ಗ್ರಾಹಕರು ನಿಯಮ ಉಲ್ಲಂಘಿಸಿದ್ರೆ ಮಾಲೀಕರಿಗೆ ದಂಡ : ಕೊರೊನಾ ನಿಯಮಾವಳಿ ಪ್ರಕಟಿಸಿದ ರಾಜ್ಯ ಸರಕಾರ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಹಲವು ನಿಯಮಗಳನ್ನು ಈಗಾಗಲೇ ಜಾರಿಗೆ ತಂದಿದೆ. ಆದ್ರೀಗ ಕೆಲವೊಂದು ಕಡೆಗಳಲ್ಲಿ ಗ್ರಾಹಕರು ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡದೇ ಇದ್ರೆ ಮಾಲೀಕರಿಗೆ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ.

ರಾಜ್ಯದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಗುತ್ತಿದ್ರೆ, ವಾಹನ ಸವಾರರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಇದೀಗ ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಹೋಟೆಲ್, ಸಿನಿಮಾ ಮಂದಿರ, ಮಾಲ್, ಸೂಪರ್ ಮಾರ್ಕೆಟ್ ಸೇರಿದಂತೆ ಹಲವು ಸ್ಥಳಗಳಲ್ಲಿ ಗ್ರಾಹಕರು ಮಾಸ್ಕ ಧರಿಸದೇ ಇದ್ರೆ ಮಾಲೀಕರಿಗೆ ದಂಡ ವಿಧಿಸಲು ಸರಕಾರ ಮುಂದಾಗಿದೆ.

ಕೊರೊನಾ ನಿಯಮಗಳನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ ಹೊರಡಿಸಿದ್ದು, ಕರ್ನಾಟಕ ಪ್ಯಾಂಡಮಿಕ್ ಡಿಸೀಸೆಸ್ ( ತೃತೀಯ ಕಾಯ್ದೆ) ರೆಗ್ಯೂಲೇಷನ್ – 2020ರ ತಿದ್ದುಪಡಿ ಕಾಯ್ದೆಯಂತೆ, ಸಾರ್ವಜನಿಕರು ಹೆಚ್ಚು ಸೇರುವಂತ ಸ್ಥಳಗಳಾದ ಹೋಟೆಲ್, ಥಿಯೇಟರ್, ಮಾಲ್ ಮತ್ತು ಶಾಪ್ ಸೇರಿದಂತೆ ಇತರೆ ಅಂಗಡಿಗಳ ಮಾಲೀಕರಿಗೆ ಗ್ರಾಹಕರು ಮಾಸ್ಕ್ ಧರಿಸದೇ ಇದ್ದರೇ ದಂಡ ವಿಧಿಸಲಾಗುತ್ತದೆ ಎಂದು ಆದೇಶಿಸಿದ್ದಾರೆ. ಹೀಗಾಗಿ ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿಯನ್ನು ಸರಕಾರ ಇದೀಗ ಮಾಲೀಕರ ಹೆಗಲಿಗೆ ಹಾಕಿದೆ.

ಎಸಿ ಹೊಂದಿರದಂತ ಪಾರ್ಟಿ ಹಾಲ್, ಡಿಪಾರ್ಟ್ಮೆಂಟಲ್ ಸ್ಟೋರ್ ಗೆ ರೂ.5,000 ರೂಪಾಯಿ ದಂಡ, ಎಸಿ ಹೊಂದಿದಂತ ಪಾರ್ಟಿ ಹಾಲ್, ಡಿಪಾರ್ಟ್ಮೆಂಟಲ್ ಸ್ಟೋರ್, ಬ್ರಾಂಡೆಡ್ ಶಾಪ್ ( ಸಿಂಗಲ್ ಅಥವಾ ಮಲ್ಟಿಪಲ್), ಶಾಪಿಂಗ್ ಮಾಲ್ ಗೆ 10,000ರೂಪಾಯಿ, 3 ಸ್ಟಾರ್ ಹೋಟೆಲ್ ಮತ್ತು ಅದಕ್ಕಿಂತ ಹೆಚ್ಚಿನ ಸ್ಟಾರ್ ಹೋಟೆಲ್, 500 ಜನರ ಸೇರುವಂತ ಮದುವೆ ಅಥವಾ ಕನ್ವೆನ್ಷನರ್ ಹಾಲ್ ಮಾಲೀಕರಿಗೆ ರೂ.10,000ರೂಪಾಯಿ ದಂಡ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು, Rally ಅಥವಾ ಸಭೆ, ಸಂಭ್ರಮಾಚರಣೆ ಮಾಡುವಂತ ಮಾಲೀಕರಿಗೆ ರೂ.10,000 ರೂಪಾಯಿ ದಂಡವನ್ನು ನಿಗದಿ ಪಡಿಸಲಾಗಿದೆ.

Comments are closed.