Aresa Dankanaka : ಅರೇಸ ಡಂಕಣಕ ! ಬಿಡುಗಡೆಯಾಗಿದೆ ಪುನೀತ್ ರಾಜ್‌ಕುಮಾರ್ ಹಾಡಿರುವ ಹಾಡು ಕೇಳಿದ್ರಾ?

ಅಪ್ಪು ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ. ಅವರ ಸೇವೆ, ಅವರ ವರ್ತನೆ, ಅವರ ಚಿತ್ರಗಳಿಂದ ಕಾಡುತ್ತಿದ್ದವರು ಈಗ ಅವರ ಹಾಡಿನ ಮೂಲಕ ನೆನಪಾಗುತ್ತಿದ್ದಾರೆ. ಬಾಡಿಗಾಡ್ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾವುಕರಾಗಿದ್ದು ಮತ್ತದೇ ಅಪ್ಪುವಿನ ಕಾರಣಕ್ಕೆ. ಈ ಚಿತ್ರಕ್ಕೆ ಪುನೀತ್, ಅರೇಸ ಡಂಕಣಕ ( Aresa Dankanaka ) ಅನ್ನೋ ವಿಶೇಷ ಹಾಡನ್ನು(Puneeth Rajkumars New Song) ಹಾಡಿದ್ದಾರೆ. ಬಹಳ ಇಷ್ಟ ಪಟ್ಟು ಹಾಡಿದ ಹಾಡಂತೆ.

‘ನನಗೆ ಚಿತ್ರಕ್ಕೆ ಸಂಭಾವನೆ ಕೊಡುವುದು ಬೇಡ. ಆದರೆ,ಅಪ್ಪು ಅವರ ಹಾಡಿಗೆ ನಟಿಸುವ ಅವಕಾಶ ಕೊಡಿ. ಅದೇ ನನ್ನ ವೃತ್ತಿ ಜೀವನದ ಅತಿದೊಡ್ಡ ಸಂಭಾವನೆ ಅಂತ ಕೇಳಿದ್ದೆ. ಈ ಅವಕಾಶ ಸಿಕ್ಕಿದೆ ಅನ್ನೋ ಖುಷಿ ಇದೆ. ಆದರೆ, ಅಪ್ಪು ಸಾರ್ ಇಲ್ಲ ಅನ್ನೋ ಬೇಜಾರು ಜೊತೆಗಿದೆ’ ಎಂದು ಹಾಡಿನ ಬಗ್ಗೆ ಹೇಳುತ್ತಾ ಚಿತ್ರದ ನಾಯಕ ನಟ ಮನೋಜ್ ಕುಮಾರ್ ಭಾವುಕರಾಗುತ್ತಾರೆ. ಇಡೀ ಚಿತ್ರದ ಹೈಲೈಟ್ ಪುನೀತ್ ಅವರ ಹಾಡು. ಮನೋಜ್ ಕುಮಾರ್ ಅವರಿಗೆ ಈ ಚಿತ್ರ ಬದುಕಿನ ಬಹು ದೊಡ್ಡ ಬ್ರೇಕ್ ನೀಡಬಹುದು ಅನ್ನೋ ನಿರೀಕ್ಷೆ ಇದೆ.

ಪುನೀತ್ ಹಾಡಿರುವ ‘ಅರೇಸ ಡಂಕಣಕ’ ಹಾಡಿನ ಬಗ್ಗೆ ರಾಘಣ್ಣ ಹೇಳಿದ್ದು ಹೀಗೆ- ‘ಹಾಡು ಕೇಳಿದೆ. ಇದು ಹೇಗಿದೆ ಅಂದರೆ, ಆ ಹಾಡನ್ನು ಪುನೀತ್ ತನಗಾಗಿಯೇ ಹಾಡಿಕೊಂಡಿದ್ದಾನೆ ಅನಿಸತೊಡಗುತ್ತೆ. ಹಾಡಿನ ಎಷ್ಟೋ ಸಾಲುಗಳು ಅವನ ಬದುಕಿಗೂ ಕನಕ್ಟ್ ಆಗುತ್ತಾ ಹೋಗುತ್ತದೆ. ಅಪ್ಪಾಜಿ ಯಾವಾಗಲು ಹೇಳೋ ಒಂದು ಮಾತು ನೆನಪಿಗೆ ಬರುರ್ತಿದೆ. ಹುಟ್ಟಿದಾಗಲೂ ಸೂತಕ, ಸತ್ತಾಗಲೂ ಸೂತಕ ಮಧ್ಯೆ ನಮ್ಮದೆಲ್ಲಾ ಬರೀ ನಾಟಕ ಅಂಥ. ಇದು ನೂರಕ್ಕೆ ನೂರು ಸತ್ಯ. ಸಿನಿಮಾಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು. ಸಿನಿಮಾ ದೊಡ್ಡ ಸಮುದ್ರ ಇದ್ದಹಾಗೇ. ನಾವೆಲ್ಲ ಅದರಲ್ಲಿ ಈಜಾಡುವ ಮೀನುಗಳು ಅಂಥ ವಿವರಣೆ ಕೊಟ್ಟರು’ ರಾಘವೇಂದ್ರ ರಾಜ್‌ಕುಮಾರ್.

ವಿಶೇಷ ಅಂದರೆ,ಈ ಚಿತ್ರದಲ್ಲಿ ಮುದುಕ ಪಾತ್ರವನ್ನು ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮಾಡಿದ್ದಾರೆ. ಇದು ನಾಯಕ ನಟನಷ್ಟೇ ಚಿತ್ರಕ್ಕೆ ಪ್ರಮುಖವಾಗಿದೆಯಂತೆ.

ಪ್ರಭುಶ್ರೀನಿವಾಸ್ ಬಾಡಿಗಾಡ್ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ‘ಅಪ್ಪು ಅವರು ಈ ಹಾಡನ್ನು ಹಾಡಿ, ಇದು ಹೈ ಪಿಚ್ ಹಾಡು. ನಿಮಗೆ ಸರಿ ಅನಿಸಿದರೆ, ಚಿತ್ರಕ್ಕೆ ಹೊಂದಿಕೊಂಡರೆ ಮಾತ್ರ ಇಟ್ಟುಕೊಳ್ಳಿ. ಇಲ್ಲವಾದರೆ, ಬೇರೆಯವರಿಂದ ಹಾಡಿಸಿ ಅಂತ ಹೇಳಿದ್ದರು. ನಾವು ಇಲ್ಲ ಸಾರ್, ಚೆನ್ನಾಗಿದೆ. ಚಿತ್ರಕ್ಕೆ ನಿಮ್ಮ ದನಿ ಬೇಕೇ ಬೇಕು ಎಂದು ಹೇಳಿದ್ದೆ’ ಅಂತ ನೆನಪಿಸಿಕೊಳ್ಳುತ್ತಾರೆ ಪ್ರಭು. ಬಾಡಿಗಾಡ್ ಚಿತ್ರದ ನಾಯಕಿಯಾಗಿ ದೀಪಿಕಾ ಆರಾಧ್ಯ ನಟಿಸುತ್ತಿದ್ದಾರೆ.

ಇದನ್ನೂ ಓದಿ: GGVV: ಗರುಡ ಗಮನ, ವೃಷಭ ವಾಹನ : ಶತಮಾನಗಳ ಜಾನಪದ ಹಾಡಿನ ಸಾಂಸ್ಕೃತಿಕ ಮೌಲ್ಯವನ್ನು ಹಿಂಸೆಯ ಸಂಭ್ರಮಕ್ಕೆ ಬದಲಾಯಿಸುವುದು ಸರಿಯೆ?

Puneeth Rajkumars song by Bodygod Aresa Dankanaka released

Comments are closed.