ಯ ತಿಲಕ್ ವಿಶೇಷ ರೈಲು ಫೆ. 4 ರಿಂದ ಎಪ್ರಿಲ್ 1 ರವರೆಗೆ ಪ್ರತಿ ಶನಿವಾರ ಸಂಜೆ 7:40 ಕ್ಕೆ ಸುರತ್ಕಲ್ ನಿಲ್ದಾಣದಿಂದ ಹೊರಟುಮರುದಿನ ಮಧ್ಯಾಹ್ನ 2:25 ಲೋಕಮಾನ್ಯ ತಿಲಕ್ ನಿಲ್ದಾಣದಲ್ಲಿ ತಂಗಲಿದೆ.
ಇನ್ನೂ ಈ ರೈಲಿಗೆ ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಪ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ಕಂಕವಲ್ಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ಥೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ, ಕುಮಟಾ, ಮುರ್ಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ ಹಗಾಊ ಮೂಲ್ಕಿ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ ಎಂದು ಮಾಹಿತಿ ಲಭ್ಯವಾಗುತ್ತದೆ.
ಈ ವಿಶೇಷ ರೈಲು ಟೂ ಟಯರ್ ಎಸ್, ಟ್ರಿ ಟಯರ್ ಎಸಿ, ಎಂಟು ಸ್ಲೀಪರ್ ಕೋಚ್ ಸೇರಿದಂತೆ ಒಟ್ಟು ಹದಿನೇಳೂ ಕೋಚ್ಗಳನ್ನು ಹೊಂದಿದ್ದು, ಕೊಂಕಣ ರೈಲು ಮಾರ್ಗದಲ್ಲಿ ಇನ್ನಷ್ಟು ವಿದ್ಯುತ್ ಚಾಲಿತ ರೈಲುಗಳನ್ನು ಪ್ರಾರಂಭಿಸಲು ಕೊಂಕಣ ರೈಲ್ವೆ ಕ್ರಮಗಳನ್ನು ಕೈಗೊಂಡಿದೆ. ವಾರದಲ್ಲಿ ಎರಡು ದಿನ ಸಂಚರಿಸುವ ಎರ್ನಾಕುಳಂ ಜಂಕ್ಷನ್ -ಓಖಾ, ತಿರುವನಂತಪುರಂ ಸೆಂಟ್ರಲ್-ವಿರಾವಲ್ ಸಾಪ್ತಾಹಿಕ ಎಕ್ಸ್ ಪ್ರೆಸ್, ನಾಗರ ಕೊಯಿಲ್- ಗಾಂಧಿಧಾಮ ಸಾಪ್ತಾಹಿಕ ಎಕ್ಸ್ ಪ್ರೆಸ್ ಹಾಗೂ ಎರ್ನಾಕುಳಂ ಜಂಕ್ಷನ್ – ಎಸ್ ನಿಝಾಮುದ್ದೀನ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಈಗಾಗಲೇ ಎಲೆಕ್ಟ್ರಿಕ್ ಇಂಜಿನ್ ನಲ್ಲಿ ತನ್ನ ಸಂಚಾರವನ್ನು ಪ್ರಾರಂಭಿಸಿವೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ : Dead body found in toilet: ಮನೆಯ ಶೌಚಾಲಯದಲ್ಲಿ ಶವವಾಗಿ ಪತ್ತೆಯಾದ ಬಾಲಕಿ: ಹೃದಯಾಘಾತದ ಶಂಕೆ
ಇದನ್ನೂ ಓದಿ : Hemmadi Student death: ಹೆಮ್ಮಾಡಿ: ಬಸ್ ಹರಿದು ವಿದ್ಯಾರ್ಥಿ ದಾರುಣ ಸಾವು
Weekly train service started: Feb. Special weekly train service between Mumbai-Suratkal to start from 3