Corona tough rules: ಕೊರೊನಾ ಆತಂಕ: ಕೆಂಪೇಗೌಡ ಏರ್‌ ಪೋರ್ಟ್‌ ನಲ್ಲಿ ತೀವ್ರ ತಪಾಸಣೆ

ಬೆಂಗಳೂರು: (Corona tough rules) ವಿದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾದ ಹಿನ್ನಲೆಯಲ್ಲಿ ಈಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರನ್ನು ತೀವ್ರವಾಗಿ ತಪಾಸಣೆ ನಡೆಸಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲಾ ರೀತಿಯ ತುರ್ತು ಸೌಲಭ್ಯಗಳನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಒದಗಿಸಲಾಗಿದೆ. ವಿದೇಶಗಳಲ್ಲಿ ಕೊರೊನಾ ಹೆಚ್ಚಾದ ಹಿನ್ನಲೆಯಲ್ಲಿ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಜೊತೆಗೆ ಹೊಸ ಆದೇಶಗಳನ್ನು ಕೂಡ ಕೆಂಪೇಗೌಡ ಏರ್‌ ಪೋರ್ಟ್‌ ನಲ್ಲಿ ಜಾರಿ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದೀಗ ವಿದೇಶದಿಂದ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.

ವಿದೇಶದಿಂದ ಬರುವ ಪ್ರಯಾಣಿಕರಿಗೆ ಶೇಕಡಾ ಎರಡರಷ್ಟು ಪ್ರಯಾಣಿಕರ ಯಾದೃಚ್ಛಿಕ ಪರೀಕ್ಷೆ (Corona tough rules) ಜೊತೆಗೆ ಯಾರಿಗೆ ಕೊರೊನಾ ಲಕ್ಷಣಗಳು ಇರುತ್ತವೆಯೋ ಅಂತವರನ್ನು ಕೂಡ ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯುವಂತಹ ಕಾರ್ಯವನ್ನ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಏರ್‌ ಪೋರ್ಟ್‌ ನಲ್ಲಿ ಸಿಬ್ಬಂಧಿಗಳನ್ನು ಹೆಚ್ಚಿಸಿದ್ದು, ವಿದೇಶಿ ಪ್ರಯಾಣಿಕರನ್ನು ಸ್ಕ್ರೀನೀಂಗ್‌ ಮಾಡಲು ಹಾಗೂ ಪರೀಕ್ಷೆ ಮಾಡಲು ಇಬ್ಬರು ವೈದ್ಯರು ಹಾಗೂ ಎಂಟು ಮಂದಿ ಆರೋಗ್ಯ ನಿರೀಕ್ಷರನ್ನು, ಡಾಟಾ ಎಂಟ್ರಿ ಆಪರೇಟರ್‌ ಗಳು ಸೇರಿದಂತೆ ಅನೇಕ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಪ್ರತಿಯೊಬ್ಬರ ಮೇಲೂ ಕೂಡ ನಿಗಾ ವಹಿಸಲೂ ಒಂದಷ್ಟು ತಂಡಗಳನ್ನು ರಚಿಸಿ ಕಾರ್ಯ ನಿರ್ವಹಣೆಗೆ ರೂಪಿಸಲಾಗಿದೆ.

ಹಾಗೇ ಸೋಂಕಿತರನ್ನು ಕರೆದೊಯ್ಯಲು ಕೆಂಪೇಗೌಡ ಏರ್‌ ಪೋರ್ಟ್‌ ನಲ್ಲಿ ಎರಡು ವಿಶೇಷವಾದ ಆಂಬ್ಯುಲೆನ್ಸ್‌ ಗಳನ್ನು ಕೂಡ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಯಾರಾದರೂ ಸೋಂಕಿತ ಪ್ರಯಾಣಿಕರು ನಮಗೆ ಸರಕಾರಿ ಆಸ್ಪತ್ರೆ ಬೇಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೇವೆ ಎಂದಾದಲ್ಲಿ ಅದಕ್ಕೂ ಕೂಡ ಅವಕಾಶ ಮಾಡಿಕೊಡಲಾಗಿದೆ. ಇದೀಗ ಕೊರೊನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಅಧಿಕಾರಿಗಳು ಹೈ ಅಲರ್ಟ್‌ ಆಗಿದ್ದು, ಕೊರೊನಾ ನಿಯಂತ್ರಣಕ್ಕೆ ಕೆಂಪೇಗೌಡ ಏರ್‌ ಪೋರ್ಟ್‌ ನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ.

ಇದನ್ನೂ ಓದಿ : Restriction for surya rashmi: ಕೊರೊನಾ ಆತಂಕದ ಹಿನ್ನಲೆ: ಸೂರ್ಯರಶ್ಮಿ ಗೋಚರಕ್ಕೆ ಭಕ್ತರಿಗೆ ನಿರ್ಬಂಧ

ಇದನ್ನೂ ಓದಿ : Udupi mask compulsory: ಉಡುಪಿಯ ಚಿತ್ರಮಂದಿರ, ಮಾಲ್‌ ಹೋಟೆಲ್‌ ಗಳಲ್ಲಿ ಮಾಸ್ಕ್‌ ಕಡ್ಡಾಯ

In the background of the increase of Corona in foreign countries, more monitoring has been done on travelers coming from abroad. Besides, new orders have also been implemented at Kempegowda Airport.

Comments are closed.