Bangalore Corona: ಬೆಂಗಳೂರಿನಲ್ಲಿ ವಿದೇಶಿಗರಿಂದ ಹೆಚ್ಚಿದ ಕೊರೋನಾತಂಕ; ದೇವಾಲಯಗಳಿಗೆ ಟಫ್ ರೂಲ್ಸ್; ಆಸ್ಪತ್ರೆಗಳಲ್ಲಿ ಇಂದಿನಿಂದ ಮಾಕ್ ಡ್ರಿಲ್..!

ಬೆಂಗಳೂರು: Bangalore Corona: ರಾಜ್ಯ ರಾಜಧಾನಿಯಲ್ಲಿ ವಿದೇಶಿಗರ ಆಗಮನದಿಂದ ಕೊರೋನಾತಂಕ ಹೆಚ್ಚಿದೆ. ವಿದೇಶದಿಂದ ಬಂದಿದ್ದ ನಾಲ್ವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ನಿನ್ನೆ ವಿದೇಶದಿಂದ ಬಂದಿದ್ದ 119 ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ಮಾಡಲಾಗಿತ್ತು. ಈ ಪೈಕಿ ನಾಲ್ವರಲ್ಲಿ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಈ ಮೂಲಕ ವಿದೇಶದಿಂದ ಮರಳಿದ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಸದ್ಯ ರಾಜ್ಯದಲ್ಲಿ ಕೊರೋನಾ ಕರಿನೆರಳು ಆವರಿಸಿಕೊಂಡಿದೆ. ಇದರ ಬಿಸಿ ದೇವಸ್ಥಾನಗಳಿಗೂ ತಟ್ಟಿದ್ದು, ಇನ್ನಷ್ಟು ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಈ ಬಾರಿಯ ಹೊಸ ವರ್ಷಾಚರಣೆಗೆ ಮಾತ್ರವಲ್ಲದೇ ವೈಕುಂಠ ಏಕಾದಶಿ, ಸಂಕ್ರಾಂತಿ ಸಂಭ್ರಮದ ಮೇಲೂ ಕೊರೋನಾ ಪ್ರಭಾವ ಬೀರಿದೆ. ಹೀಗಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನಸಂದಣಿ ಸೇರುವುದನ್ನು ತಪ್ಪಿಸುವ ಸಲುವಾಗಿ ಕೆಲ ನಿಯಮಗಳನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Corona positive case: ಬೆಂಗಳೂರು ಏರ್ ಪೋರ್ಟ್‌ ನಲ್ಲಿ ಹೈ ಅಲರ್ಟ್:‌ ಪತ್ತೆಯಾಯ್ತು ನಾಲ್ಕು ಪ್ರಕರಣಗಳು

  • ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮಾಸ್ಕ್ ಕಡ್ಡಾಯ.
  • ದೇವಸ್ಥಾನಗಳ ಪ್ರವೇಶ ದ್ವಾರಗಳಲ್ಲಿ ಇಡಲಾಗುವ ಸ್ಯಾನಿಟೈಸರ್ ಹಚ್ಚಿಕೊಂಡು ಒಳಬರತಕ್ಕದ್ದು.
  • ಜನಜಂಗುಳಿ ತಡೆಯಲು ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು.

ಆಸ್ಪತ್ರೆಗಳಲ್ಲಿ ಇಂದಿನಿಂದ ಮಾಕ್ ಡ್ರಿಲ್


ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರ ತಳಿ BF.7 ಭೀತಿ ಹಿನ್ನೆಲೆ ಇದನ್ನು ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಇಂದಿನಿಂದ ಬೆಂಗಳೂರು ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಬೌರಿಂಗ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ, ಸಿ.ವಿ ರಾಮನ್ ನಗರ ಆಸ್ಪತ್ರೆ, ಈಎಸ್ ಐ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಬೆಡ್ ಗಳ ವ್ಯವಸ್ಥೆ, ಆಕ್ಸಿಜನ್ ಪೂರೈಕೆ, ಔಷಧಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ. ಆಕ್ಸಿಜನ್ ಪ್ಲಾಂಟ್ ಗಳಲ್ಲಿ ಡ್ರೈರನ್ ಮಾಡಲಾಗುತ್ತಿದೆ.

ಇದನ್ನೂ ಓದಿ: Mother Dairy price hike : ಇಂದಿನಿಂದ ಹಾಲಿನ ದರ ಲೀಟರ್‌ 2 ರೂ. ಹೆಚ್ಚಳ : ಗ್ರಾಹಕರಿಗೆ ಮತ್ತೆ ಬರೆ

Bangalore Corona: Increased risk of corona from foreigners in Bangalore; Tough Rules for Temples; Mock drill in hospitals from today

Comments are closed.