ಭಾನುವಾರ, ಏಪ್ರಿಲ್ 27, 2025
HomeCoastal NewsCorona positive in udupi: ಶುರುವಾಯ್ತು ಕೊರೊನಾ ಆತಂಕ: ವಿದೇಶದಿಂದ ಬಂದಿದ್ದ ಉಡುಪಿಯ ವ್ಯಕ್ತಿಗೆ ಕೊರೊನಾ...

Corona positive in udupi: ಶುರುವಾಯ್ತು ಕೊರೊನಾ ಆತಂಕ: ವಿದೇಶದಿಂದ ಬಂದಿದ್ದ ಉಡುಪಿಯ ವ್ಯಕ್ತಿಗೆ ಕೊರೊನಾ ಸೋಂಕು ದೃಢ

- Advertisement -

ಉಡುಪಿ: (Corona positive in udupi) ವಿದೇಶದಲ್ಲಿ ಕೊರೊನಾ ಆತಂಕ ಹೆಚ್ಚಾದ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರಗಳನ್ನು ವಹಿಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಶುರುವಾದ ಕೊರೊನಾ ಭೀತಿ ಇದೀಗ ಕರಾವಳಿಯಲ್ಲೂ ಆರಂಭವಾಗಿದೆ. ಉಡುಪಿ ಮೂಲದ ವಿದೇಶಿ ಪ್ರಯಾಣಿಕನೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಉಡುಪಿ ಮೂಲದ ವಿದೇಶಿ ಪ್ರಯಾಣಿಕನೋರ್ವನಿಗೆ ಕೊರೊನಾ ಸೋಂಕು ದೃಢ (Corona positive in udupi) ಪಟ್ಟಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಬರುತ್ತಿರುವ ಪ್ರಯಾಣಿಕರ ಮೇಲೆ ನಿಗಾ ಇರಿಸಿದ್ದು, ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಿದೇಶದಿಂದ ಬಂದಿದ್ದ ಪ್ರಯಾಣಿಕರ ಪರೀಕ್ಷೆ ನಡೆಸುವ ವೇಳೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬಂದಿದ್ದ ಉಡುಪಿ ಮೂಲದ ಪ್ರಯಾಣಿಕನಿಗೆ ಸೋಂಕು ಇರುವುದು ದೃಢಪಟ್ಟಿದೆ.

ಇದೀಗ ಆತನ ಗಂಟಲು ದ್ರವವನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆಂದು ಕಳುಹಿಸಿಕೊಡಲಾಗಿದೆ. ಸೋಂಕು ದೃಢಪಟ್ಟ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಐಸೋಲೇಷನ್‌ ನಲ್ಲಿ ಇರಿಸಲಾಗಿದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಿಟ್ಟರೆ ವಿದೇಶದಿಂದ ಅತೀ ಹೆಚ್ಚು ಪ್ರಯಾಣಿಕರು ಬಂದಿಳಿಯುವುದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ. ಇದೀಗ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ತೀವ್ರ ಕಟ್ಟೆಚ್ಚರವನ್ನು ವಹಿಸಲಾಗಿದೆ.

ಇದನ್ನೂ ಓದಿ : Bangalore Corona: ಬೆಂಗಳೂರಿನಲ್ಲಿ ವಿದೇಶಿಗರಿಂದ ಹೆಚ್ಚಿದ ಕೊರೋನಾತಂಕ; ದೇವಾಲಯಗಳಿಗೆ ಟಫ್ ರೂಲ್ಸ್; ಆಸ್ಪತ್ರೆಗಳಲ್ಲಿ ಇಂದಿನಿಂದ ಮಾಕ್ ಡ್ರಿಲ್..!

ಇದನ್ನೂ ಓದಿ : Corona positive case: ಬೆಂಗಳೂರು ಏರ್ ಪೋರ್ಟ್‌ ನಲ್ಲಿ ಹೈ ಅಲರ್ಟ್:‌ ಪತ್ತೆಯಾಯ್ತು ನಾಲ್ಕು ಪ್ರಕರಣಗಳು

ಇದನ್ನೂ ಓದಿ : Covid Positive case: ಬೆಂಗಳೂರಿಗೆ 2,867 ವಿದೇಶಿ ಪ್ರಯಾಣಿಕರ ಆಗಮನ: 12 ಮಂದಿಗೆ ಕೋವಿಡ್‌ ಸೋಂಕು ದೃಢ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇದುವರೆಗೆ 19 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದೆ. ಈಗಾಗಲೇ ನಾಡಿನ ಜನತೆ ಕೊರೊನಾ ಆತಂಕದಲ್ಲಿದ್ದು, ಉಡುಪಿಯಲ್ಲಿ ಕೊರನಾ ಸೋಂಕು ದೃಢಪಟ್ಟಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

The Corona scare that started in Bangalore has now started on the coast as well. A foreign traveler from Udupi has been diagnosed with corona virus.

RELATED ARTICLES

Most Popular