ಸೋಮವಾರ, ಜೂನ್ 16, 2025
HomeCorona UpdatesBooster Dose For 60+: 60 ವರ್ಷ ಮೇಲ್ಪಟ್ಟವರ ಬೂಸ್ಟರ್​ ಡೋಸ್​ಗೆ ಬೇಕಿಲ್ಲ ವೈದ್ಯರ ಶಿಫಾರಸ್ಸು..!

Booster Dose For 60+: 60 ವರ್ಷ ಮೇಲ್ಪಟ್ಟವರ ಬೂಸ್ಟರ್​ ಡೋಸ್​ಗೆ ಬೇಕಿಲ್ಲ ವೈದ್ಯರ ಶಿಫಾರಸ್ಸು..!

- Advertisement -

Booster Dose For 60+:ದೇಶದಲ್ಲಿ ಕೋವಿಡ್​ 19 ಮೂರನೇ ಅಲೆಯ ಆತಂಕ ಹಾಗೂ ಓಮಿಕ್ರಾನ್​ ಭಯದ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನವರಿ ಮೂರರಿಂದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಲಿದೆ. ಜೊತೆಯಲ್ಲಿ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕತರು ಹಾಗೂ 60 ವರ್ಷ ಮೇಲ್ಪಟ್ಟ ಕಾಮೊರ್ಬಿಡಿಟಿ ಹೊಂದಿರುವವರಿಗೆ ಜನವರಿ 10ರಿಂದ ಕೇಂದ್ರ ಸರ್ಕಾರವು ಬೂಸ್ಟರ್ ಡೋಸ್​ ನೀಡಲಿದೆ. ಇಂದು ಕೇಂದ್ರ ಆರೋಗ್ಯ ಸಚಿವಾಲಯವು ಮತ್ತೆರಡು ಕೋವಿಡ್​ ಲಸಿಕೆ ಹಾಗೂ ಆ್ಯಂಟಿ ವೈರಲ್​ ಔಷಧಿಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ.


ಇದೀಗ ಬೂಸ್ಟರ್​ ಡೋಸ್​ ಪಡೆದುಕೊಳ್ಳಬೇಕಿದ್ದ ಕೊಮೊರ್ಬಿಡಿಟಿ ಹೊಂದಿರುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ರಿಲೀಫ್​ ನೀಡಿದೆ. ಈ ಹಿಂದೆ ಕೊಮೊರ್ಬಿಡಿಟಿ ವರದಿ ಕಡ್ಡಾಯ ಎಂದಿದ್ದ ಕೇಂದ್ರವು ಇದೀಗ ಈ ನಿಯಮದಲ್ಲಿ ಬದಲಾವಣೆ ಮಾಡಿದ್ದು 60 ವರ್ಷ ಮೇಲ್ಪಟ್ಟ ಕೊಮೊರ್ಬಿಡಿಟಿ ಹೊಂದಿರುವವರು ಹೆಚ್ಚಿನ ಅಪಾಯದ ವರ್ಗಕ್ಕೆ ಸೇರಿದವರಾದ್ದವರಿಂದ ಅವರು ಬೂಸ್ಟರ್​ ಶಾಟ್​ ಪಡೆಯಲು ವೈದ್ಯರ ಪ್ರಮಾಣ ಪತ್ರವನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಕಿಡ್ನಿ ಸಮಸ್ಯೆ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹದಂತಹ ಅನಾರೋಗ್ಯ ಹೊಂದಿರುವ 60 ವರ್ಷ ಮೇಲ್ಪಟ್ಟವರು ಜನವರಿ 10ರಿಂದ ಯಾವುದೇ ವೈದ್ಯರ ಶಿಫಾರಸಿನ ಅಗತ್ಯವಿಲ್ಲದೇ ಬೂಸ್ಟರ್​ ಶಾಟ್​ ಪಡೆಯಬಹುದಾಗಿದೆ.

ಈ ವಿಚಾರವಾಗಿ ಪ್ರಕಟಣೆ ಹೊರಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ,ಕೊಮೊರ್ಬಿಡಿಟಿಯನ್ನು ಸಾಬೀತು ಪಡಿಸಲು ವೈದ್ಯರಿಂದ ಯಾವುದೇ ಪ್ರಮಾಣ ಪತ್ರದ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್​ ಡೋಸ್​ ಸ್ವೀಕರಿಸುವ ಮುನ್ನ 60 ವರ್ಷ ಮೇಲ್ಪಟ್ಟವರು ಒಮ್ಮೆ ತಮ್ಮ ವೈದ್ಯರ ಸಲಹೆಯನ್ನು ಪಡೆಯವುದು ಉತ್ತಮ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಜನವರಿ 3ರಿಂದ ಲಸಿಕೆ ಹಾಕಿಸಿಕೊಳ್ಳುವ 15 ರಿಂದ 18 ವರ್ಷ ವಯಸ್ಸಿನವರು ಕೋವಿನ್​ ಅಪ್ಲಿಕೇಶನ್​ ಮೂಲಕ ಲಸಿಕೆ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ.

Booster Dose For 60+: Prescription Not Needed To Prove Comorbidity

ಇದನ್ನು ಓದಿ : Gujarat Gang Rape : ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ : ಅಪ್ರಾಪ್ತರು ಸೇರಿ 9 ಮಂದಿಯ ಬಂಧನ

ಇದನ್ನೂ ಓದಿ : Covid vaccines :ಕೋವಿಡ್​ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ: ಮತ್ತೆರಡು ಲಸಿಕೆಗಳಿಗೆ ಕೇಂದ್ರದಿಂದ ಅನುಮೋದನೆ

RELATED ARTICLES

Most Popular