ಬೆಂಗಳೂರು : ಮಹಾಮಾರಿ ಕೊರೊನಾ ಸೊಂಕಿನಿಂದ ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಅವಘಡ ನಡೆಯುತ್ತಲ್ಲೇ ಇರುತ್ತೆ. ಇದೀಗ ಸೋಂಕಿತ ವೃದ್ಧೆಯ ಶವವನ್ನ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಜನರ ಮಧ್ಯದಲ್ಲೇ ಸಾಗಾಟ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ರಾಮಕೃಷ್ಣ ಪಾಳ್ಯದ ಮಾಲಗಾಳ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಸುಮಾರು 60 ವರ್ಷದ ವೃದ್ಧೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ವೃದ್ಧೆ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಬಂದ ಆರೋಗ್ಯ ಸಿಬ್ಬಂದಿ ವೃದ್ಧೆಯ ಶವವನ್ನ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿಕೊಂಡು ತೆಗೆದುಕೊಂಡು ಹೋಗಿದ್ದಾರೆ.

ಇನ್ನು ಕೊರೊನಾ ಸೋಂಕಿತ ವೃದ್ಧೆಯ ಶವ ಸಾಗಿಸುವ ವೇಳೆ ಯಾವುದೇ ಮುಂಜಾಗೃತ ಕ್ರಮ ತೆಗೆದುಕೊಳ್ಳದೆ ಸಾಗಿಸಿದ್ದಾರೆ. ಸ್ಥಳೀಯರೊಬ್ಬರು ಈ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.