ನವದೆಹಲಿ : ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಕೇಂದ್ರ ಸರಕಾರ ಕೊರೊನಾ ಲಸಿಕೆಯ ವಿಚಾರದಲ್ಲಿ ಕೇಂದ್ರ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ. ಕೊರೊನಾ ಲಸಿಕೆಗಾಗಿ ತಮ್ಮ ಹೆಸರನ್ನ ನೋಂದಾಯಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ಡಿಜಿಟಲ್ ಫ್ಲಾಟ್ಫಾರ್ಮ್ನ್ನು ಅಭಿವೃದ್ಧಿಪಡಿಸಿದೆ.
ಕೋವಿಡ್ ಡಿಜಿಟಲ್ ಫ್ಲಾಟ್ಫಾರ್ಮ್ ಲಸಿಕೆ ಡೇಟಾವನ್ನ ದಾಖಲು ಮಾಡಲು ಸಹಾಯ ಮಾಡಬಲ್ಲ ಮೊಬೈಲ್ ಅಪ್ಲಿಕೇಶನ್ನ್ನು ಹೊಂದಿದೆ. ಯಾರು ಲಸಿಕೆಯನ್ನು ಪಡೆಯಲು ಬಯಸುತ್ತಾರೋ ಅವರು ಈ ಅಪ್ಲಿಕೇಷನ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ.
ಕೋ ವಿಡ್ ಅಪ್ಲಿಕೇಶನ್ನಲ್ಲಿ ನಿರ್ವಾಹಕ ಮಾಡ್ಯೂಲ್, ನೋಂದಣಿ ಮಾಡ್ಯೂಲ್, ವ್ಯಾಕ್ಸಿನೇಷನ್ ಮಾಡ್ಯೂಲ್ , ಫಲಾನುಭವಿ ಸ್ವೀಕೃತಿ ಮಾಡ್ಯೂಲ್ ಹಾಗೂ ವರದಿ ಮಾಡ್ಯೂಲ್ ಎಂಬ ಐದು ವಿಭಾಗವಿದೆ . ಅಪ್ಲಿಕೇಷನ್ ಮೂಲಕ ಲಸಿಕೆಯನ್ನು ನೋಂದಾಯಿಸಿ ಕೊಳ್ಳಬಹು ದಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.