ಮಹಾರಾಷ್ಟ್ರದಲ್ಲಿ ಓಮಿಕ್ರಾನ್ನ(OMICRON) ಮೊದಲ ಪ್ರಕರಣ ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಓಮಿಕ್ರಾನ್ ಸೋಂಕಿಗೆ ಒಳಗಾದವರ ಸಂಖ್ಯೆ ನಾಲ್ಕಕ್ಕೆ ತಲುಪಿದೆ.
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣ ವರದಿಯಾಗಿತ್ತು. ದಕ್ಷಿಣ ಆಫ್ರಿಕಾದಿಂದ ನೆಗೆಟಿವ್ ವರದಿಯೊಂದಿಗೆ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಪ್ರಯೋಗಾಲಯದಲ್ಲಿ ಇವರ ಸೋಂಕಿನ ವರದಿ ಕಳುಹಿಸಿದ ಬಳಿಕ ಓಮಿಕ್ರಾನ್ ರೂಪಾಂತರಿ ಇರೋದು ಪತ್ತೆಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿರದ ವೈದ್ಯರೊಬ್ಬರಿಗೂ ಕೂಡ ಓಮಿಕ್ರಾನ್ ರೂಪಾಂತರಿ ಕಾಣಿಸಿಕೊಂಡಿದೆ.
ಇಂದು ಮಧ್ಯಾಹ್ನ ಗುಜರಾತ್ನಲ್ಲಿ ಮೊಟ್ಟ ಮೊದಲ ಓಮಿಕ್ರಾನ್ ರೂಪಾಂತರಿ ಪ್ರಕರಣ ವರದಿಯಾಗಿದೆ. ಜಿಂಬಾಬ್ವೆಯಿಂದ ಮರಳಿದ್ದ 72 ವರ್ಷದ ವೃದ್ಧನಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ವ್ಯಕ್ತಿಯು ಗುಜರಾತ್ನ ಜಾಮ್ ನಗರದ ನಿವಾಸಿಯಾಗಿದ್ದಾರೆ. ಇವರಿಗೆ ಬುಧವಾರ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಪ್ರಯೋಗಾಲಯಕ್ಕೆ ವರದಿಯನ್ನು ಕಳುಹಿಸಿಕೊಡಲಾಗಿತ್ತು. ಸಾಕಷ್ಟು ಪರೀಕ್ಷೆಗಳ ಬಳಿಕ ಈ ವ್ಯಕ್ತಿಗೂ ಓಮಿಕ್ರಾನ್ ಇರುವುದು ದೃಢಪಟ್ಟಿದೆ.
Another individual infected by Omicron Covid-19 strain found; tally reaches 4
ಇದನ್ನು ಓದಿ : Omicron Meeting : ಓಮಿಕ್ರಾನ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ
ಇದನ್ನು ಓದಿ : Indian Navy Day 2021 : ಭಾರತೀಯ ನೌಕಾ ಸೇನಾ ದಿನಕ್ಕೆ 50 ವರ್ಷದ ಸಂಭ್ರಮ: ಇಲ್ಲಿದೆ ನೋಡಿ ನೌಕಾ ದಿನದ ಇತಿಹಾಸ ಹಾಗೂ ಮಹತ್ವ