ಭಾನುವಾರ, ಏಪ್ರಿಲ್ 27, 2025
HomeCorona Updatesಕೊರೊನಾ 3ನೇ ಅಲೆ : ರಾಜ್ಯದಲ್ಲಿ ಒಂದೂವರೆ ಲಕ್ಷ ಮಕ್ಕಳಿಗೆ ಸೋಂಕು : ಖ್ಯಾತ ವೈದ್ಯ...

ಕೊರೊನಾ 3ನೇ ಅಲೆ : ರಾಜ್ಯದಲ್ಲಿ ಒಂದೂವರೆ ಲಕ್ಷ ಮಕ್ಕಳಿಗೆ ಸೋಂಕು : ಖ್ಯಾತ ವೈದ್ಯ ಡಾ. ದೇವಿ ಶೆಟ್ಟಿ

- Advertisement -

ಬೆಂಗಳೂರು :  ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಎದುರಾಗಿದೆ. ರಾಜ್ಯದಲ್ಲಿ ಬರೋಬ್ಬರಿ ಒಂದುವರೆ ಲಕ್ಷ ಮಕ್ಕಳಿಗೆ ಕೊರೊನಾ ಸೋಂಕು ಬಾಧಿಸಲಿದೆ ಎಂದು ಖ್ಯಾತ ತಜ್ಞರಾದ ಡಾ.ದೇವಿ ಶೆಟ್ಟಿ ಅವರು ರಾಜ್ಯ ಸರಕಾರಕ್ಕೆ ವರದಿಯನ್ನು ನೀಡಿದ್ದಾರೆ‌.

ಕೊರೋನಾ ಸೋಂಕಿನ ಮೂರನೇ ಅಲೆಯ ಆತಂಕ‌ ಎಲ್ಲರನ್ನೂ ಕಾಡುತ್ತಿದೆ. ಒಂದೆಡೆ ಮೂರನೆ ಅಲೆ ಮಕ್ಕಳ ಮೇಲೆ  ಅಲೆಯ ಕುರಿತಂತೆ ತಜ್ಞರಲ್ಲೇ ಗೊಂದಲ ಇನ್ನೂ ಮುಂದುವರಿದಿದೆ. ಕೆಲವರ ಪ್ರಕಾರ ಮೂರನೇ ಅಲೆ ಮಕ್ಕಳಿಗೆ ದೊಡ್ಡ ಸಮಸ್ಯೆ ಮಾಡೋದಿಲ್ಲ ವಂತೆ. ಮತ್ತೆ ಕೆಲ ತಜ್ಞರು ಮೂರನೇ ಅಲೆ ಮಕ್ಕಳಿಗೆ ಅಪಾಯ ಅನ್ನುತ್ತಿದ್ದಾರೆ. 3ನೇ ಅಲೆಯ ಅಧ್ಯಯನ ಕುರಿತಂತೆ ರಾಜ್ಯ ಸರ್ಕಾರ ನೇಮಿಸಿರುವ ಡಾ. ದೇವಿ ಶೆಟ್ಟಿ ನೇತೃತ್ವದ ಸಮಿತಿ ಪ್ರಾಥಮಿಕ ವರದಿ ಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು, ರಾಜ್ಯದಲ್ಲಿ 1 ರಿಂದ 1.50 ಲಕ್ಷ ಮಕ್ಕಳಿಗೆ ಸೋಂಕು ತಗುಲಬಹುದು ಎಂದಿದೆ.

ಈ ಪೈಕಿ 50 ರಿಂದ 60 ಸಾವಿರ ಮಕ್ಕಳಲ್ಲಿ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳಬಹುದು. 5 ಸಾವಿರ ಮಕ್ಕಳಿಗೆ ತೀವ್ರ ನಿಗಾ ಘಚಕದ ಅವಶ್ಯಕತೆ ಬೀಳಬಹುದು. ಪ್ರತೀ ನಿತ್ಯ 500 ಮಕ್ಕಳು ಐಸಿಯುಗೆ ದಾಖಲಾಗಬಹುದು ಎಂದು ಅಂದಾಜಿಸಿದೆ. ಆದರೆ ಮೂರನೇ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಸೂಕ್ತ ಸಿದ್ದತೆ ನಡೆಸಿದರೆ ಇದರ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೂರನೇ ಅಲೆಯಲ್ಲಿ ವೈರಸ್ ಮಕ್ಕಳನ್ನೇ ಹುಡುಕಿಕೊಂಡು ಬರೋದಿಲ್ಲ. ಹಾಗಿದ್ದರೂ ಬಹುತೇಕ ವಯಸ್ಕರಿಗೆ ಲಸಿಕೆಯಾಗಿರು ತ್ತದೆ. ಲಸಿಕೆಯಾಗಿದೆ ಅನ್ನುವ ಕಾರಣಕ್ಕೆ ಅವರೆಲ್ಲಾ ಬೀದಿ ಬೀದಿ ಸುತ್ತುತ್ತಾರೆ. ಈ ವೇಳೆ ಲಸಿಕೆಯಾಗದ ಮಕ್ಕಳೇ ಟಾರ್ಗೆಟ್ ಆಗುವ ಸಾಧ್ಯತೆಗಳಿದೆ. ಇನ್ನು ಈ ಅಪಾಯವನ್ನು ಎದುರಿಸುವ ನಿಟ್ಟಿನಲ್ಲೂ ಸಮಿತಿ ಹಲವು ಗಂಭೀರ ಸಲಹೆಗಳನ್ನು ಕೊಟ್ಟಿದೆ.

ಕೋವಿಡ್ ತಾಂತ್ರಿಕ ಸಮಿತಿ ನೀಡಿರುವ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ರೆ, ಸಲಹೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದರೆ ಮೂರನೇ ಅಲೆ ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ. ಆದರೆ ಶಾಲಾರಂಭ, ಎಸ್ಎಸ್ಎಲ್ ಸಿ ಪರೀಕ್ಷೆ ಮಾಡಲೇ ಬೇಕೆಂಬ ಹಠಕ್ಕೆ ಬಿದ್ದಿರೋ ಶಿಕ್ಷಣ ಸಚಿವರು ಜೊತೆಗೆ  ಕುರ್ಚಿಯ ಆತಂಕದಲ್ಲಿರುವ ಮುಖ್ಯಮಂತ್ರಿಗಳು ಈ ಸಲಹೆಗಳನ್ನು ಗಂಭೀರವಾಗಿ ತೆಗೆದು ಕೊಳ್ಳುತ್ತಾರಾ ಅನ್ನೋದೇ ಎಲ್ಲರ ಮುಂದಿರುವ ಪ್ರಶ್ನೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular