Nitin Gadkari: ಯೂಟ್ಯೂಬ್ ನಿಂದ ತಿಂಗಳಿಗೆ ನಾಲ್ಕು ಲಕ್ಷ ಆದಾಯ ಪಡೀತಾರಂತೆ ಸೆಂಟ್ರಲ್ ಮಿನಿಸ್ಟರ್ ನಿತಿನ್ ಗಡ್ಕರಿ

ಕೊರೋನಾ ಸಂಕಷ್ಟದಲ್ಲಿ ಜನರು ತಮ್ಮ ಇಷ್ಟದ ಕೆಲಸಗಳಲ್ಲಿ ತೊಡಗಿಸಿಕೊಂಡು ಸದ್ಭಳಕೆ ಮಾಡಿಕೊಂಡಿರೋ ಉದಾಹರಣೆ ಬೇಕಷ್ಟಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರ್ ಕೂಡ ಇಂತಹುದೇ ಪ್ರಯತ್ನವೊಂದನ್ನು ಮಾಡಿದ್ದು, ಈಗ ಪ್ರತಿ ತಿಂಗಳು ಯೂಟ್ಯೂಬ್ ನಿಂದ ನಾಲ್ಕು ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾರಂತೆ.

ಹರ್ಯಾಣಾದಲ್ಲಿ ನಡೆದ ರಸ್ತೆ ಕಾಮಗಾರಿ ಪರಿಶೀಲನೆ ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ನಿತಿನ್ ಗಡ್ಕರಿ ಹಲವು ಇಂಟ್ರಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ನಾನು ಎರಡು ಕೆಲಸ ಮಾಡಿದೆ ಎಂದಿರುವ ನಿತಿನ್ ಗಡ್ಕರಿ. ಒಂದು ಅಡುಗೆ ಮಾಡಲು ಆರಂಭಿಸಿದೆ. ಇನ್ನೊಂದು ಆಯ್ಕ ವಿಷಯಗಳ ಬಗ್ಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ಉಪನ್ಯಾಸ ನೀಡಲು ಆರಂಭಿಸಿದೆ.

ಈ ಉಪನ್ಯಾಸಗಳನ್ನು ಯೂ ಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿತ್ತು. ಹೀಗೆ ಅಪ್ಲೋಡ್ ಆಗಿರೋ ವಿಡಿಯೋಗಳಿಗೆ ಉತ್ತಮ ವೀಕ್ಷಣೆ ದೊರೆಕಿರೋದರಿಂದ ಈಗ ಪ್ರತಿತಿಂಗಳು ಯೂ ಟ್ಯೂಬ್ ನನಗೆ 4 ಲಕ್ಷ ರೂಪಾಯಿ ಹಣ ಪಾವತಿಸುತ್ತಿದೆ ಎಂಬ ಸಂಗತಿ ಹೇಳಿಕೊಂಡಿದ್ದಾರೆ.

ಮಾತ್ರವಲ್ಲ ತಾವೊಮ್ಮೆ ಹಿಂದೊಮ್ಮೆ ಮಾವನ ಮನೆಯನ್ನೇ ನೆಲಸಮ ಮಾಡಲು ಆದೇಶ ನೀಡಿ ಹೆಂಡತಿಯ ಕೆಂಗಣ್ಣಿಗೆ ಗುರಿಯಾಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಮದುವೆಯಾದ ಹೊಸತರಲ್ಲಿ ರಸ್ತೆ ಮಧ್ಯದಲ್ಲೇ ಇದ್ದ ಪತ್ನಿಯ ತಂದೆ ಮನೆಯನ್ನು ಪತ್ನಿಗೆ ಗೊತ್ತಿಲ್ಲದೇ ನೆಲಸಮ ಮಾಡಲು ನಾನು ಆದೇಶ ನೀಡಿದ್ದೆ ಎಂದಿದ್ದಾರೆ.

95 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೆಹಲಿ-ಮುಂಬೈ ಎಕ್ಸಪ್ರೆಸ್ ಹೈವೆ ಕಾಮಗಾರಿ ಪರಿಶೀಲನೆ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಈ ವಿಚಾರಗಳನ್ನು ಹಂಚಿಕೊಂಡಿದ್ದು, ವೇದಿಕೆಯಲ್ಲಿ ಹರಿಯಾಣಾ ಸಿಎಂ ಮನೋಹರ್ ಲಾಲ್ ಕಟ್ಟರ್, ಸಂಸದ  ರಾವ್ ಇಂದ್ರಜಿತ್ ಸಿಂಗ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

YouTube pays me Rs 4 lakh/month’-nitin gadkari

Comments are closed.