ಸೋಮವಾರ, ಜೂನ್ 16, 2025
HomeCorona Updates1 Cr Vaccination : ದೇಶದಲ್ಲಿಂದು ಬೃಹತ್‌ ಲಸಿಕಾ ಮೇಳ : ಕೊರೊನಾ ಲಸಿಕೆ ಪಡೆದ್ರು...

1 Cr Vaccination : ದೇಶದಲ್ಲಿಂದು ಬೃಹತ್‌ ಲಸಿಕಾ ಮೇಳ : ಕೊರೊನಾ ಲಸಿಕೆ ಪಡೆದ್ರು 1 ಕೋಟಿ ಜನ

- Advertisement -

ನವದೆಹಲಿ : ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿಂದು ದೇಶದಲ್ಲಿ ಬೃಹತ್‌ ಲಸಿಕೆ ಮೇಳ ಆಯೋಜಿಸಲಾಗಿದೆ. 1 ಕೋಟಿಗೂ ಅಧಿಕ ಮಂದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

ದೇಶದಲ್ಲಿ ಕಳೆದು ಹಲವು ತಿಂಗಳಿನಿಂದಲೂ ಕೊರೊನಾ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಜನರು ಹುಮ್ಮಸ್ಸಿನಿಂದಲೇ ಲಸಿಕೆಯನ್ನು ಪಡೆಯುತ್ತಿದ್ದಾರೆ. ಇಂದು ನಡೆದ ಬೃಹತ್‌ ಲಸಿಕೆ ಮೇಳಕ್ಕೆ ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮಧ್ಯಾಹ್ನದ ವೇಳೆಗೆ ಬರೋಬ್ಬರಿ 1 ಕೋಟಿಗೂ ಅಧಿಕ ಜನರು ಲಸಿಕೆಯನ್ನು ಪಡೆದಿದ್ದಾರೆ ಎಂದು ಪಿಐಬಿ ಟ್ವೀಟ್‌ ಮಾಡಿದೆ.

ದೇಶದಲ್ಲಿಂದು ಎರಡು ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ಸಂಜೆಯ ವೇಳೆಗೆ ಈ ಸಂಖ್ಯೆ ಎರಡು ಕೋಟಿ ದಾಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ದೇಶದ ಜನರು ಕೊರೊನಾ ಸೋಂಕಿನ ವಿರುದ್ದದ ಹೋರಾಟಕ್ಕೆ ಉತ್ತಮವಾಗಿಯೇ ಸ್ಪಂಧಿಸುತ್ತಿದ್ದಾರೆ.

ಇದನ್ನೂ ಓದಿ : ಸಂಪೂರ್ಣ ಲಸಿಕೆ ಪಡೆದ ದೇಶದ ಮೊದಲ ಜಿಲ್ಲೆ ಯಾವುದು ಗೊತ್ತಾ ?

ಇದನ್ನೂ ಓದಿ : ನಿಫಾ ವೈರಸ್ ಲಕ್ಷಣಗಳು ಹೇಗಿರುತ್ತೆ ಗೊತ್ತಾ?

(1 crore people vaccinated Today in India and vaccination drive )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular